Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 04.03.2024
Share:

By Village Missionary Movement

Monday, 04-Mar-2024

ಧೈನಂದಿನ ಧ್ಯಾನ(Kannada) – 04.03.2024

 

ಇಂದೇ ರಕ್ಷಣೆಯ ದಿನ

 

"ಮನುಷ್ಯಕುಮಾರನು ಕೆಟ್ಟುಹೋಗಿರುವದನ್ನು ಹುಡುಕಿ ರಕ್ಷಿಸುವದಕ್ಕೆ ಬಂದನು ಎಂದು ಹೇಳಿದನು" - ಲೂಕ 19:10

 

ಟಿವಿಯಲ್ಲಿ ಬ್ರೇಕಿಂಗ್ ನ್ಯೂಸ್: ಸುರಂಗದಲ್ಲಿ ಸಿಲುಕಿರುವ 41 ಸುರಂಗ ಕಾರ್ಮಿಕರನ್ನು ರಕ್ಷಿಸಲು ನಡೆಸಿದ ರಕ್ಷಣಾ ಕಾರ್ಯಾಚರಣೆಯಲ್ಲಿ ಇಂದು 16ನೇ ದಿನ. ಎಡಬಿಡದ ಪ್ರಯತ್ನದ ನಂತರ 17 ನೇ ದಿನದಂದು ಬಂದ ಸುದ್ದಿ ಇದು, "ಇಂದು ಸಂಜೆಯೊಳಗೆ ಅವರನ್ನು ರಕ್ಷಿಸಿ ಹೊರಗೆ ತಂದುಬಿಡುತ್ತಾರೆ" ಎಂದು! ಈ ಸುದ್ದಿಯನ್ನು ಟಿವಿಯಲ್ಲಿ ನೋಡಿದ, ಕೇಳಿದ, ವಾರ್ತೆಯನ್ನು ಓದಿದ ಎಲ್ಲರೂ ಸುರಂಗದಲ್ಲಿ ಸಿಕ್ಕಿಹಾಕಿಕೊಂಡಿರುವ 41 ಮಂದಿಯನ್ನು ತಮ್ಮ ಮನೆಯ ಸಂಬಂಧಿಕರೇ ಎಂದು ಭಾವಿಸುತ್ತಿದ್ದರು.

 

41 ಆಂಬ್ಯುಲೆನ್ಸ್‌ಗಳು, ವೈದ್ಯರ ತಂಡ, ತಂತ್ರಜ್ಞರು, ಕ್ರೇನ್ ಡ್ರೈವರ್‌ಗಳು, ಸಹಾಯಕರು, ಕಾರ್ಮಿಕರು, ಸಿಕ್ಕಿಬಿದ್ದ ಜನರ ಸಂಬಂಧಿಕರು, ನಾಗರಿಕರು, ಆಡಳಿತಗಾರರು, ಉನ್ನತ ಮಟ್ಟದ ಅಧಿಕಾರಿಗಳು ಹೀಗೆ ದೊಡ್ಡ ಜನರ ಗುಂಪು ಆ ಸ್ಥಳದಲ್ಲಿ ನೆರೆದಿತ್ತು. ಆತಂಕ, ಮತ್ತು ಭೀತಿಯ ನಡುವೆಯೂ ಎಲ್ಲರ ಮನಸ್ಸಿನಲ್ಲಿರುವ ಒಂದೇ ಒಂದು ಕಾಳಜಿ ಇಂದು 41 ಜನರನ್ನೂ ರಕ್ಷಿಸಬೇಕು. ಆ ಸ್ಥಿತಿಯಲ್ಲಿ ಎಲ್ಲರ ಮುಖದಲ್ಲೂ ಒಂದೇ ಯೋಚನೆ, ಒಂದೇ ಉದ್ದೇಶ, ಒಂದೇ ವಿಜ್ಞಾಪನೆ ಒಮ್ಮನಸ್ಸು ಮಾತ್ರವೇ ಅತ್ಯಧಿಕವಾಗಿ ಕಾಣುತ್ತಿತ್ತು.

 

ದೂರದರ್ಶನದಲ್ಲಿ ಕತ್ತಲೆಯ ಸುರಂಗದಿಂದ ವಿಶಾಲ ಪ್ರಪಂಚದ ಬೆಳಕಿಗೆ ಬರಲಿರುವ 41 ಜನರ ರಕ್ಷಣಾ ಕಾರ್ಯಾಚರಣೆಯ ಯಶಸ್ಸಿಗೆ ಒಂದೇ ರೇಖಾತ್ಮಕ ಸಾಲಿನಲ್ಲಿ ಕಾಯುತ್ತಿರುವುದನ್ನು ನಾವು ನೋಡಬಹುದು. ದೇವರಲ್ಲಿ ಹರಕೆಮಾಡಿಕೊಂಡವರು ಲೆಕ್ಕವಿಲ್ಲದಷ್ಟು ಮಂದಿ. ಹೌದು, ಅವರ ಒಮ್ಮನಸ್ಸು ಗೆದ್ದಿತು. 41 ಜನರು ಜೋರಾಗಿ ಹರ್ಷೋದ್ಗಾರಗಳೊಂದಿಗೆ ಕತ್ತಲೆಯ ಸುರಂಗದಿಂದ ಒಬ್ಬೊಬ್ಬರಾಗಿ ಹೊರಬಂದ ದೃಶ್ಯವೂ, ಅವರ ಸಂಬಂಧಗಳು ಮತ್ತು ಕಾರ್ಮಿಕರು ಹರ್ಷೋದ್ಗಾರ ಮಾಡಿದ ನಂತರದ ಭಾವನಾತ್ಮಕ ಕ್ಷಣಗಳನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ.

 

ಪ್ರಿಯರೇ! ದೇಶವೇ ಅರಿತ ಈ ಒಂದು ಘಟನೆ "ರಕ್ಷಣಾ ಕಾರ್ಯಾಚರಣೆ" ಯ ಶ್ರೇಷ್ಠತೆಯನ್ನು, ಉದಾತ್ತತೆಯನ್ನು, ಅಗತ್ಯತೆಯನ್ನು ಸುಂದರವಾಗಿ ಒತ್ತಿಹೇಳುವುದನ್ನು ನಾವು ಗಮನಿಸಲು ಸಾಧ್ಯ ಅಲ್ವಾ? ಸತ್ಯವೇದದಲ್ಲಿ ". . . ದೇವರ ಕಡೆಗೆ ತಿರುಗಿಕೊಳ್ಳುವ ಒಬ್ಬ ಪಾಪಿಯ ವಿಷಯವಾಗಿ ಪರಲೋಕದಲ್ಲಿ ಸಂತೋಷವುಂಟಾಗುವದೆಂದು" . . . ಲೂಕ 15:7 ರಲ್ಲಿ ಓದುತ್ತೇವೆ. " . . . ಯೇಸುವಿನ ರಕ್ತವು ಸಕಲಪಾಪವನ್ನು ನಿವಾರಣಮಾಡಿ ನಮ್ಮನ್ನು ಶುದ್ಧಿಮಾಡುತ್ತದೆ." (1ಯೋಹಾನ 1:7) ಈ ಸುವಾರ್ತೆ ನಿಮಗೆ ತಿಳಿದಿದೆಯೇ? ನೀವು ವಿಮೋಚನೆ ಹೊಂದಿ, ಈ ರಕ್ಷಣೆಯ ಅನುಭವವನ್ನು ತಿಳಿದಿರುವಿರಾ? ಹೌದು! ಎನ್ನುವುದು ನಿಮ್ಮ ಉತ್ತರವಾಗಿದ್ದರೆ, ನಿಮ್ಮ ವಿಮೋಚನೆಯಿಂದಾಗಿ ಪರಲೋಕದಲ್ಲಿ ಸಂತೋಷವು ಖಂಡಿತವಾಗಿಯೂ ಇರುತ್ತದೆ. ನಿಮ್ಮ ಉತ್ತರ ಬಹುಶಃ ಇಲ್ಲ ಎಂದಾದರೆ, ನೀವು ಇಂದೇ ಒಂದು ನಿರ್ಧಾರ ತೆಗೆದುಕೊಳ್ಳಬೇಕು. ಯೇಸುಕ್ರಿಸ್ತನ ರಕ್ತವು ಮಾತ್ರವೇ ನಮ್ಮನ್ನು ಪಾಪದ ಹಿಡಿತದಿಂದ ವಿಮೋಚನೆಗೊಳಿಸಬಲ್ಲದು ಎಂಬ ಒಳ್ಳೆಯ ಸುದ್ದಿಯನ್ನು ನೀವು ಈ ಕ್ಷಣದಲ್ಲಿ ನಂಬುವುದಾದರೆ, ನೀವು ಆತನ ಮಗುವಾಗುತ್ತೀರ. ಪರಲೋಕವು ಖಂಡಿತವಾಗಿಯೂ ನಿಮ್ಮ ವಿಮೋಚನೆಯನ್ನು ಆಚರಿಸುತ್ತದೆ! ತಡಮಾಡಬೇಡ! ಇಂದೇ ಅನುಗ್ರಹ ದಿನ!! ಇಂದೇ ರಕ್ಷಣೆಯ ದಿನ !!!

- Mrs. ಎಮೀಮಾ ಸೌಂದರರಾಜನ್

 

ಪ್ರಾರ್ಥನಾ ಅಂಶ:

ಪ್ರತಿ ರಾಜ್ಯದಲ್ಲಿ 120 ಮಿಷನರಿಗಳು ನಮಗೆ ಹೊಸದಾಗಿ ಸಿಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet holiganbet sahabet onwin bets10 bets10 giriş bets10 güncel giriş betcio atlasbet casibom meritking perabet casibom holiganbet galabet casibom padişahbet padişahbet giriş grandpashabet jojobet tambet grandpashabet jojobet nesinecasino betbey betgit grandpashabet betpuan cashwin matbet meritking perabet perabet giriş instagram ban service betsilin betsilin giris pashagaming pashagaming giris gorabet gorabet giris kralbet holiganbet grandpashabet grandpashabet giriş https://tr.holiganbet-30temmuz.art/ çarkbet çarkbet giriş