By Village Missionary Movement
Friday, 15-Mar-2024ಧೈನಂದಿನ ಧ್ಯಾನ(Kannada) – 15.03.2024
ವೇದವೇ ಸತ್ಯ
"ನಿನ್ನ ಧರ್ಮಶಾಸ್ತ್ರವು ನನಗೆ ಎಷ್ಟೋ ಪ್ರಿಯವಾಗಿದೆ; ದಿನವೆಲ್ಲಾ ಅದೇ ನನ್ನ ಧ್ಯಾನ" - ಕೀರ್ತನೆ 119:97
ಸತ್ಯವೇದವನ್ನು ಇಂಗ್ಲಿಷ್‌ಗೆ ಅನುವಾದಿಸದ ಸಮಯದಲ್ಲಿ, ಇಂಗ್ಲೆಂಡ್‌ನ ವಿಲಿಯಂ ಟಿಂಡೇಲ್ ಎಲ್ಲರೂ ಬೈಬಲ್ ಓದಬೇಕೆಂದು ಬಯಸಿದ್ದರು. ರೋಮನ್ ಕ್ಯಾಥೋಲಿಕ್ ಚರ್ಚಿನ ಕಾನೂನಿನ ಪ್ರಕಾರ, ಬೈಬಲ್ ಕೇವಲ ಬೋಧಕರುಗಳ ಕೈಯಲ್ಲಿ ಮಾತ್ರವಿತ್ತು. ಪಾಪ ಕ್ಷಮಾಪಣೆಯ ಚೀಟಿ, ವಿಗ್ರಹಾರಾಧನೆ ಮತ್ತು
ಬೋಧಕರ ಐಷಾರಾಮಿ ಜೀವನದಂತಹ ಸತ್ಯವೇದಕ್ಕೆ ವಿರೋಧವಾದ ಕಾರ್ಯಗಳು ಅತಿರೇಕವಾಯಿತು. ಸಾಮಾನ್ಯ ಜನರು ಸಹ ಸತ್ಯವೇದವನ್ನು ಓದಬೇಕೆಂಬ ಭರವಸೆಯಿಂದ ಟಿಂಡೇಲ್ ಹೊಸ ಒಡಂಬಡಿಕೆಯನ್ನು ಭಾಷಾಂತರಿಸಲು ಬಯಸಿದ್ದರು.
1524 ನೇ ಷರ್ಷದಲ್ಲಿ ಅವರು ಜರ್ಮನಿಗೆ ಹೋಗಿ ಮಾರ್ಟಿನ್ ಲೂಥರ್ ಅವರನ್ನು ಭೇಟಿಯಾಗಿ ಅಲ್ಲಿಯೇ ಭಾಷಾಂತರಿಸಲು ಪ್ರಾರಂಭಿಸಿದರು. ಭಾಷೆ ಗೊತ್ತಿಲ್ಲದ ಅವರು ಒಂದೇ ವರ್ಷದಲ್ಲಿ ತುಂಬಾ ಕಷ್ಟಪಟ್ಟು ಓದಿದರು. 1525 ರಲ್ಲಿ, ಅವರು ತಮ್ಮ ಅನುವಾದಿತ ಇಂಗ್ಲಿಷ್ ಬೈಬಲ್ ಅನ್ನು ಜರ್ಮನಿಯಲ್ಲಿ ಹೊರಬಿಟ್ಟರು. ಅವರು 1526 ರಲ್ಲಿ ಇಂಗ್ಲೀಷಿನಲ್ಲಿ ಮುದ್ರಿತ ಬೈಬಲ್ಗಳನ್ನು ಇಂಗ್ಲೆಂಡಿಗೆ ತಂದರು. ಅದನ್ನು ತಿಳಿದ ಬ್ರಿಟೀಷ್ ಸರ್ಕಾರವು ಇದು ಕ್ರೈಸ್ತ ಧರ್ಮಕ್ಕೆ ವಿರುದ್ಧವಾದದ್ದು ಎಂದು ಅವರನ್ನು ಸುಟ್ಟು ಹಾಕಿತು.
1528 ರಲ್ಲಿ ಟಿಂಡೇಲ್ ಸರ್ಕಾರಕ್ಕೆ ವಿರುದ್ಧವಾದವರು ಎಂದು ಘೋಷಿಸಲಾಯಿತು. 1530 ರಲ್ಲಿ ಕಿಂಗ್ ಎಂಟನೇ ಹೆನ್ರಿ ಅವರನ್ನು ಬಂಧಿಸಲು ಪ್ರಯತ್ನಿಸಿದರು. ಐದು ವರ್ಷಗಳು ತಲೆಮರೆಸಿಕೊಂಡ ನಂತರ, ಟಿಂಡೇಲ್ ಸ್ನೇಹಿತನೇ ಪೋಲೀಸರಿಗೆ ತೋರಿಸಿಕೊಟ್ಟನು, ಆಗ ಜೈಲಿನಲ್ಲಿ ಬಂಧಿಸಲ್ಪಟ್ಟು ಬಹಳ ಚಿತ್ರಹಿಂಸೆಗೊಳಗಾದರು. ಅಕ್ಟೋಬರ್ 6, 1536 ರಂದು, ಅವರನ್ನು ಕತ್ತು ಹಿಸುಕಿ, ಮರಕ್ಕೆ ಕಟ್ಟಿ, ಜೀವಂತವಾಗಿ ಸುಡಲಾಯಿತು. ಆಗ ಟಿಂಡೇಲ್ ಅವರು ಹೇಳಿದ ಮಾತು, "ದೇವರೇ ಇಂಗ್ಲೆಂಡ್ ಸರ್ಕಾರದ ಕಣ್ಣುಗಳನ್ನು ತೆರೆಯಿರಿ" ಈ ಪ್ರಾರ್ಥನೆಯು ಕೇಳಲ್ಪಟ್ಟಿತು. ಅವರ ಮರಣದ ಮೂರು ವರ್ಷಗಳ ನಂತರ, ಬೈಬಲ್ ಅನ್ನು ಇಂಗ್ಲೆಂಡ್ನ ರಾಜ ಎಂಟನೇ ಹೆನ್ರಿ ಮುದ್ರಿಸಿ ವಿತರಿಸಲಾಯಿತು. ಟಿಂಡೇಲ್‌ನಂತಹ ಎಷ್ಟು ಜನರು ಬೈಬಲ್‌ಗಾಗಿ ತಮ್ಮ ಪ್ರಾಣವನ್ನು ಕೊಟ್ಟಿದ್ದಾರೆಂದು ಯೋಚಿಸಿ.
ನನಗೆ ಪ್ರಿಯರಾದವರೇ, ನಮ್ಮ ಕೈಯಲ್ಲಿರುವ ಸತ್ಯವೇದಕ್ಕೆ ನಾವು ಎಷ್ಟು ಪ್ರಾಮುಖ್ಯತೆ ನೀಡುತ್ತಿದ್ದೇವೆ? ಪ್ರತಿನಿತ್ಯ ಸತ್ಯವೇದವನ್ನು ಪ್ರೀತಿಸಿ, ಓದಿ, ಉಸಿರಾಗಿ ಆಸ್ವಾದಿಸಿ ಅದನ್ನು ಚೆನ್ನಾಗಿ ಸವಿದವರಂತೆ ಬದುಕಬೇಕು. ನಾವು ಪ್ರತಿನಿತ್ಯ ಸತ್ಯವೇದವನ್ನು ಓದಬೇಕು ಮತ್ತು ನಮ್ಮ ಸುತ್ತಲೂ ಇರುವ ಎಲ್ಲಾ ಸ್ಥಳಗಳಲ್ಲಿ ವಾಕ್ಯಗಳನ್ನು ಬಿತ್ತುವವರಾಗಿ ಬದುಕಬೇಕು. ಯೆರೆಮಿಯನಂತೆಯೇ, ನಾನು ನಿಮ್ಮ ಮಾತುಗಳು ದೊರೆತ ಕೂಡಲೇ ಅವುಗಳನ್ನು ಅಂಗೀಕರಿಸಿದೆ, ನಿಮ್ಮ ಮಾತುಗಳು ನನಗೆ ಸಂತೋಷವೂ, ಮತ್ತು ನನ್ನ ಹೃದಯಕ್ಕೆ ಆನಂದವಾಗಿಯೂ ಇತ್ತು ಎಂದು ಸಾಕ್ಷಿ ಹೇಳಿ ವಾಕ್ಯದ ಪ್ರಕಾರ ಬದುಕಲು ದೇವರು ಕೃಪೆ ನೀಡಲಿ! ಆಮೆನ್!!
- Mrs. ಸರೋಜಾ ಮೋಹನ್ ದಾಸ್
ಪ್ರಾರ್ಥನಾ ಅಂಶ:
ನಮ್ಮ ಕ್ಯಾಂಪಸ್‌ನಲ್ಲಿ ನಡೆಯುವ ಟ್ಯೂಶನ್ ಸೆಂಟರ್ ಮೂಲಕ ಎಲ್ಲಾ ವಿದ್ಯಾರ್ಥಿಗಳು ಮತ್ತು ಎಲ್ಲಾ ಶಿಕ್ಷಕರು ಯೇಸುವಿನ ಪ್ರೀತಿಯನ್ನು ರುಚಿ ನೋಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482