By Village Missionary Movement
Monday, 19-Feb-2024ಧೈನಂದಿನ ಧ್ಯಾನ(Kannada) – 19.02.2024
ಸ್ವೀಕರಿಸುವ ತಂದೆ
"ನೀವು ಈ ಸ್ಥಳಕ್ಕೆ ಸೇರಿದ ಪರ್ಯಂತರವೂ ನಿಮ್ಮ ಪ್ರಯಾಣದಲ್ಲೆಲ್ಲಾ ಮಗನನ್ನು ತಂದೆ ಹೇಗೋ ಹಾಗೆಯೇ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಹೊತ್ತನಲ್ಲವೇ…" - ಧರ್ಮೋಪದೇಶಕಾಂಡ 1:31
ರೇಖಾ ಮತ್ತು ಅವಳ ತಾಯಿ ಒಂದು ಹಳ್ಳಿಯಲ್ಲಿ ವಾಸಿಸುತ್ತಿದ್ದರು. ಅಲ್ಲಿ 6ನೇ ತರಗತಿ ಓದಲು ಸಾಧ್ಯವಿಲ್ಲ. ಹೀಗಾಗಿ ಆಕೆಯನ್ನು ಹಾಸ್ಟೆಲ್‌ಗೆ ಸೇರಿಸಿದರು. ಅಲ್ಲಿಗೆ ಹೋಗಿ ಓದತೊಡಗಿದಾಗ ಅಲ್ಲಿಯ ಗೆಳೆಯರ ಜೊತೆ ಸೇರಿಕೊಂಡಳು. ಅವಳ ಜೀವನಶೈಲಿ ಬದಲಾಯಿತು. ಅವಳು ತನ್ನ ಬಡ ತಾಯಿಯನ್ನು ತಿರಸ್ಕರಿಸಿದಳು. ಪ್ರತಿ ತಿಂಗಳು ಹಾಸ್ಟೆಲ್ ಗೆ ಬರಬೇಡ, ಯಾರ ಬಳಿಯಾದರೂ ಹಣಕೊಟ್ಟು ಕಳುಹಿಸು ಎಂದು ತಾಯಿಯನ್ನು ಕಡೆಗಣಿಸಿದಳು. ರಜೆ ದಿನಗಳಲ್ಲಿಯೂ ಸಹ ಸ್ನೇಹಿತರ ಮನೆಗೆ ಹೋಗಿಬಿಡುತ್ತಿದ್ದಳು, ಇಲ್ಲದಿದ್ದರೆ ಹಾಸ್ಟೆಲ್‌ನಲ್ಲಿ ಇರುತ್ತಿದ್ದಳು. ಹೀಗೆ ವರ್ಷಗಳು ಕಳೆದವು. 10ನೇ ತರಗತಿ ಪರೀಕ್ಷೆ ಬಂತು. ಚರ್ಮದ ಅಲರ್ಜಿಯಿಂದ ಅವಳ ದೇಹದಾದ್ಯಂತ ತುರಿಕೆ ಮತ್ತು ಹುಣ್ಣಾಯಿತು. ಅವಳ ಸ್ನೇಹಿತರೆಲ್ಲರೂ ಅವಳೊಂದಿಗೆ ಇರುವುದನ್ನು ನಿರಾಕರಿಸಿದರು. ಹಾಸ್ಟೆಲ್ ನಿಂದ ಹೊರಗೆ ಹೋಗು ಎಂದು ಹೇಳಿದರು. ಅವರು ತನ್ನ ತಾಯಿಗೆ ಸುದ್ದಿ ಕಳುಹಿಸಿದರು. ರೇಖಾಳ ತಾಯಿ ಬರುವುದು ತಡವಾಯಿತು, ರೇಖಾ ಯೋಚಿಸಿದಳು, "ಅಮ್ಮ ಬರುವುದಿಲ್ಲ; ನಾನು 7 ನೇ ತರಗತಿಯಿಂದ ಮನೆಗೆ ಹೋಗುತ್ತಿಲ್ಲ, ಆದ್ದರಿಂದ ನನ್ನ ತಾಯಿ ಮರೆತಿರಬೇಕು, ನನ್ನ ಅನಾರೋಗ್ಯದ ನಿಮಿತ್ತವಾಗಿ ನನ್ನನ್ನು ಯಾರೂ ಸ್ವೀಕರಿಸುವುದಿಲ್ಲ" ಎಂದು ಭಾವಿಸಿದಳು. ಆದರೆ ತಾಯಿ ಪ್ರೀತಿಯಿಂದ ಬಂದು ರೇಖಾಳನ್ನು ಆಸ್ಪತ್ರೆಗೆ ಕರೆದೊಯ್ದು ತೋರಿಸಿ ಕಾಳಜಿಯಿಂದ ನೋಡಿಕೊಂಡರು.
ಹಾಗೆಯೇ ಸತ್ಯವೇದದಲ್ಲಿ, ಕಿರಿಯ ಮಗ ತನ್ನ ತಂದೆಯಿಂದ ದೂರ ಹೋಗಿ ತನ್ನ ಹಣವನ್ನೆಲ್ಲಾ ಖರ್ಚು ಮಾಡಿಬಿಟ್ಟು ಹಂದಿ ಮೇಯಿಸುವ ಕೆಲಸಕ್ಕೆ ಸೇರಿ ಸರಿಯಾದ ಆಹಾರವೂ ಸಿಗದೆ, ಸರಿಯಾದ ಬಟ್ಟೆಯಿಲ್ಲದೆ ತನ್ನ ತಂದೆಯ ಬಳಿ ಕೊಳಕಾಗಿ ಹಿಂತಿರುಗಿ ಬಂದಾಗ, ತಂದೆ ಓಡಿಹೋಗಿ ಅವನ ಕೊರಳಪಟ್ಟಿಯನ್ನು ಹಿಡಿದು ಅಪ್ಪಿಕೊಂಡರು. ಮಗನಾಗಿ ಸ್ವೀಕರಿಸಿದರು. ಔತಣವನ್ನು ಏರ್ಪಡಿಸಿದರು. ಅದರಂತೆಯೇ, ನಾವು ಎಷ್ಟೇ ತಪ್ಪು ಮಾಡಿದ್ದರೂ, ಎಷ್ಟೇ ಪಾಪಗಳನ್ನು ಮಾಡಿದ್ದರೂ, ನಾವು ದೇವರ ಬಳಿಗೆ ಬಂದು ಕ್ಷಮೆಯನ್ನು ಕೇಳುವಾಗ, ದೇವರು ನಮ್ಮನ್ನು ಸ್ವೀಕರಿಸಲು ಕಾತುರದಿಂದ ಕಾಯುತ್ತಿದ್ದಾರೆ. ನಾವು ಅವರ ಬಳಿಗೆ ಹಿಂತಿರುಗಿದಾಗ, ಅವರು ನಮ್ಮನ್ನು ಅಪ್ಪಿಕೊಳ್ಳುತ್ತಾರೆ. ಆದ್ದರಿಂದ ಇಂದೇ ಅವರ ಕಡೆಗೆ ತಿರುಗಿಕೊಳ್ಳಿರಿ. ನೀವು ಯಾವ ಪರಿಸ್ಥಿತಿಯಲ್ಲಿದ್ದರೂ ನಿಮ್ಮನ್ನು ಸ್ವೀಕರಿಸಲು ಆತನು ಸಿದ್ಧವಾಗಿದ್ದಾರೆ. ಇರುವ ಸ್ಥಿತಿಯಲ್ಲೇ ಬನ್ನಿ.
ಇದನ್ನು ಓದುತ್ತಿರುವ ಪ್ರಿಯರೇ ನಾನು ಎಲ್ಲಿಗೆ ಹೋಗಲಿ? ನನ್ನನ್ನು ಯಾರು ಸ್ವೀಕರಿಸುತ್ತಾರೆ? ಎಲ್ಲಿ ನೋಡಿದರೂ ಸಂಕಟ ಮತ್ತು ದುಃಖ ಏನು ಮಾಡಬೇಕೋ ತಿಳಿಯುತ್ತಿಲ್ಲ ಎಂದು ಭಾವಿಸುತ್ತಿದ್ದೀರಾ? ಯೇಸುವಿನ ಬಳಿಗೆ ಬನ್ನಿರಿ. ಅವರು ನಿನ್ನನ್ನು ತನ್ನ ಮಗುವಿನಂತೆ ಸ್ವೀಕರಿಸಲು ಮತ್ತು ನಿನ್ನನ್ನು ತನ್ನ ಹೆಗಲ ಮೇಲೆ ಹೊತ್ತು ಕಾಪಾಡಲು ಸಿದ್ಧವಾಗಿದ್ದಾರೆ. ಕರ್ತನಾದ ಯೇಸು ಕ್ರಿಸ್ತನ ಬಳಿಗೆ ಬಂದು ಆಶೀರ್ವಾದವನ್ನು ಪಡೆಯಿರಿ.
- Bro. ಮುರಳಿ ಗಿದ್ಯೋನ್
ಪ್ರಾರ್ಥನಾ ಅಂಶ:
ಸಹಸೇವಕರ ಸಭೆಗಳು ಕಟ್ಟಲ್ಪಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482