Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 14.03.2024
Share:

By Village Missionary Movement

Thursday, 14-Mar-2024

ಧೈನಂದಿನ ಧ್ಯಾನ(Kannada) – 14.03.2024

 

ಆತ್ಮವಾ ಅಥವಾ ಮಾಂಸವಾ?

 

"…ಪವಿತ್ರಾತ್ಮನವುಗಳ ಮೇಲೆ ಮನಸ್ಸಿಡುವದು ಜೀವವೂ ಮನಶ್ಶಾಂತಿಯೂ ಆಗಿದೆ." - ರೋಮಾ 8:6

 

ಆತ್ಮನ ಮನಸ್ಸು ಎಂಬುದು ಕ್ರಿಸ್ತ ಯೇಸುವಿನಲ್ಲಿದ್ದ ಮನಸ್ಸಾಗಿದೆ. ಈ ಕಾಲಘಟ್ಟದಲ್ಲಿ ಯೇಸುವಿನ ಬೋಧನೆಗಳನ್ನು ಅನುಸರಿಸುವುದು ಕಷ್ಟ ಎಂದು ನಾವು ಭಾವಿಸುತ್ತೇವೆ. ಮತ್ತು ಬೋಧಿಸುವವರನ್ನು ಸಹ, ಅವರು ಅದರಂತೆ ನಡೆಯುವವರಾ? ಎಂದು ಅನುಮಾನಿಸುತ್ತೇವೆ. ಇದುವೇ ಆತ್ಮನ ಮನಸ್ಸನ್ನು ಸ್ವೀಕರಿಸದಂತೆ ನಮ್ಮನ್ನು ತಡೆಯುವ ಮಾಂಸದ ಮನಸ್ಸಾಗಿದೆ. ಮಾಂಸದ ಮನಸ್ಸು ಮರಣ ಎಂದು ಸತ್ಯವೇದವು ಹೇಳುವುದನ್ನು ನಿರ್ಲಕ್ಷಿಸಿ, ಸತ್ಯವೇದದ ಪ್ರಕಾರ ಜೀವಿಸದೇ ಅಂದರೆ ದೇವರನ್ನು ಮೆಚ್ಚಿಸಲು ಬದುಕುವುದಕ್ಕಿಂತ ಮಾಂಸವನ್ನು ಮೆಚ್ಚಿಸಲು, ಜನರನ್ನು ಮೆಚ್ಚಿಸಲು ಬದುಕುವುದೇ ಉತ್ತಮ ಮತ್ತು ಹೆಚ್ಚು ಪ್ರಶಂಸನೀಯವೆಂದು ಪರಿಗಣಿಸಿ ಬದುಕುತ್ತಿದ್ದಾರೆ.

 

ಕೆಲವರು ತಮ್ಮ ಕೊರತೆಗಳನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಕೊರತೆಗಳಿಂದ ಹೊರಬರಲು ಬಯಸುವುದಿಲ್ಲ. ಉದಾಹರಣೆಗೆ, ವ್ಯರ್ಥವಾದ ಅಹಂಕಾರ, ಕೋಪ, ಅಸೂಯೆ ಮತ್ತು ಹಾನಿಯಲ್ಲಿ ಧೈರ್ಯಶಾಲಿಯಾಗಿ, ಇವುಗಳು ನನ್ನಲ್ಲಿವೆ ಎಂದು ಅವರು ಒಪ್ಪುತ್ತಾರೆ. ಆದರೆ ಅದನ್ನು ತೊಡೆದುಹಾಕಲು ಬಯಸುವುದಿಲ್ಲ.

 

ಮಂಗವೊಂದು ತನ್ನ ನೆಚ್ಚಿನ ಕಡಲೆಕಾಯಿಯನ್ನು ತೆಗೆದುಕೊಳ್ಳಲು ಗಾಜಿನ ಬಾಟಲಿಗೆ ಕೈ ಚಾಚಿತು. ಕೈಯನ್ನು ಹೊರತೆಗೆಯಲು ಬರದಿದ್ದರೂ ಕಡಲೆಯನ್ನು ಹಾಕಿ ಬರಲು ಮನಸ್ಸಿಲ್ಲದ ಪ್ರಕಾರ, ಇದೇ ತಮ್ಮ ಸ್ವಭಾವ, ಇದರಿಂದ ಹೊರಬರಲು ಸಾಧ್ಯವಿಲ್ಲ ಎಂಬ ಮನೋಭಾವದಿಂದ ವರ್ತಿಸುತ್ತಾರೆ. ಅವರು ಆಧ್ಯಾತ್ಮಿಕರು ಎಂದು ಭಾವಿಸುತ್ತಾರೆ. ಆತ್ಮನ ಮನಸ್ಸು ಇಲ್ಲದ ಇವರು ಮಾಂಸದ ಮನಸ್ಸಿನ ಆಯುಧಗಳಾದ ಸುಳ್ಳು, ಹೆಮ್ಮೆ ಮತ್ತು ಅಸೂಯೆ ಎಂಬವುಗಳಿಂದ ಅನೇಕರನ್ನು ನೋಯಿಸುತ್ತಿದ್ದೇವೆಂದು ತಿಳಿಯದೇ ಇದ್ದಾರೆ. 

 

ಅನೇಕರು, ಸತ್ಯವನ್ನು ತಿಳಿದೂ, ಧೈರ್ಯವಾಗಿ ಪಾಪದಲ್ಲಿ ತೊಡಗುತ್ತಾರೆ. ಸೈತಾನನು ಹವ್ವಳನ್ನು ವಂಚಿಸಿದಂತೆ, ಅವರು ಸೈತಾನನಿಂದ ಮೋಸಗೊಳಿಸಲ್ಪಟ್ಟಿದ್ದಾರೆ ಮತ್ತು ಅನೇಕರನ್ನು ಮೋಸಗೊಳಿಸುತ್ತಿದ್ದಾರೆ. ಸೈತಾನನ ತಂತ್ರಗಳು ನಮಗೆ ತಿಳಿದಿಲ್ಲವಾದ್ದರಿಂದ, ಇವುಗಳು ಸೈತಾನನ ಕುತಂತ್ರದಿಂದ ಉಂಟಾದ ಪ್ರತಿಭೆಗಳಾಗಿವೆ. ನಮ್ಮಲ್ಲಿರುವ ಪ್ರತಿಭೆಗಳು ಮಾಂಸದ ಮನಸ್ಸಿನಿಂದ ಹುಟ್ಟಿವೆಯೇ? ಆತ್ಮನ ಮನಸ್ಸಿನಿಂದ ಉಂಟಾಗಿದೆಯೇ? ಎಂದು ಶೋಧಿಸಿ ನೋಡೋಣ. ಇತರರಿಗೆ ಹಾನಿ ಮಾಡುವ ಉದ್ದೇಶದಿಂದ ನಾವು ನಿರಪರಾಧಿಗಳನ್ನು ದೂಷಿಸುತ್ತಿದ್ದೇವೆಯೇ? ಇರುವುದನ್ನು ಇರುವ ಹಾಗೆ, ಇಲ್ಲದಿದ್ದನ್ನು ಇಲ್ಲದ ಹಾಗೆ ಹೇಳುತ್ತಿದ್ದೇವೆಯೇ? ನಮ್ಮ ಅರ್ಪಣೆಗಳು ದೇವರಿಗೆ ಇಷ್ಟವಾಗಬೇಕೆಂದು ನಾವು ಬಯಸುತ್ತಿದ್ದೇವೆಯೇ? ನಾವು ಎಲ್ಲರೊಂದಿಗೆ ಸಮಾಧಾನದಿಂದಿದ್ದೇವೆಯೇ? ಎಂದು ಯೋಚಿಸೋಣ. ಇಲ್ಲದಿದ್ದರೆ, ನಮ್ಮ ಸಮರ್ಪಣೆಯು ಕುಷ್ಠರೋಗಿಯ ಕೈಯಿಂದ ಹಾಳುಮಾಡುವ ಲಡ್ಡುವಿನ ಹಾಗಿರುತ್ತದೆ. ಆದ್ದರಿಂದ, ನಾವು ಆತ್ಮನ ಮನಸ್ಸನ್ನು ಧರಿಸಿಕೊಳ್ಳೋಣ.

- Bro. ಸೆಲ್ವರಾಜ್

 

ಪ್ರಾರ್ಥನಾ ಅಂಶ:

ನಮ್ಮ ಮಿಷನರಿಗಳ ಮಕ್ಕಳ ಶಾಲಾ ಕಾಲೇಜು ಅಗತ್ಯಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al Elexbet matbet giriş matbet instagram unban x unban twitter unban palacebet setrabet