By Village Missionary Movement
Friday, 09-Apr-2021ಧೈನಂದಿನ ಧ್ಯಾನ(Kannada) – 09.04.2021
ಮರೆಯದ ದೇವರು
"...ನಾನು ನಿನ್ನನ್ನು ಮರೆತುಬಿಡೆನು." - ಯೆಶಾಯ 44:21
ಅಂದು ದ್ವಿಚಕ್ರವಾಹನದಲ್ಲಿ ರಾಮ್ನಾಡು ಜಿಲ್ಲೆಗೆ ಸೇವೆಗೆ ಹೋಗಿದ್ದರು ನನ್ನ ಗಂಡ. ಸೇವೆಯನ್ನು ಮುಗಿಸಿ ಬಿಟ್ಟು ಹಿಂತಿರುಗುವಾಗ ಒಂದು ದೊಡ್ಡ ಅಪಘಾತ. ಹಾಕಿದ್ದ ಹೆಲ್ಮೆಟ್ ಹಾರಿ ಬಿದ್ದುಹೋಯಿತು. ಅದರ ಒಳಭಾಗದಲ್ಲೆಲ್ಲಾ ರಕ್ತ, ತಲೆಯಲ್ಲಿ ಪೆಟ್ಟಾಗಿ ಮೂಗಿನಿಂದ, ಬಾಯಿಯಿಂದ ರಕ್ತ ಸುರಿಯಲು ಪ್ರಾರಂಭಿಸಿತು. ಬಹಳ ಸೀರಿಯಸ್ ಕಂಡೀಷನ್. ಕೂಡಲೇ ಮಧುರೈ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾದ ಪರಿಸ್ಥಿತಿ. ಸಾಯಲ್ ಕುಡಿಯಿಂದ ಮಧುರೈ ಗೆ 3.30 ಗಂಟೆ ಸಮಯ. ಬಹಳ ವೇಗವಾಗಿ ಹೋಯಿತು ಅಂಬುಲೆನ್ಸ್ . ಅವರಿಗೆ ಪ್ರಜ್ಞೆಯೇ ಇರಲಿಲ್ಲ ಆಗಲೇ ನನಗೆ ಕರೆ ಬಂತು. ಬೇರೆ ಕಡೆಯಿಂದ ವಿವರಣೆ ಕೇಳಿದ ಕೂಡಲೇ ಮರುಕ್ಷಣ ಏನೂ ಯೋಚಿಸಲೂ, ಮಾಡಲು ಸಾಧ್ಯವಾಗಲಿಲ್ಲ, ಮೊಣಕಾಲೂರಿದೆನು. ದೇವರು "ನಾನು ನಿನ್ನನ್ನು ಮರೆತು ಬಿಡೆನು" ಎಂಬ ವಾಕ್ಯವನ್ನು ಹೇಳಿ ನನ್ನನ್ನು ಬಲಪಡಿಸಿದರು.
ರಾತ್ರಿ 7 ಗಂಟೆಯ ಮೇಲೆ ಆಸ್ಪತ್ರೆಯ ಒಳಗೆ ಸೇರಿಸಲ್ಪಟ್ಟರು. ಡಾಕ್ಟರ್ sorry ತಲೆಯಲ್ಲಿ ಒಂದು ದೊಡ್ಡ ಆಪರೇಷನ್ ಮಾಡಬೇಕು. ಪ್ರಾಣಕ್ಕೆ ಗ್ಯಾರಂಟಿ ಕೊಡಲು ಸಾಧ್ಯವಿಲ್ಲ. ಆದರೆ ನಮ್ಮ ಕೆಲಸವನ್ನು ನಾವು ಮಾಡುತ್ತೇವೆ. ಒಂದು ವೇಳೆ ಅವರು ಬದುಕಿದರೂ ಕೈ, ಕಾಲುಗಳು ಕಾರ್ಯ ಮಾಡದೇ ಇರಬಹುದು. ಇಲ್ಲವಾದರೆ ಹಳೆಯದನ್ನೆಲ್ಲ ಮರೆತುಬಿಡಬಹುದು. ಇಲ್ಲವಾದರೆ ಕೋಮಾ ಸ್ಟೇಜ್ ಗೆ ಹೋಗಬಹುದು ಎಂದರು. ನಮ್ಮ ಸೇವಕರೆಲ್ಲಾ ಒಂದು ಕ್ಷಣ ಹಾಗೆ ಸ್ತಬ್ಧರಾದರು. ಹೆಚ್ಚುಕಡಿಮೆ ಐದು ಗಂಟೆ ಸಮಯ ಆಪರೇಷನ್ ನಡೆಯಿತು. ಹಲವು ಗಂಟೆಗಳು ಕಳೆದು ಕಣ್ಣು ತೆರೆದರು. ಒಳಗೆ ತವಕದೊಂದಿಗೆ, ವೇದನೆಯೊಂದಿಗೆ, ಭಯದೊಂದಿಗೆ ಹೋದೆನು. ಅವರು ನನ್ನ ಹೆಸರು ಹೇಳಿ ಕರೆದು, ನನ್ನನ್ನು ನಡೆಸು ಎಂದು ಕೇಳಿದರು. ಹಲ್ಲೆಲೂಯಾ! ಕೈ ಕಾಲುಗಳು ಚೆನ್ನಾಗಿ ಕಾರ್ಯ ಮಾಡಿದವು. ಇಂದಿಗೆ ಆರು ವರ್ಷಗಳಿಂದ ದೇವರ ಸೇವೆಯನ್ನು ಕರ್ತನು ಕೊಟ್ಟ ಹೊಸ ಬಲದೊಂದಿಗೆ ನೆರವೇರಿಸುತ್ತಿದ್ದಾರೆ.
ಹೌದು, ದೇವರು ಕೊಟ್ಟ ವಾಕ್ಯ "ನಾನು ನಿನ್ನನ್ನು ಮರೆತುಬಿಡೆನು" ಎಂಬುದೇ ನನ್ನ ನಂಬಿಕೆಗೆ ಕಾರಣವಾಗಿತ್ತು. ಮರೆತು ಬಿಡೆನು ಎಂದರೆ ನೆನೆಸಿ ಕೊಳ್ಳುತ್ತಲೇ ಇದ್ದಾರೆ ಎಂದು ಅರ್ಥ. ಸರ್ವ ಭೂಮಿಯೂ ದೇವರ ಜ್ಞಾಪಕದಲ್ಲಿ ಇರುತ್ತದೆ ಒಬ್ಬರನ್ನು ಹೇಗೆ ಕೈಬಿಡಲು ಸಾಧ್ಯ? ಅವರ ಅಂಗೈಯಲ್ಲಿ ಇರುವವರೆಗೂ ಯಾರು ಕಿತ್ತುಕೊಳ್ಳಲು, ಕೆಟ್ಟದ್ದನ್ನು ಮಾಡಲು ಸಾಧ್ಯವಿಲ್ಲ. ಹೌದು, ಲೋಕದಲ್ಲಿರುವ ಯಾವ ಮನುಷ್ಯನಾದರೂ ನಮ್ಮನ್ನು ಮರೆತುಹೋಗಬಹುದು, ಆದರೆ ದೇವರು ನಮ್ಮನ್ನು ಮರೆಯುವುದಿಲ್ಲ.
ಪ್ರೀತಿಯ ಸಹೋದರನೇ, ಸಹೋದರಿಯೇ! ನನ್ನ ಜೀವನದಲ್ಲಿ ಕಣ್ಣೀರನ್ನು ಸಂತೋಷವಾಗಿ ಮಾರ್ಪಡಿಸಿದ ಕರ್ತನು, ನಿಮ್ಮ ಜೀವನದಲ್ಲಿಯೂ ಅದ್ಭುತ ಮಾಡುತ್ತಾರೆ. ಒಂದು ವೇಳೆ ನೀವು ದುಃಖದಲ್ಲಿ ಮುಳುಗಿ, ವೇದನೆಯೆಂಬ ಆಳವಾದ ಹಳ್ಳದಲ್ಲಿ ಮುಳುಗಿ ದೇವರು ನನ್ನನ್ನು ಮರೆತು ಬಿಟ್ಟರೋ? ಎಂದು ನೆನೆಸಿ ಸೋತು ಹೋಗಿದ್ದೀರ? ಕಳವಳಗೊಳ್ಳಬೇಡಿರಿ. ಅವರು ನಿಮ್ಮನ್ನು ಮರೆತಿಲ್ಲ, ಅವರು ನಿಮ್ಮ ಉಪದ್ರವವನ್ನು ನಿರ್ಲಕ್ಷ್ಯವಾಗಿ ನೆನೆಸದವರು, ನಿಮ್ಮ ಕಣ್ಣೀರನ್ನು ನೋಡುವವರು, ನಿಮ್ಮ ಅಳುವಿನ ಶಬ್ಧವನ್ನು ಕೇಳುವವರು. ಖಂಡಿತವಾಗಿ ಅದ್ಭುತ ಮಾಡುತ್ತಾರೆ. ಅವರ ಜ್ಞಾಪಕದಲ್ಲಿ ಯಾವಾಗಲೂ ನೀವು ಇದ್ದೀರೆಂಬುದನ್ನು ಮರೆತು ಹೋಗಬೇಡಿ. ಅವರು ನಿಮ್ಮನ್ನು ಎಂದಿಗೂ ಕೈಬಿಡುವುದಿಲ್ಲ.
- Mrs. ಜ್ಯೋತಿ ಆನಂದ್
ಪ್ರಾರ್ಥನಾ ಅಂಶ:-
40 ದಿನಗಳು ನಡೆಯುವಂತಹ ಈ ಕೂಟಗಳ ಹಣದ ಅವಶ್ಯಕತೆಗಳೆಲ್ಲಾ ಪೂರೈಸಲ್ಪಡುವಂತೆ ಪ್ರಾರ್ಥಿಸೋಣ.
ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.
ತಮಿಳಿಗಾಗಿ +919444011864
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482