Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 23.02.2024
Share:

By Village Missionary Movement

Friday, 23-Feb-2024

ಧೈನಂದಿನ ಧ್ಯಾನ(Kannada) – 23.02.2024

 

ಭದ್ರತೆ ಯಾರು?

 

"ಯಾವನಿಗೆ ಯಾಕೋಬನ ದೇವರು ಸಹಾಯಕನೋ ಯಾವನು ತನ್ನ ದೇವರಾದ ಯೆಹೋವನನ್ನು ನಂಬಿರುತ್ತಾನೋ ಅವನೇ ಧನ್ಯನು" - ಕೀರ್ತನೆ 146:5

 

ಈ 2024 ನೇ ವರ್ಷದ ಎರಡನೇ ತಿಂಗಳಿಗೆ ಕಾಲಿಟ್ಟ ನಮಗೆ ಈ ವಾಕ್ಯ ಒಂದು ನಂಬಿಕೆ ಹುಟ್ಟಿಸುತ್ತಿದೆ ಅಲ್ಲವೇ? ನಾವು ಕರ್ತನಾದ ದೇವರನ್ನು ನಂಬಿದಾಗ ಆತನು ನಮ್ಮನ್ನು ಸರಿಯಾದ ಮಾರ್ಗದಲ್ಲಿ ನಡೆಸುತ್ತಾರೆ. ಅವರು ನಮ್ಮನ್ನು ಕೇಡಿನಿಂದ ತಪ್ಪಿಸಿ ರಕ್ಷಿಸುತ್ತಾರೆ. "ವಿಪತ್ತಿಗೂ ಹಾನಿಕರವಾದ ಕೇಡಿಗೂ ತಪ್ಪಿಸುತ್ತಾರೆ. "ನಿನ್ನ ಮಗ್ಗುಲಲ್ಲಿ ಸಾವಿರ ಜನರು, ನಿನ್ನ ಬಲಗಡೆಯಲ್ಲಿ ಹತ್ತುಸಾವಿರ ಜನರು ಸತ್ತುಬಿದ್ದರೂ ನಿನಗೇನೂ ತಟ್ಟದು." "ಯಾವ ಕೇಡೂ ನಿನಗೆ ಸಂಭವಿಸದು; ಉಪದ್ರವವು ನಿನ್ನ ಗುಡಾರದ ಸಮೀಪಕ್ಕೂ ಬಾರದು" ಹೌದು, ನಮಗೆ ಭದ್ರತೆ ಆತನಲ್ಲಿಯೇ ಇದೆ.

 

ಕಾಡಿನಲ್ಲಿ ನಾಯಿಯೊಂದು ನರಿ ತನ್ನನ್ನು ರಕ್ಷಿಸುತ್ತದೆ ಎಂದು ನಂಬಿತ್ತು. ಆದರೆ ತೋಳ ಬಂದಾಗ ನರಿ ಓಡಿಹೋಯಿತು. ತಕ್ಷಣ ತೋಳವು ತನಗೆ ಭದ್ರತೆ ನೀಡುತ್ತದೆ ಎಂದು ಭಾವಿಸಿ ನಾಯಿ ತೋಳದ ಬಳಿಗೆ ಬಂದಿತು. ಆದರೆ ತೋಳ ಹುಲಿ ಬಂದಕೂಡಲೇ ಕಣ್ಮರೆಯಾಯಿತು. ಹುಲಿ ಬಲಿಷ್ಠ ಎಂದು ಭಾವಿಸಿದ ನಾಯಿ ಹುಲಿಯ ರಕ್ಷಣೆಯನ್ನು ಕೋರಿತು. ಆದರೆ ಬಂದೂಕು ಹಿಡಿದು ಬರುತ್ತಿರುವ ಬೇಟೆಗಾರನನ್ನು ಕಂಡ ಹುಲಿ ಅತಿವೇಗದಲ್ಲಿ ಓಡಿಹೋಯಿತು. ಹಾಗಾಗಿ ನಾಯಿ ಪ್ರಾಣಿಗಳನ್ನು ನಂಬುವುದರಿಂದ ಯಾವ ಪ್ರಯೋಜನವೂ ಇಲ್ಲ. ಈ ಬೇಟೆಗಾರನೇ ನನಗೆ ಭದ್ರತೆ ಎಂದು ಗ್ರಹಿಸಿ ಬಾಲ ಅಲ್ಲಾಡಿಸುತ್ತಾ ಅವನ ಹಿಂದೆ ನಡೆಯಿತು.

 

ಈ ಜಗತ್ತಿನಲ್ಲಿ ಮನುಷ್ಯರ ಸಂಬಂಧ, ಹಣ, ವಸ್ತು, ಕೆಲಸ, ವಿದ್ಯಾಭ್ಯಾಸ, ಸ್ಥಾನಮಾನ ಇವೆಲ್ಲವೂ ನಮ್ಮ ದೃಷ್ಟಿಯಲ್ಲಿ ನಮಗೆ ಸಹಾಯಕವಾಗಿವೆ! ಆದರೆ ಇವುಗಳಿಂದ ಬರುವ ಬಲವೋ, ನಂಬಿಕೆಯೋ, ಸ್ಥಿರವಾದದ್ದಲ್ಲ. ಇವುಗಳು ಪ್ರತಿಯೊಂದು ಸಂದರ್ಭದಲ್ಲೂ ಬದಲಾಗುತ್ತವೆ ಮತ್ತು ನಮ್ಮನ್ನು ಹೊರಲು, ನಡೆಸಲು ಸಾಧ್ಯವಾಗದೇ ಹಿಂಜಾರಿ ಹೋಗುತ್ತದೆ. ಎಲ್ಲಾ ಸಂದರ್ಭಗಳಲ್ಲಿ ನಮ್ಮೊಂದಿಗಿದ್ದು ನಮ್ಮನ್ನು ಹೊತ್ತು ನಡೆಸುವವರು ಕರ್ತನು ಮಾತ್ರವೇ!

 

ಈ ದೇವರು ಎಂದೆಂದಿಗೂ ಇರುವ ಸದಾಕಾಲ ನಮ್ಮ ದೇವರು, ಮರಣದವರೆಗೂ ನಮ್ಮನ್ನು ನಡೆಸುತ್ತಾರೆ ಎಂದರು ಒಬ್ಬ ಮನುಷ್ಯ. ಹೌದು, ನಮ್ಮ ನಂಬಿಕೆಯೂ ಮತ್ತು ವಿಶ್ವಾಸವು ಸುತ್ತಲಿರುವ ಜನರ ಮೇಲೆ ಅಲ್ಲ ನಮ್ಮ ದೇವರ ಮೇಲೆಯೇ ಇರಲಿ. ನಮ್ಮ ಕಣ್ಣುಗಳು ಯಾವಾಗಲೂ ಆತನನ್ನೇ ದೃಷ್ಟಿಸಲಿ. ಆತನಿಂದ ಈ ತಿಂಗಳಷ್ಟೇ ಅಲ್ಲ, ಜೀವಮಾನವಿಡೀ ಭದ್ರತೆ ಸಿಗುತ್ತದೆ.

- Mrs. ಬೆರ್ಲಿನ್ ಸೆಲ್ಲಾಬಾಯ್

 

ಪ್ರಾರ್ಥನಾ ಅಂಶ:

ನಮ್ಮ ಟ್ಯೂಷನ್ ಸೆಂಟರ್‌ ನಲ್ಲಿ ಓದುವ ಮಕ್ಕಳು ಮತ್ತು ಅವರ ಕುಟುಂಬಗಳ ಆಶೀರ್ವಾದಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking perabet casibom holiganbet galabet casibom perabet perabet giriş padişahbet padişahbet giriş grandpashabet kalitebet kalitebet giris betsmove betsmove giris gonebet gonebet giris betnano betnano giriş jojobet jojobet casinomilyon jojobet palacebet sonbahis tambet grandpashabet betgit mercurecasino matbet