Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 30.03.2024
Share:

By Village Missionary Movement

Saturday, 30-Mar-2024

ಧೈನಂದಿನ ಧ್ಯಾನ(Kannada) – 30.03.2024

 

ತೀರಿತು 

 

"…“ತೀರಿತು” ಎಂದು ಹೇಳಿ ತಲೇಬಾಗಿಸಿ ಆತ್ಮವನ್ನು ಒಪ್ಪಿಸಿಕೊಟ್ಟನು" - ಯೋಹಾನ 19:30

 

ನಾನು ಅರವತ್ತು ವರ್ಷದಲ್ಲಿ ಆತನಿಗಾಗಿ ಏನಾದರೂ ಮಾಡಲು ಸಾಧ್ಯವಾ ಎಂದು ಯೋಚಿಸಿದೆ. ಈ ವಯಸ್ಸಿನಲ್ಲಿ ಯಾರು ನನ್ನನ್ನು ಸೇವೆಗೆ ಕರೆಯುತ್ತಾರೆ, ಇನ್ಮುಂದೆ ಪ್ರಾಮಾಣಿಕವಾಗಿ ಬದುಕಬೇಕಷ್ಟೇ ಎಂದು ಭಾವಿಸಿದೆ. ಆದರೆ ಎಂಟು ವರ್ಷಗಳ ನಂತರ ದಿಢೀರನೆ ಗ್ರಾಮ ಮಿಷನರಿ ಸೇವೆಯಿಂದ ಕರೆ ಬಂತು. ನಾನು ತುಂಬಾ ಸಂತೋಷದಿಂದ ಒಪ್ಪಿಕೊಂಡೆ. ಏಕೆಂದರೆ ಈ ವಯಸ್ಸಿನಲ್ಲೂ ದೇವರ ಚಿತ್ತವನ್ನು ಮಾಡಲು ನನಗೆ ಅವಕಾಶ ಸಿಕ್ಕಿತಲ್ಲಾ ಎಂಬ ಸಂತೋಷ. ನಾನು ಐದು ವರ್ಷಕ್ಕೂ ಹೆಚ್ಚು ಕಾಲ ಇಲ್ಲಿ ಸೇವೆ ಮಾಡುತ್ತಿದ್ದೇನೆ. ನನ್ನ ಜೀವನದ ಕೊನೆಯವರೆಗೂ ಸೇವೆಯಲ್ಲಿ ಮುಂದುವರೆಯಲು ನನ್ನನ್ನು ಅವರ ಕೈಗಳಲ್ಲಿ ಒಪ್ಪಿಸಿದ್ದೇನೆ.

 

ಯೇಸು ಕ್ರಿಸ್ತನು ತೀರಿತು ಎಂದು ಹೇಳಿದ ಮಾತು ತಂದೆಯು ಯಾವ ಉದ್ದೇಶಕ್ಕಾಗಿ ಆತನನ್ನು ಭೂಮಿಗೆ ಕಳುಹಿಸಿದರೋ ಆ ಉದ್ದೇಶವನ್ನು ಪೂರ್ಣಗೊಳಿಸಿದ ಕಾರಣ ಹೀಗೆ ಹೇಳಿದರು. ತಂದೆಯ ಚಿತ್ತವನ್ನು ನೆರವೇರಿಸುವುದೇ ನನ್ನ ಆಹಾರವಾಗಿದೆ ಎಂದರು. ಹೀಗೆ ಬದುಕಿ ಜೀವಬಲಿಯಾಗಿ ತನ್ನನ್ನು ಒಪ್ಪಿಸಿ ಕೊಟ್ಟು, ಮಾಡಿ ಮುಗಿಸಿದರು. "ತೀರಿತು" ಎಂಬ ಮಾತನ್ನು ಅವರು ಹೇಳುವ ಮೊದಲು ಪರದೆಯು ಎರಡಾಗಿ ಹರಿಯಿತು. ಇದು ತಂದೆಯೊಂದಿಗೆ ಮಾನವಕುಲವು ಒಂದಾದದ್ದನ್ನು ಸೂಚಿಸುತ್ತಿದೆ.

 

ಹೀಗೆ, ಮಣ್ಣು ಭೂವಿುಗೆ ಸೇರಿ ಇದ್ದ ಹಾಗಾಗುವದು; ಆತ್ಮವು ತನ್ನನ್ನು ದಯಪಾಲಿಸಿದ ದೇವರ ಬಳಿಗೆ ಸೇರುವದು; ಇಷ್ಟರೊಳಗಾಗಿ [ನಿನ್ನ ಸೃಷ್ಟಿಕರ್ತನನ್ನು ಸ್ಮರಿಸದಿರಬೇಡ.] (ಪ್ರಸಂಗಿ 12:7) ಎಂದು ಹೇಳಿದ್ದಾರೆ. ಏಕೆಂದರೆ ದೇವರು ನಮ್ಮ ಪ್ರತಿಯೊಂದು ಕ್ರಿಯೆಯನ್ನು ಪರಿಶೀಲಿಸಿ ತಿಳಿದುಕೊಳ್ಳುವವರಾಗಿದ್ದಾರೆ. ಅಷ್ಟೇ ಅಲ್ಲ, ಪ್ರಸಂಗಿ 12:14 ರಲ್ಲಿ ಒಳ್ಳೇದಾಗಲಿ ಕೆಟ್ಟದಾಗಲಿ ಸಕಲ ರಹಸ್ಯ ಸಂಗತಿಗಳನ್ನು ವಿಮರ್ಶಿಸುವ ನ್ಯಾಯವಿಚಾರಣೆಗೆ ದೇವರು ಪ್ರತಿಯೊಂದು ಕಾರ್ಯವನ್ನು ಗುರಿಮಾಡುವನು ಎಂದು ಹೇಳಲಾಗಿದೆ. ಆದುದರಿಂದ ದೇವರನ್ನು ಜೊತೆಗಾರನಾಗಿಟ್ಟುಕೊಂಡು ಪ್ರತಿದಿನವೂ ಆತನ ರಕ್ತದಿಂದ ತೊಳೆಯಲ್ಪಟ್ಟು ದೇವರ ಯೋಜನೆಯನ್ನು ನಾವು ಪೂರೈಸಿ ನಂಬಿಕೆಯಿಂದ ಮುನ್ನಡೆದರೆ, ಪೌಲನಂತೆ ಓಟವನ್ನು ಮುಗಿಸಿದೆ ಎಂದು ಜಯಘೋಷದಿಂದ ಹೇಳಲು ಸಾಧ್ಯ.

 

ಇದನ್ನು ಓದುತ್ತಿರುವ ಪ್ರಿಯರೇ, ಈ ಲೋಕದಲ್ಲಿ ದೇವರು ನಿಮ್ಮನ್ನು ಇಟ್ಟಿರುವುದಕ್ಕೆ ಒಂದು ಉದ್ದೇಶವಿದೆ. ಆ ಉದ್ದೇಶವನ್ನು ಅರಿತು ಅದನ್ನು ಈಡೇರಿಸಲು ಪ್ರಯತ್ನಿಸಿ. ದೇವರು ನಿಮ್ಮ ಆಸೆಯನ್ನು ಈಡೇರಿಸುತ್ತಾರೆ. ನಾನು ದೇವರ ಚಿತ್ತಕ್ಕೆ ನನ್ನನ್ನು ಒಪ್ಪಿಸಿಕೊಟ್ಟಾಗ ಇಲ್ಲಿಯವರೆಗೆ ಅದನ್ನು ಪೂರೈಸಲು ಕೃಪೆ ತೋರಿದ ದೇವರು ನಿಮಗೂ ಕೃಪೆ ತೋರುತ್ತಾರೆ. ಕ್ರಿಸ್ತನು ತಂದೆಯ ಚಿತ್ತವನ್ನು ಮುಗಿಸಿದಂತೆ, ಪೌಲನು ಓಟವನ್ನು ಮುಗಿಸಿದಂತೆ ನಾವು ಸಹ ವಿಜಯದೊಂದಿಗೆ ಓಟವನ್ನು ಮುಗಿಸೋಣ.

- Bro. ಜೋಸೆಫ್ ಕನಕರಾಜ್

 

ಪ್ರಾರ್ಥನಾ ಅಂಶ:

ನಮ್ಮ ಮಾಧ್ಯಮ ಸೇವೆಗಳಿಗೆ ಸಮರ್ಪಣೆಯುಳ್ಳ ಸೇವಕರು ಸಿಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking perabet casibom holiganbet galabet casibom grandpashabet perabet perabet giriş padişahbet padişahbet giriş grandpashabet kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino matbet