By Village Missionary Movement
Thursday, 08-Apr-2021ಧೈನಂದಿನ ಧ್ಯಾನ(Kannada) – 08.04.2021
ನಿನ್ನನ್ನು ಕಾಪಾಡಿಕೋ
"...ಅವರು ಭೂಮಿಯ ಮೇಲೆ ಬದುಕುವ ದಿವಸಗಳೆಲ್ಲಾ ನನಗೆ ಭಯಭಕ್ತಿಯಿಂದಿ ರುವದನ್ನು ಕಲಿತು ತಮ್ಮ ಮಕ್ಕಳಿಗೂ ಬೋಧಿಸುವ ಹಾಗೆ ಅವರಿಗೆ ನನ್ನ ವಾಕ್ಯಗಳನ್ನು ಹೇಳಿಕೊಡು" - ಧರ್ಮೋಪದೇಶ 4:10
ಪರಿಣಾಮದ ಬೆಳವಣಿಗೆಯ ಮೂಲಕ ಮನುಷ್ಯನು ಕೋತಿಯಿಂದಲೇ ರೂಪಿಸಲ್ಪಟ್ಟನು ಎಂದು ಹೇಳಿ ತನ್ನ ಸಿದ್ಧಾಂತಗಳಿಂದ ಪ್ರಖ್ಯಾತಿಗೊಂಡ ಚಾರ್ಲೆಸ್ ಡಾರ್ವಿನ್. ಅವರು ತನ್ನ ಮರಣದ ಹಾಸಿಗೆಯಲ್ಲಿ ಇರುವಾಗ ಹತ್ತಿರವಿರುವ ಸಭೆಯೊಳಗಿಂದ ಜನರು ಹಾಡುವ ಹಾಡುಗಳನ್ನು ಕೇಳುವಂತೆ ಕೋಣೆಯ ಕಿಟಕಿಗಳನ್ನು ತೆರೆಯಲು ಹೇಳಿದರಂತೆ. ಅವರ ಹತ್ತಿರದಲ್ಲಿರುವವರು ಅವರನ್ನು ನೋಡಿ "ಡಾರ್ವಿನ್ ರವರೇ, ಹಾಗಾದರೆ ಪರಿಮಾಣದ ಕುರಿತಾದ ನಿಮ್ಮ ನಂಬಿಕೆಯು ಗುರಿಯು ಏನಾಯಿತು?" ಎಂದು ಕೇಳಿದರು ಅದಕ್ಕೆ ಡಾರ್ವಿನ್ "ಅದು ನನ್ನ ಯೌವನ ಕಾಲದ ಕಾಲ್ಪನಿಕ ಕಥೆ" ಎಂದು ಉತ್ತರ ಕೊಟ್ಟರಂತೆ. ತನ್ನ 22ನೇ ವಯಸ್ಸಿನಲ್ಲಿ theology ಓದನ್ನು ಮುಗಿಸಿದ ಡಾರ್ವಿನ್ ದೇವರ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ, ಸಭೆಯಲ್ಲಿ ಸೇರಲು ಬಯಸದೆ ಮಾನವ ಸೃಷ್ಟಿಯ ಬಗ್ಗೆ ತಪ್ಪಾದ ಸಿದ್ಧಾಂತವನ್ನು ಲೋಕಕ್ಕೆ ತೋರಿಸಿದರು. ಡಾರ್ವಿನ್ ಪರಿಣಾಮ ಗುರಿಯನ್ನು ಅಂಗೀಕರಿಸಿದ ಲೋಕ ಅವರ ಕೊನೆಯ ಮಾತುಗಳನ್ನು ಮರೆತುಬಿಟ್ಟಿತು.
ಲೋಕಜ್ಞಾನವು, ವಿಜ್ಞಾನವು ಬೆಳೆದು ನಿಂತಿರುವ ಈ ಕಾಲದಲ್ಲಿ, ದೇವರನ್ನು ಬಿಟ್ಟು ದಾರಿ ತಪ್ಪುವಂತೆ ಮಾಡುವ ಪರಿಸ್ಥಿತಿಗಳು ಲೋಕದಲ್ಲಿ ಅನೇಕವಾಗಿ ಕಾಣಲ್ಪಟ್ಟರೂ ಕರ್ತನನ್ನು ಅವರ ರಕ್ಷಣೆಯನ್ನು ಮರೆಯದೆ ಅವರ ಮೇಲಿರುವ ನಂಬಿಕೆಯನ್ನು ಬಿಟ್ಟುಬಿಡದೆ ಸಂದೇಹ ಪಡದೆ ಇರುವಂತಹ ಸ್ಥಿರತೆಯು ನಮ್ಮ ಯುವ ಪೀಳಿಗೆಗೆ ಬೇಕು. ಇದಕ್ಕೆ ದೇವರ ಬಲವು ನಡೆಸುವಿಕೆಯು ನಮ್ಮ ಮುಂದೆ ಬರುವ ಸಂತತಿಗೆ ಮರೆ ಮಾಡದೆ ವಿವರಿಸಬೇಕು. ಯೆಹೂದ್ಯರು ದೇವರ ಬಗ್ಗೆ ಚಿಕ್ಕವಯಸ್ಸಿನಿಂದಲೇ ತಮ್ಮ ಮಕ್ಕಳಿಗೆ ಬೋಧಿಸಲು ಆಜ್ಞೆ ಹೊಂದಿದ್ದರು. ಮೋಶೆ ತನ್ನ ತಾಯಿಯ ಬಳಿ ಬೆಳೆಯುತ್ತಿದ್ದಾಗಲೇ ದೇವರ ಬಗ್ಗೆ ತಿಳಿದುಕೊಂಡರು ಅದುವೇ ಮುಂದಿನ ದಿನಗಳಲ್ಲಿ ಕರ್ತನಿಗಾಗಿ ವೈರಾಗ್ಯವಾಗಿ ನಿಲ್ಲುವಂತೆ ಮಾಡಿತು. ಪೌಲನು ತಿಮೊಥೆಯ ಬಗ್ಗೆ ಹೇಳುವಾಗ ನಿನ್ನ ತಾಯಿಗೂ, ಅಜ್ಜಿಗೂ ಇರುವಂತಹ ಕರ್ತನ ಮೇಲಿರುವ ನಂಬಿಕೆ ನಿನ್ನೊಳಗೂ ಇದೆ ಎಂದರು. ಕಾರಣವೇನು? ಅವರ ಅಜ್ಜಿಯು ಅವರಿಗೆ ಚಿಕ್ಕವಯಸ್ಸಿನಿಂದಲೇ ದೇವರ ಬಗ್ಗೆ ಸರಿಯಾಗಿ ಬೋಧಿಸಿದರು.
ನಾವು ಹೇಗಿದ್ದೇವೆ? ನಮ್ಮ ಮಕ್ಕಳ ಕಾರ್ಯದಲ್ಲಿ ವಿದ್ಯಾಭ್ಯಾಸಕ್ಕೂ, ಲೋಕಜ್ಞಾನಕ್ಕೂ, ತಿಳುವಳಿಕೆಗೂ ಕೊಡುವ ಮುಖ್ಯತ್ವಕ್ಕಿಂತ ದೇವರಿಗೆ ಮೊದಲ ಸ್ಥಾನ ಕೊಡಬೇಕೆಂದು ಕಲಿಸಿಕೊಡುತ್ತಿದ್ದೇವಾ? ದೇವರ ಬಗ್ಗೆ ಸರಿಯಾದ ಅರಿವು ನಮ್ಮ ಬಳಿ ಕಾಣುತ್ತಿದೆಯಾ? ನಾವು ಸ್ವಸ್ಥ ಚಿತ್ತರಾಗಿ ಇದ್ದರೆ ಮಾತ್ರವೇ ನಮ್ಮ ಸಂತತಿಯನ್ನು ಲೋಕದ ಮಾಯೆಯೊಗೆ ಸಿಕ್ಕಿಕೊಳ್ಳದಂತೆ, ದಾರಿ ತಪ್ಪಿ ಹೋಗದಂತೆ ಕಾಪಾಡಿ ದೇವರ ಕಡೆಗೆ ನಡೆಸಲು ಸಾಧ್ಯ. ನಾವೇ ನಮ್ಮ ಮುಂದಿನ ಸಂತತಿಗಳಿಗೆ ಉತ್ತರವಾದಿಗಳು ಎಂಬುದನ್ನು ಎಂದಿಗೂ ಮರೆತು ಬಿಡಬಾರದು.
- Mrs. ವಸಂತಿ ರಾಜಮೋಹನ್
ಪ್ರಾರ್ಥನಾ ಅಂಶ:-
ಕೂಟದಲ್ಲಿ ಭಾಗವಹಿಸುತ್ತಿರುವ ಒಂದೊಂದು ಸೇವಕರನ್ನು ಅಂತ್ಯಕಾಲದ ಉಜ್ಜೀವನದ ಅಪೊಸ್ತಲರಾಗಿ ದೇವರು ರೂಪಿಸುವಂತೆ ಪ್ರಾರ್ಥಿಸೋಣ.
ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.
ತಮಿಳಿಗಾಗಿ +919444011864
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482