Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 11.03.2024
Share:

By Village Missionary Movement

Monday, 11-Mar-2024

ಧೈನಂದಿನ ಧ್ಯಾನ(Kannada) – 11.03.2024

 

ಅನುಭವ

 

 "…ಪ್ರಾಯಸ್ಥನಾದ ಮೇಲೆ ಬಾಲ್ಯದವುಗಳನ್ನು ಬಿಟ್ಟುಬಿಟ್ಟೆನು." - 1 ಕೊರಿಂಥ 13:11

 

ನಾವು ಆಸೆಯಾಗಿ ಮಾವಿನ ಸಸಿಯನ್ನು ಖರೀದಿಸಿ, ಅದನ್ನು ನಮ್ಮ ಮನೆಯಲ್ಲಿ ನೆಟ್ಟು ಅದನ್ನು ಬಹಳ ಕಾಳಜಿವಹಿಸಿ ನೋಡಿಕೊಳ್ಳುತ್ತೇವೆ. ಪ್ರತಿ ದಿನ ನೀರು, ಗೊಬ್ಬರ ಎಲ್ಲವನ್ನೂ ಸರಿಯಾದ ಸಮಯಕ್ಕೆ ಕೊಟ್ಟು ಉತ್ತಮ ಬೆಳವಣಿಗೆಯನ್ನು ನಿರೀಕ್ಷಿಸುತ್ತೇವೆ. ಅದೇ ಸಸಿ ಮಾವಿನ ಮರವಾಗಿ ಬೆಳೆದು ಫಲ ಕೊಡಲು ಆರಂಭಿಸಿದರೆ ಎಷ್ಟು ಖುಷಿಯಾಗುತ್ತದೆ. ಪ್ರತಿದಿನದ ಬೆಳವಣಿಗೆ ಬಹಳ ಮುಖ್ಯ. ಅದೇ ರೀತಿಯಲ್ಲಿ, ಕ್ರಿಸ್ತನಲ್ಲಿ ಹುಟ್ಟಿದವರಾದ ನಾವು ಪ್ರತಿದಿನವೂ ಬೆಳೆಯಬೇಕೆಂದು ಕರ್ತನು ನಿರೀಕ್ಷಿಸುತ್ತಾರೆ. ಅಂದರೆ ಆಧ್ಯಾತ್ಮಿಕ ಜೀವನದಲ್ಲಿ, ಸತ್ಯವೇದವನ್ನು ಓದುವುದರಲ್ಲಿ, ಒಳ್ಳೆಯ ಕಾರ್ಯಗಳನ್ನು ಮಾಡುವುದರಲ್ಲಿ, ದೇವರೊಂದಿಗಿನ ಸಂಬಂಧದಲ್ಲಿ, ಆಳವಾದ ಪ್ರಾರ್ಥನಾ ಜೀವನದಲ್ಲಿ ಹೀಗೆ ಹೇಳಿಕೊಂಡೇ ಹೋಗಬಹುದು. ಈ ರೀತಿ ಆಧ್ಯಾತ್ಮಿಕವಾಗಿ ಅಭಿವೃದ್ಧಿ ಹೊಂದಿದ ಮನುಷ್ಯನ ಬೆಳವಣಿಗೆಯ ಚಿಹ್ನೆ ಏನು ಎಂದು ನಾವು ಯೋಚಿಸೋಣ.

 

1) ಇತರರಿಗೆ ಬಿಟ್ಟುಕೊಡುವ ಮನೋಭಾವವನ್ನು ಹೊಂದಿರುತ್ತಾರೆ. ಯೋನಾತಾನನು ಅರಸನಾದ ಸೌಲನ ಸ್ವಂತ ಮಗನಾಗಿದ್ದರೂ, ತಾನು ಪ್ರೀತಿಸಿದ ದಾವೀದನಿಗೆ ನೀನು ರಾಜನಾಗುವೆ. ಆಗ ನಾನು ನಿನಗೆ ಎರಡನೆಯವನಾಗಿರುತ್ತೇನೆ ಎಂದು ಬಿಟ್ಟುಕೊಡುವ ಯೋನಾತಾನನನ್ನು ನೋಡುತ್ತೇವೆ.

 

2) ಈಗ ತಾವು ನಿರ್ವಹಿಸುತ್ತಿರುವ ಜವಾಬ್ದಾರಿ, ಸ್ಥಾನ, ಪ್ರಾಥಮಿಕ ಸ್ಥಾನವನ್ನು ಬಿಟ್ಟುಕೊಟ್ಟು ಕೆಳಮಟ್ಟದಲ್ಲಿ ಸೇವೆ ಸಲ್ಲಿಸಲು ಮುಂದೆ ಬರುತ್ತಾರೆ. ಇತರರು ಎಲ್ಲರನ್ನೂ ತನಗಿಂತ ಶ್ರೇಷ್ಠರೆಂದು ಪರಿಗಣಿಸುತ್ತಾರೆ. ಅವಿದ್ಯಾವಂತರಿರಲಿ, ಬಡವರಿರಲಿ, ರಕ್ಷಣೆಹೊಂದದವರಾಗಿರಲಿ ಹೀಗೆ ಯಾರಾಗಿದ್ದರೂ ಅವರನ್ನು ತಮಗಿಂತ ಶ್ರೇಷ್ಠರೆಂದು ಪರಿಗಣಿಸಿ ಅವರಿಗೆ ಪೂರ್ಣ ಗೌರವ ನೀಡಿ ಅವರೊಂದಿಗೆ ಸ್ನೇಹ ಬೆಳೆಸುತ್ತಾರೆ.

 

3) ಎಲ್ಲರಿಗೂ ಸೇವೆ ಮಾಡುವ ಆಲೋಚನೆ: ಕರ್ತನಾದ ಯೇಸು ತನ್ನ ಶಿಷ್ಯರ ಪಾದಗಳನ್ನು ತೊಳೆದರು. ಈ ರೀತಿಯ ಚಿಂತನೆಯುಳ್ಳವರಿಗೆ ತಮ್ಮ ಬಗ್ಗೆ ಅಭಿಮಾನವಿರುವುದಿಲ್ಲ, ಆದ್ದರಿಂದ ಅವರು ಯಾವುದೇ ಅಡ್ಡಿಯಿಲ್ಲದೆ ಇತರರನ್ನು ಗೌರವಿಸಲು ಮುಂದಾಗುತ್ತಾರೆ.

 

ಇದನ್ನು ಓದುತ್ತಿರುವ ಪ್ರಿಯರೇ, "ತುಂಬದ ಕೊಡ ತುಳುಕುತ್ತದೆ, ತುಂಬಿದ ಕೊಡ ತುಳುಕುವುದಿಲ್ಲ" ಎಂಬ ಹಳೆಯ ಗಾದೆಯಂತೆ ಆಧ್ಯಾತ್ಮಿಕ ಜೀವನದಲ್ಲಿ ಬೆಳೆಯದವರು ತುಂಬದ ಕೊಡದಂತೆ ಸಣ್ಣ ಸಣ್ಣ ವಿಷಯಗಳಲ್ಲಿ ನಿರಾಶೆಯಾಗುತ್ತಾರೆ. ಶಬ್ದ ಮಾಡುವ ಚಪ್ಪಾಳೆಯಂತೆ ಅಂಗಲಾಚುವ ಶಬ್ಧವನ್ನು ಯಾವಾಗಲೂ ಅವರ ಬಳಿ ಕೇಳಬಹುದು. ಆಧ್ಯಾತ್ಮಿಕವಾಗಿ ಅನುಭವವುಳ್ಳ ಜನರೋ ದೇವರ ಪ್ರೀತಿಯಿಂದ ತುಂಬಿರುತ್ತಾರೆ ಮತ್ತು ಯಾವಾಗಲೂ ಶಾಂತವಾಗಿರುತ್ತಾರೆ. ನಿಮ್ಮ ಸ್ಥಿತಿ ಹೇಗಿದೆ?

- Bro. ಜಯಕುಮಾರ್

 

ಪ್ರಾರ್ಥನಾ ಅಂಶ:

ಆಮೆನ್ ವಿಲೇಜ್ ಟಿವಿಯನ್ನು ಸ್ಯಾಟಲೈಟ್ ಚಾನೆಲ್ ಆಗಿ ಪರಿವರ್ತಿಸಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet matbet giriş sahabet onwin bets10 bets10 giriş bets10 güncel giriş betcio atlasbet casibom meritking perabet casibom holiganbet galabet casibom padişahbet padişahbet giriş grandpashabet jojobet tambet grandpashabet jojobet nesinecasino betbey betgit grandpashabet betpuan cashwin matbet meritking perabet perabet giriş instagram ban service betsilin betsilin giris pashagaming pashagaming giris gorabet gorabet giris kralbet holiganbet grandpashabet grandpashabet giriş https://tr.holiganbet-30temmuz.art/ çarkbet çarkbet giriş