Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 01.04.2024
Share:

By Village Missionary Movement

Monday, 01-Apr-2024

ಧೈನಂದಿನ ಧ್ಯಾನ(Kannada) – 01.04.2024

 

ಹೊರಡೋಣ

 

"ನನ್ನನ್ನು ಕಳುಹಿಸಿದಾತನ ಕಾರ್ಯಗಳನ್ನು ನಾವು ಹಗಲಿರುವಾಗಲೇ ನಡಿಸಬೇಕು. ರಾತ್ರಿ ಬರುತ್ತದೆ, ಅದು ಬಂದ ಮೇಲೆ ಯಾರೂ ಕೆಲಸ ಮಾಡಲಾರರು" - ಯೋಹಾನ 9: 4

 

ರಾತ್ರಿ ಪ್ರಾರ್ಥನೆಯ ಕುರಿತಾದ ಉತ್ತಮ ಅರಿವು ಎಲ್ಲಾ ಸಭೆಗಳಲ್ಲಿ ಕಂಡುಬರುತ್ತಿದೆ. ಸಭೆ‌ಯಾವುದೇ ಇರಲಿ, ಭಾನುವಾರದ ಆರಾಧನೆ ಯೊಂದಿಗೆ ಸುಮ್ಮನಾಗದೆ ಉಪವಾಸ ಪ್ರಾರ್ಥನೆ, ರಾತ್ರಿ ಪ್ರಾರ್ಥನೆ ಹೀಗೆ ಚರ್ಚ್‌ನ ಮಾಸಿಕ ವೇಳಾಪಟ್ಟಿಯಲ್ಲಿರುವುದನ್ನು ಕಾಣಬಹುದು. ಇಂದಿನ ಧ್ಯಾನದಲ್ಲಿ ನಾವು ಸತ್ಯವೇದದ ಆಧಾರದ ಮೇಲೆ ರಾತ್ರಿಯ ಪ್ರಾರ್ಥನೆಯ ಕುರಿತು ಧ್ಯಾನಿಸಲಿದ್ದೇವೆ.

 

ನಮ್ಮ ಕರ್ತನಾದ ಯೇಸು ತಮ್ಮ ಸೇವೆಯ ಸಮಯದಲ್ಲಿ ಅಧಿಕವಾಗಿ ರಾತ್ರಿ ಪ್ರಾರ್ಥನೆಗಳಲ್ಲಿ ಸತತವಾಗಿ ಪ್ರಾರ್ಥಿಸುತ್ತಾ ಬಂದರು‌. (ಮಾರ್ಕ 1:35, ಲೂಕ 6:12, 21:37) ರಾತ್ರಿಯಲ್ಲಿ ಪ್ರಾರ್ಥಿಸಿಬಿಟ್ಟು ದಿನವಿಡೀ ವಿಶ್ರಾಂತಿ ತೆಗೆದುಕೊಳ್ಳುವುದು ಅವರ ಅಭ್ಯಾಸವಾಗಿತ್ತು ಎಂಬುದನ್ನು ಸತ್ಯವೇದದಲ್ಲಿ ನಾವು ಎಲ್ಲಿಯೂ ಓದಲು ಸಾಧ್ಯವಿಲ್ಲ. ಅವರು ರಾತ್ರಿಯಿಡೀ ಪ್ರಾರ್ಥಿಸಿದರು. ಹಗಲಿನಲ್ಲಿ ತಿರುಗಾಡುತ್ತಾ ಸೇವೆ ಮಾಡಿದರು. ಇದುವೇ ಯೇಸುಕ್ರಿಸ್ತನು ನಮಗೆ ತೋರಿಸಿದ ಮೂಲಮಾದರಿಯ ಸೇವೆಯಾಗಿದೆ. ರಾತ್ರಿಯ ಪ್ರಾರ್ಥನೆಯ ಬಗ್ಗೆ ಹೆಚ್ಚು ಆಸಕ್ತಿಯಿಂದ ಮಾತನಾಡುವ ಈಗಿನ ಸಭೆಯ ಸೇವಕರು ಮತ್ತು ಸುವಾರ್ತಾಬೋಧಕರು ಸಹ ಹಗಲಿನಲ್ಲಿ ಹೊರಗೆ ಹೋಗಿ ಸೇವೆ ಮಾಡಬೇಕೆಂದು ಕಲಿಸುವುದು ಸರಿಯಾಗಿದೆ. ಕ್ರಿಯೆ ಮಾಡದೆ ಪ್ರಾರ್ಥನೆ ಮಾತ್ರ ಮಾಡುವುದು ಸರಿಯಲ್ಲ. ಇಂದಿನ ಶೀರ್ಷಿಕೆಯ ವಾಕ್ಯದಲ್ಲಿ ನಾವು ಓದುವಾಗ ಅದನ್ನು ಅರ್ಥಮಾಡಿಕೊಳ್ಳಬಹುದು.

 

ರಾತ್ರಿಯ ಪ್ರಾರ್ಥನೆ ಮತ್ತು ಉಪವಾಸ ಪ್ರಾರ್ಥನೆಯ ಬಗ್ಗೆ ಗಂಭೀರವಾಗಿ ಮಾತನಾಡುತ್ತಾ, ಬೋಧಿಸುತ್ತಾ ಇರುವ ನಮ್ಮ ಸಭೆಯವರೂ ಸಹ ಹೊರಗೆ ಹೋಗಿ ಸೇವೆ ಮಾಡಬೇಕು ಎಂಬುದನ್ನು ಏಕೆ ಮರೆತುಬಿಟ್ಟರು ಎಂಬುದು ನಮಗೆ ಅರ್ಥವಾಗುತ್ತಿಲ್ಲ. ಇಂದಿನ ಸಂದೇಶದಲ್ಲಿ ಪವಿತ್ರಾತ್ಮನು ನಿಮಗೆ ಹೇಳುತ್ತಿರುವುದೇನೆಂದರೆ ಪ್ರಾರ್ಥನೆ ಮಾಡುವುದರೊಂದಿಗೆ ಸುಮ್ಮನಾಗದೆ ಹೊರಗೆ ಹೋಗಿ ಸೇವೆ ಮಾಡಿರಿ. ಚಾರ್ಲ್ಸ್ ಪಿನ್ನಿ, E.M. ಪೌಂಡ್ಸ್ ಮತ್ತು ಜಾನ್ ಹೈಡ್ ಅವರಂತಹ ಅಸಂಖ್ಯಾತ ದೇವರ ಸೇವಕರ ಇತಿಹಾಸವನ್ನು ನೀವು ಹಿಂತಿರುಗಿ ನೋಡಿದರೆ, ಅವರು ರಾತ್ರಿಯಿಡೀ ಪ್ರಾರ್ಥಿಸಿದರು. ದಿನವಿಡೀ ಅಲೆದಾಡಿ ಸೇವೆ ಮಾಡಿದರು ಎಂದು ಅವರ ಬಗ್ಗೆ ಬರೆದಿರುವುದನ್ನು ನಾವು ಓದಬಹುದು. ನಮ್ಮ ದೇಶಕ್ಕೆ ಸೇವೆ ಸಲ್ಲಿಸಿದ ಸಾಧುಸುಂದರ್‌ಸಿಂಗ್ ಅವರು ರಾತ್ರಿಯಿಡೀ ಪ್ರಾರ್ಥಿಸುತ್ತಾರೆ. ಹಗಲಿನಲ್ಲಿ ಹಿಮಾಲಯ ಪ್ರದೇಶಗಳಲ್ಲಿ ತಿರುಗಾಡಿ ಸೇವೆ ಮಾಡಿ ಅನೇಕ ಆತ್ಮಗಳನ್ನು ಯೇಸುವಿನ ಬಳಿಗೆ ಕರೆದೊಯ್ಯುತ್ತಿದ್ದರು ಎಂದು ಅವರ ಬಗ್ಗೆ ನಾವು ಓದಬಹುದು. ಕ್ರಿಸ್ತನಲ್ಲಿ ಪ್ರಿಯರೇ, ರಾತ್ರಿಯ ಪ್ರಾರ್ಥನೆಗೆ ನಾವು ಎಷ್ಟು ಪ್ರಾಮುಖ್ಯತೆಯನ್ನು ನೀಡುತ್ತೇವೋ ಅದೇ ರೀತಿ ಹೊರಗೆ ಹೋಗಿ ಆತ್ಮಗಳನ್ನು ಭೇಟಿಯಾಗಲು ಸಹ ಪ್ರಾಮುಖ್ಯತೆಯನ್ನು ನೀಡುವಂತೆ ದೇವರು ನಮ್ಮನ್ನು ಮುನ್ನಡೆಸಲಿ.

- P. ಜೇಕಬ್ ಶಂಕರ್

 

ಪ್ರಾರ್ಥನಾ ಅಂಶ:

ಈ ತಿಂಗಳು ಪೂರ್ತಿಯಾಗಿ ನಡೆಯುವಂತಹ ಸೇವೆಗಳಲ್ಲಿ ದೇವರ ಹಸ್ತವು ಜೊತೆಯಿದ್ದು ನಡೆಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking perabet casibom holiganbet galabet casibom grandpashabet perabet perabet giriş padişahbet padişahbet giriş grandpashabet kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino matbet