Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 31.03.2024 (Kids Special)
Share:

By Village Missionary Movement

Sunday, 31-Mar-2024

ಧೈನಂದಿನ ಧ್ಯಾನ(Kannada) – 31.03.2024 (Kids Special)

 

ಪುನರುತ್ಥಾನರಾದರೇ!

 

"ಸತ್ತವನಾದೆನು, ಮತ್ತು ಇಗೋ ಯುಗಯುಗಾಂತರಗಳಲ್ಲಿಯೂ ಬದುಕುವವನಾಗಿದ್ದೇನೆ;…" - ಪ್ರಕಟಣೆ. 1:18

 

ಹಲೋ ಪುಟಾಣಿಗಳೇ, ಚೆನ್ನಾಗಿದ್ದೀರಾ? Exam ನಡೆಯುತ್ತಿದಿಯಾ? Sunday school ಗೆ ಹೋಗಬೇಕು. ಯೇಸಪ್ಪಾಗೆ ಇಷ್ಟವಾಗುವ ರೀತಿಯಲ್ಲಿ ನಿಮ್ಮ ಸಮಯವನ್ನು ಕಳೆಯಬೇಕು. Ok ನಾ. ಸರಿ, ಇಂದು ಯಾವ ದಿನ ಅಂತ ನಿಮಗೆ ಗೊತ್ತಾ? . . ಈಸ್ಟರ್. Very good. ಯೇಸು ಪುನರುತ್ಥಾನಗೊಂಡ ದಿನವೇ ಈಸ್ಟರ್. ಪಾಪ, ಶಾಪ ಮತ್ತು ಮರಣದಿಂದ ನಮ್ಮನ್ನು ಬಿಡುಗಡೆಗೊಳಿಸಿ ನಮಗಾಗಿ ಶಿಲುಬೆಯಲ್ಲಿ ಮರಣ ಹೊಂದಿದ ಯೇಸು ಕ್ರಿಸ್ತನು ಗೆದ್ದ ದಿನ. ಇದು ಮನುಕುಲಕ್ಕೆ ಸಂತಸದ ದಿನ.

 

ಎಲ್ಲೆಡೆ ಕತ್ತಲೆಯಾಗಿದ್ದಾಗ, ಮಾನವ ಸಂಚಾರವಿಲ್ಲದ ಮುಂಜಾನೆ ವೇಳೆಯಲ್ಲಿ ಮಗ್ದಲದ ಮರಿಯ ಅಕ್ಕ ಮತ್ತು ಅವರ ಸ್ನೇಹಿತರು ಯೇಸುವಿನ ಸಮಾಧಿಗೆ ಹೋದರು. ಸತ್ತು ಎರಡು ದಿನಗಳಾದರೂ ಯೇಸುವನ್ನು ಶಿಲುಬೆಗೆ ಹಾಕಿದ್ದನ್ನು ಮತ್ತು ಅವರ ದೇಹದಿಂದ ಸುರಿದ ರಕ್ತವನ್ನೂ ಅವರಿಂದ ಮರೆಯಲು ಸಾಧ್ಯವಾಗಲಿಲ್ಲ. ಅದನ್ನೇ ಯೋಚಿಸುತ್ತಾ ಅಳುತ್ತಲೇ ಇದ್ದರು. ಯಾವ ಪಾಪವನ್ನೂ ಮಾಡದ ಯೇಸು ನಮಗಾಗಿ ಶಿಲುಬೆಯ ಮೇಲೆ ಮರಣಹೊಂದಿದರೇ! ಎಂದು ಯೋಚಿಸುವಾಗ ಅವರಿಗೆ ಆ ಕತ್ತಲು ಅಷ್ಟೇನೂ ದೊಡ್ಲದಾಗಿ ಅನಿಸಲಿಲ್ಲ. ಅವರು ಯೇಸುವಿನ ದೇಹಕ್ಕೆ ಪರಿಮಳ ದ್ರವ್ಯವನ್ನು ಹಚ್ಚಲು ಸಮಾಧಿಗೆ ಹೋದರು. ಸಮಾಧಿ ತೆರೆದಿರುವುದನ್ನು ಕಂಡು ಆಶ್ಚರ್ಯಪಟ್ಟರು. ಒಳಗೆ ಹೋದಾಗ ಯೇಸು ಇರಲಿಲ್ಲ. ಪ್ರಕಾಶಮಾನವಾದ ಮತ್ತು ಸುಂದರವಾದ ದೇವದೂತನನ್ನು ನೋಡಿದರು. ಅವರಿಗೆ ಹೆದರಿ ನಡುಗಿ ಸತ್ತವರ ಹಾಗಾದರು. ತಕ್ಷಣವೇ ದೇವದೂತನು, "ಹೆದರಬೇಡಿರಿ; ಶಿಲುಬೆಗೆ ಹಾಕಲ್ಪಟ್ಟಿದ್ದ ಯೇಸುವನ್ನು ಹುಡುಕುತ್ತೀರೆಂದು ಬಲ್ಲೆನು; ಆತನು ಇಲ್ಲಿ ಇಲ್ಲ; ತಾನು ಹೇಳಿದಂತೆ ಎದ್ದಿದ್ದಾನೆ; ನೀವು ಹೋಗಿ ಈ ಸಂದೇಶವನ್ನು ಆತನ ಶಿಷ್ಯರಿಗೆ ಹೇಳಿರಿ" ಎಂದರು. ಒಂದೆಡೆ ಭಯವಿದ್ದರೂ, ಯೇಸು ಸತ್ತವರೊಳಗಿಂದ ಎದ್ದನು ಎಂಬ ಸಂತೋಷ ಹೃದಯದಲ್ಲಿ ಉಕ್ಕಿ ಹರಿಯಿತು. ಅವರು ಸಮಾಧಿಯಿಂದ ಹೊರಬಂದು ವೇಗವಾಗಿ ಓಡಿದರು. ಯೇಸು ಅವರ ಮುಂದೆ ಕಾಣಿಸಿಕೊಂಡನು. "ಅಯ್ಯೋ ಏನಿದು ಆತ್ಮವಾ?" ಎಂದು ಹೆದರಿದರು. ಯೇಸು ಅವರನ್ನು ನೋಡಿ, "ಆಶೀರ್ವಾದವಾಗಿರುವಿರಿ" ಎಂದು ಹರಸಿದರು. ಅವರು ಯೇಸುವಿಗೆ ನಮಸ್ಕರಿಸಿದರು. ಆತನನ್ನು ನೋಡಿದ ಆನಂದದಿಂದ ಓಡಿಬಂದು ಅಳುತ್ತಿದ್ದ ಶಿಷ್ಯರಿಗೆ ಈ ಶುಭವಾರ್ತೆಯನ್ನು ತಿಳಿಸಿದರು. ಅವರ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಮಗ್ದಲದ ಮರಿಯಳು ಯೇಸುವಿನ ಮೇಲೆ ಇಟ್ಟಿದ್ದ ಪ್ರೀತಿಯನ್ನು ಅವರು ಮರೆಯಲಿಲ್ಲ. ಪುನರುತ್ಥಾನದ ನಂತರ ಯೇಸುವನ್ನು ಮೊದಲು ನೋಡುವ ಭಾಗ್ಯವು ಮೊದಲು ಆ ಅಕ್ಕನಿಗೇ ಲಭಿಸಿತು. 

 

ಪ್ರೀತಿಯ ತಮ್ಮ ತಂಗಿ, ಈ ಲೋಕದಲ್ಲಿ ಎಲ್ಲಾ ಸಮಾಧಿಗಳು ಮುಚ್ಚಲ್ಪಟ್ಟಿವೆ. ಆದರೆ ಯೇಸಪ್ಪನ ಸಮಾಧಿ ಮಾತ್ರ ತೆರೆದಿದೆ. ಯೇಸು ಜೀವಂತವಾಗಿ ಎದ್ದು ಬಿಟ್ಟರು. ಅವರು ಇಂದಿಗೂ ಜೀವಂತವಾಗಿದ್ದಾರೆ. ಅವರು ನಮಗಾಗಿ ತನ್ನ ಪ್ರಾಣವನ್ನೇ ಕೊಟ್ಟರು. ಇತರ ಆಶೀರ್ವಾದಗಳನ್ನು ಕೊಡದೇ ಇರುತ್ತಾರಾ? ಖಂಡಿತವಾಗಿಯೂ ಕೊಡುತ್ತಾರೆ, ನೀನು ಅವರ ಮಗುವಾಗಿ ಮಾರ್ಪಟ್ಟರೆ ಮಾತ್ರವೇ!

- Mrs. ಜೀವಾ ವಿಜಯ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking perabet casibom holiganbet galabet casibom grandpashabet perabet perabet giriş padişahbet padişahbet giriş grandpashabet kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino matbet