By Village Missionary Movement
Wednesday, 13-Mar-2024ಧೈನಂದಿನ ಧ್ಯಾನ(Kannada) – 13.03.2024
ದೇವರ ದಯೆ
"ಆದರೆ ನೋಹನಿಗೆ ಯೆಹೋವನ ದಯವು ದೊರಕಿತು." - ಆದಿಕಾಂಡ 6:8
ಜೇಮ್ಸ್ ಕಲ್ಲಿದ್ದಲು ಸುರಂಗದಲ್ಲಿ ಕೆಲಸ ಮಾಡುತ್ತಿದ್ದರು. ಯೇಸುವಿನ ಬಗ್ಗೆ ಹೇಗಾದರೂ ಎಲ್ಲರಿಗೂ ಹೇಳಬೇಕೆಂದು ಅವರ ಹೃದಯದಲ್ಲಿ ಭಾರವಿತ್ತು. ಆದ್ದರಿಂದ ಅವರು ತನ್ನೊಂದಿಗೆ ಕೆಲಸ ಮಾಡುವವರಿಗೆಲ್ಲ ಸುವಾರ್ತೆಯನ್ನು ಸಾರಿದರು. ಇದರಿಂದಾಗಿ ಎಲ್ಲರೂ ಇವನಿಗೆ ಹುಚ್ಚು ಹಿಡಿದಿದೆ ಎಂದು ಗೇಲಿ ಮಾಡಿದರು. ಒಂದು ದಿನ ಎಲ್ಲರೂ ಊಟಕ್ಕೆ ಕುಳಿತಿದ್ದಾಗ ನಾಯಿಯೊಂದು ಜೇಮ್ಸ್ ಅವರ ಊಟವನ್ನು ಎತ್ತಿಕೊಂಡು ಓಡಿಹೋಯಿತು. ನಾಯಿಯಿಂದ ಆಹಾರವನ್ನು ಪಡೆಯಲು ಜೇಮ್ಸ್ ಸುರಂಗದಿಂದ ಹೊರಗೆ ಓಡಿಹೋದರು. “ಯೇಸುವಿಗೆ ಇವನ ಆಹಾರವನ್ನೇ ಕಾಪಾಡಲು ಸಾಧ್ಯವಾಗಲಿಲ್ಲ, ಇನ್ನು ಇವನನ್ನು ಹೇಗೆ ಕಾಪಾಡುತ್ತಾರೆ” ಎಂದು ಎಲ್ಲರೂ ಗೇಲಿ ಮಾಡಿದರು. ಸ್ವಲ್ಪ ಸಮಯದಲ್ಲೇ ಸುರಂಗದಲ್ಲಿ ಒಂದು ಅಪಘಾತ ಸಂಭವಿಸಿ ಅದರ ಒಂದು ಭಾಗವು ಕುಸಿದು ಬಿತ್ತು. ಎಲ್ಲರೂ ಗಾಯಗೊಂಡರು ಮತ್ತು ಕೆಲವರು ಸತ್ತರು. ಆದರೆ ಹೊರಗೆ ಹೋದ ಜೇಮ್ಸ್ ಮಾತ್ರ ದೇವರ ದಯೆಯಿಂದ ರಕ್ಷಿಸಲ್ಪಟ್ಟನು.
ಪ್ರಿಯರೇ, ಸತ್ಯವೇದದಲ್ಲಿ ನೋಹನು ತನ್ನ ಕಾಲದ ಜನರಲ್ಲಿ ಉತ್ತಮನು ಮತ್ತು ನೀತಿವಂತನಾಗಿದ್ದನು. ನೋಹನ ಕಾಲದಲ್ಲಿ, ಭೂಮಿಯ ಮೇಲೆ ಜನರ ಅಕ್ರಮಗಳು ಹೆಚ್ಚಾಗಿರುವುದನ್ನು ಕರ್ತನು ನೋಡಿದರು. ಮನುಷ್ಯನನ್ನು ಸೃಷ್ಟಿಸಿದ್ದಕ್ಕಾಗಿ ದೇವರು ಪಶ್ಚಾತ್ತಾಪಪಟ್ಟರು. ದೇವರು ನೋಹನ ಮೂಲಕ ಜನರನ್ನು ಎಚ್ಚರಿಸಿದರು, ಆದರೆ ಅವರು ಕೇಳಲಿಲ್ಲ. ನೋಹನನ್ನು ಅಪಹಾಸ್ಯ ಮಾಡಿದರು. ದೇವರ ಕೋಪಾಗ್ನಿಗೆ ಗುರಿಯಾದರು. ಆದ್ದರಿಂದ ದೇವರು ಭೂಮಿಯನ್ನು ನೀರಿನಿಂದ ನಾಶಪಡಿಸಿದರು. ನೋಹನ ಕುಟುಂಬದ ಎಂಟು ಮಂದಿಯನ್ನು ಹೊರತುಪಡಿಸಿ ಎಲ್ಲರೂ ಒಟ್ಟಿಗೆ ನಾಶವಾದರು. ಆದರೆ ನೋಹ ಮತ್ತು ಅವನ ಕುಟುಂಬದವರಿಗೆ ದೇವರ ದೃಷ್ಟಿಯಲ್ಲಿ ದಯೆ ದೊರಕಿತು, ಎಲ್ಲರೂ ಸಂರಕ್ಷಿಸಲ್ಪಟ್ಟರು.
ಪ್ರಿಯರೇ, ಸುರಂಗದಲ್ಲಿ ಕೆಲಸ ಮಾಡುತ್ತಿದ್ದ ಸಹೋದರನನ್ನು ಅನೇಕರು ಅಪಹಾಸ್ಯ ಮಾಡಿದರೂ, ಅವರು ದೇವರ ಮೇಲಿನ ಪ್ರೀತಿಯಲ್ಲಿ ದೃಢವಾಗಿದ್ದರು. ಆದ್ದರಿಂದ ಪ್ರಾಣವು ಅಳಿದುಹೋಗದಂತೆ ತಪ್ಪಿಸಿದರು. ನೋಹನು ದೇವರಿಗೆ ವಿಧೇಯನಾದ ಕಾರಣ, ಅವನು ಮತ್ತು ಅವನ ಕುಟುಂಬವು ಮಹಾ ಪ್ರವಾಹದಿಂದ ರಕ್ಷಿಸಲ್ಪಟ್ಟರು. ಇದೇ ರೀತಿ ನೀವು ಕಾಲೇಜ್ ಓದುತ್ತಿರುವ ಸ್ಥಳದಲ್ಲಿ, ಕೆಲಸ ಮಾಡುತ್ತಿರುವ ಸ್ಥಳದಲ್ಲಿ, ನೀವು ದೇವರಿಗಾಗಿ ಜೀವಿಸುವುದನ್ನು ಕಂಡು, ಜೊತೆಗಿರುವವರು ಗೇಲಿ ಮಾಡಿ ಪಕ್ಕಕ್ಕೆ ಇಡಬಹುದು. ಚಿಂತಿಸಬೇಡಿ, ನೀವು ಸತತವಾಗಿ ದೇವರ ವಾಕ್ಯಕ್ಕೆ ವಿಧೇಯರಾಗಿ ನಡೆಯುವಾಗ ದೇವರ ದೃಷ್ಟಿಯಲ್ಲಿ ದಯೆ ಹೊಂದುವಿರಿ. ದೇವರು ನಿಮ್ಮನ್ನು ಎಲ್ಲಾ ರೀತಿಯ ಅಪಾಯ ಮತ್ತು ಸನ್ನಿವೇಶಗಳಿಂದ ರಕ್ಷಿಸುತ್ತಾರೆ. ದೇವರು ನಿಮ್ಮೊಂದಿಗಿದ್ದಾರೆ ಎಂಬುದನ್ನು ಜನರು ತಿಳಿದುಕೊಳ್ಳುತ್ತಾರೆ. ದೇವರ ದಯೆ ನಿಮ್ಮೊಂದಿಗಿರಲಿ.
- Bro. ಕ್ರಿಸ್ಟೋಫರ್
ಪ್ರಾರ್ಥನಾ ಅಂಶ:
ನಮ್ಮ ಕ್ಯಾಂಪಸ್‌ನಲ್ಲಿ ನಿರ್ಮಿಸಲಾಗುತ್ತಿರುವ ಮಿಷನರಿ ಕೊಠಡಿಗಳಿಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482