Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 12.03.2024
Share:

By Village Missionary Movement

Tuesday, 12-Mar-2024

ಧೈನಂದಿನ ಧ್ಯಾನ(Kannada) – 12.03.2024

 

ಇದು ನ್ಯಾಯವಾ?

 

"ಅನಂತರ ಅವರು – ಇದು ಶುಭವಾರ್ತೆಯ ದಿವಸವಾಗಿದೆ; ನಾವು ಇದನ್ನು ಪ್ರಕಟಿಸದಿರುವುದು ಒಳ್ಳೇದಲ್ಲ . . . ತಡಮಾಡಿದರೆ ಶಿಕ್ಷೆಗೆ ಪಾತ್ರರಾದೇವು . . ." - 2 ಅರಸು. 7:9

 

ಅನೇಕ ಜನರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಬಹಳ ದೂರ ಪ್ರಯಾಣಿಸುತ್ತಿದ್ದಾರೆ ಎಂದು ಭಾವಿಸೋಣ. ಹೋಗುವ ದಾರಿಯಲ್ಲಿ ಅನೇಕರು ಆಹಾರವಿಲ್ಲದೆ ಭಯಂಕರವಾದ ಹಸಿವಿನಿಂದ ಸಾಯುತ್ತಲೇ ಇದ್ದಾರೆ. ಆದರೆ ಒಬ್ಬ ವ್ಯಕ್ತಿಯ ಪಾತ್ರೆಯಲ್ಲಿ ಮಾತ್ರ ಆಹಾರವಿದೆ. ಆ ಆಹಾರದ ವಿಶೇಷತೆ ಏನೆಂದರೆ ಅದನ್ನು ಬೇರೆಯವರಿಗೆ ಕೊಡುತ್ತಾ ಕೊಡುತ್ತಾ, ಆ ಆಹಾರವು ಕಡಿಮೆಯಾಗದೆ ಹೆಚ್ಚುತ್ತಲೇ ಇರುತ್ತದೆ. ಅಂತಹ ಅದ್ಭುತವಾದ ಆಹಾರ ಅದು. ಆದರೆ ಈ ವ್ಯಕ್ತಿ ಅದನ್ನು ಯಾರಿಗೂ ನೀಡಲಿಲ್ಲ. ಆಹಾರವಿಲ್ಲದೆ ಅನೇಕರು ತಮ್ಮ ಕಣ್ಣೆದುರೇ ಸಾಯುತ್ತಿರುವುದನ್ನು ಕಂಡರೂ ಆತನು ಚಿಂತಿಸಲಿಲ್ಲ. ಈ ಘಟನೆ ನಮಗೆ ನ್ಯಾಯಯುತವಾಗಿ ತೋರುತ್ತಿದೆಯೇ?

 

ಪರಿಶುದ್ಧ ಸತ್ಯವೇದದಲ್ಲಿ 2 ಅರಸರುಗಳು 6, 7 ಅಧ್ಯಾಯಗಳಲ್ಲಿ, ಇಸ್ರಾಯೇಲ್ ದೇಶದ ಜನರು ತುಂಬಾ ಘೋರವಾದ ಕ್ಷಾಮದಲ್ಲಿ ಸಿಲುಕಿದಾಗ, ದೇಶದ ನಾಲ್ಕು ಕುಷ್ಠರೋಗಿಗಳು ರಾತ್ರೋ ರಾತ್ರಿ ಕ್ಷಾಮಕ್ಕೆ ಕಾರಣವಾದ ಮತ್ತು ತಮ್ಮ ದೇಶವನ್ನು ಮುತ್ತಿಗೆ ಹಾಕಿದ ಸಿರಿಯಾ ಸೈನ್ಯದ ಪಾಳೆಯಕ್ಕೆ ಬಂದು ನೋಡಿದರು. ಅಲ್ಲಿ ಯಾರೂ ಇಲ್ಲದಿರುವುದನ್ನು ಕಂಡು ಶತ್ರುಗಳ ಗುಡಾರವನ್ನು ಪ್ರವೇಶಿಸಿ ತಿಂದು ಕುಡಿದರು. ಅವರು ಬಿಟ್ಟು ಹೋಗಿದ್ದ ಕೆಲವು ಸೊತ್ತುಗಳನ್ನು ಕೊಳ್ಳೆಹೊಡೆದರು. ನಂತರ ಜಾಗೃತರಾಗಿ ನಮ್ಮ ದೇಶದ ಜನರು ಹಸಿವಿನಿಂದ ಸಾಯುತ್ತಿರುವಾಗ ನಾವು ಮಾತ್ರ ತಿಂದು ತೃಪ್ತಿಪಡುವುದು ನ್ಯಾಯವಲ್ಲ. ಇದು ಶುಭವಾರ್ತೆಯ ದಿವಸವಾಗಿದೆ; ನಾವು ಇದನ್ನು ಪ್ರಕಟಿಸದಿರುವುದು ಒಳ್ಳೇದಲ್ಲ. ಬೆಳಗಾಗುವವರೆಗೆ ತಡಮಾಡಿದರೆ ಶಿಕ್ಷೆಗೆ ಪಾತ್ರರಾದೇವು ಎಂದು ಹೇಳಿ ರಾತ್ರೋರಾತ್ರಿ ಹೋಗಿ ಅರಸನ ಅರಮನೆಯವರಿಗೆ ತಿಳಿಸಿದರು. 

 

ಇದನ್ನು ಓದುತ್ತಿರುವ ದೇವಜನರೇ, ಮಾನವಕುಲವು ಪಾಪ, ಅಧರ್ಮ, ಅಪರಾಧ, ಸಂಕಟ ಮತ್ತು ಮರಣದಲ್ಲಿ ಸಿಲುಕಿಕೊಂಡಿದೆ. ಅದನ್ನು ವಿಮೋಚಿಸಲು, ದೇವರು ತನ್ನ ಒಬ್ಬನೇ ಮಗನಾದ ಯೇಸು ಕ್ರಿಸ್ತನನ್ನು ಶಿಲುಬೆಯ ಮರಣಕ್ಕೆ ಒಪ್ಪಿಸಿ ಕೊಟ್ಟರು. ಮೂರನೆಯ ದಿನದಲ್ಲಿ ಜೀವಂತವಾಗಿ ಎದ್ದರು. ಹೀಗೆ ನೀನು ಮತ್ತು ನಾನು ವಿನಾಶದಿಂದ ಪಾರಾಗಿದ್ದೇವೆ. ಬರುವ ಕಾಲದಲ್ಲಿ ಪರಲೋಕದಲ್ಲಿ ತನ್ನೊಂದಿಗೆ ಇರುವ ಅವಕಾಶವನ್ನೂ ಸಹ ಮಾಡಿಕೊಟ್ಟಿದ್ದಾರೆ. ಆದರೆ ಎಷ್ಟೋ ಜನರು ಈ ಸತ್ಯವನ್ನು ತಿಳಿಯದೆ ನಶಿಸಿಹೋಗುತ್ತಿದ್ದಾರೆ. ಪ್ರತಿದಿನವೂ ಸುವಾರ್ತೆಯನ್ನು ಸಾರುವ ಕಾಲವಿದು! ಕುಷ್ಠರೋಗಿಗಳಿಗೆ ಹಸಿವಿನಿಂದ ಬಳಲುತ್ತಿರುವ ಜನರ ಬಗ್ಗೆ ಅಕ್ಕರೆ ಮತ್ತು ಕಾಳಜಿ ಇತ್ತು. ನಾವು ಹೇಗಿದ್ದೇವೆ ಬೆಳಗಾಗುವವರೆಗೂ ಕಾದು ಕುಳಿತರೆ ಶಿಕ್ಷೆಗೆ ಪಾತ್ರರಾಗುತ್ತೇವೆ ಎಂದು ಗ್ರಹಿಸಿದ ಕುಷ್ಠರೋಗಿಗಳು ತಕ್ಷಣ ಕಾರ್ಯಪ್ರವೃತ್ತರಾದರು. ಈ ಕುಷ್ಠರೋಗಿಗಳಿಗಿದ್ದ ಭಾವನೆಯಲ್ಲಿ ಸ್ವಲ್ಪವಾದರೂ ಇಂದು ನಮಗಿದೆಯೇ? ನಮ್ಮನ್ನು ನಾವೇ ನಿಧಾನಿಸಿ ನೋಡೋಣ.

- Bro. ಸಿಮಿಯೋನ್

 

ಪ್ರಾರ್ಥನಾ ಅಂಶ:

ಮಕ್ಕಳಿಗಾಗಿ kids ಟಿವಿ ಚಾನೆಲ್ ಶೀಘ್ರದಲ್ಲೇ ಪ್ರಾರಂಭಿಸಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet matbet giriş sahabet onwin bets10 bets10 giriş bets10 güncel giriş betcio atlasbet casibom meritking perabet casibom holiganbet galabet casibom padişahbet padişahbet giriş grandpashabet jojobet tambet grandpashabet jojobet nesinecasino betbey betgit grandpashabet betpuan cashwin matbet meritking perabet perabet giriş instagram ban service betsilin betsilin giris pashagaming pashagaming giris gorabet gorabet giris kralbet holiganbet grandpashabet grandpashabet giriş https://tr.holiganbet-30temmuz.art/ çarkbet çarkbet giriş