Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 19.04.2024
Share:

By Village Missionary Movement

Friday, 19-Apr-2024

ಧೈನಂದಿನ ಧ್ಯಾನ(Kannada) – 19.04.2024

 

ಆ ಸಮಯದಲ್ಲಿ. . .

 

"ಆತನು ಇನ್ನು ಮೇಲೆ ನಿನ್ನ ಬಾಯನ್ನು ನಗೆಯಿಂದಲೂ ತುಟಿಗಳನ್ನು ಉತ್ಸಾಹಧ್ವನಿಯಿಂದಲೂ ತುಂಬಿಸುವನು." - ಯೋಬ 8:22

 

ರಾಜು +2 ಮುಗಿಸಿ ಉನ್ನತ ವ್ಯಾಸಂಗ ಮಾಡಲು ಸಾಧ್ಯವಾಗದೆ ಕಟ್ಟಡ ಕಾರ್ಮಿಕನಾಗಿ ಕೆಲಸಕ್ಕೆ ಹೋಗುತ್ತಿದ್ದ. ಹೇಗೋ ಕಷ್ಟಪಟ್ಟು ಓದಿ ಪೊಲೀಸ್ ಕೆಲಸಕ್ಕೆ ಬರೆದ ಪರೀಕ್ಷೆಯಲ್ಲಿ ತೇರ್ಗಡೆಯಾದ. ಅವನನ್ನು ಮುಖಾಮುಖಿ ಪರೀಕ್ಷೆಗೆ ಕರೆಯಲಾಗಿತ್ತು. ನಾಳೆ ಹೈದರಾಬಾದ್‌ನಲ್ಲಿರಬೇಕು. ಹೋಗಲು ಹಣವಿಲ್ಲ. ಏನು ಮಾಡಬೇಕೆಂದು ತಿಳಿಯದೆ ಪ್ರಾರ್ಥನೆ ಮಾಡಿಬಿಟ್ಟು ದಕ್ಷಿಣ ಕೋಡಿಯಲ್ಲಿರುವ ತನ್ನ ಗ್ರಾಮದಲ್ಲಿ ಇದ್ದನು. ಅವನ ಅಣ್ಣ ಮತ್ತು ಅತ್ತಿಗೆ ಬಂದು ವಿಮಾನದಲ್ಲಿ ಸಂದರ್ಶನ ನಡೆಯುವ ಸ್ಥಳಕ್ಕೆ ಕರೆದುಕೊಂಡು ಹೋಗಿ ಸೇರಿಸಿದರು. ಅಲ್ಲಿ ಕಾಯುತ್ತಿದ್ದ ಅವನಿಗೆ ದೊಡ್ಡ ಆಶ್ಚರ್ಯ. ಸಂದರ್ಶನಕ್ಕೆ ಹಾಜರಾಗಿದ್ದ ಅಧಿಕಾರಿಗಳು ಹಿಂದಿಯಲ್ಲಿ ಸಂದರ್ಶನ ನಡೆಸುತ್ತಿದ್ದರು. ರಾಜುವಿಗೆ ಗೊಂದಲ. ಅವನ ಸರದಿ ಬಂದಾಗ, ಪ್ರಶ್ನೆ ಕೇಳುತ್ತಿದ್ದ ಅಧಿಕಾರಿಗೆ ಫೋನ್ ಬಂದಿತು, ಆ ಸಮಯದಲ್ಲಿ ತಮಿಳು ಬಲ್ಲ ಅಧಿಕಾರಿ ಇವನ ಬಳಿ ಪ್ರಶ್ನೆ ಕೇಳಿದರು. ಆಯ್ಕೆಯಾಗಿ ಕೆಲಸ ಸಿಕ್ಕಿತು. ಅವರು ಇಂದಿಗೂ ಕೆಲಸ ಮಾಡುತ್ತಿದ್ದಾರೆ.

 

ಹಾಗೆಯೇ, ಬೈಬಲ್‌ನಲ್ಲಿರುವ ಎಸ್ತೇರ್ ಪುಸ್ತಕದಲ್ಲಿನ ಘಟನೆಯು ನಮಗೆ ಆಶ್ಚರ್ಯವನ್ನುಂಟು ಮಾಡುತ್ತದೆ. ಎಸ್ತೇರ್ ರಾಣಿಯಾಗುತ್ತಾರೆ. ಮೊರ್ದೆಕೈನ ಮೇಲಿದ್ದ ಹೊಟ್ಟೆಕಿಚ್ಚಿನಿಂದಾಗಿ, ಹಾಮಾನನು ಐವತ್ತು ಮೊಳ ಎತ್ತರವಾದ ಒಂದು ಗಲ್ಲುಮರವನ್ನು ಮತ್ತು ಅವನನ್ನು ಅವಲಂಬಿಸಿದ್ದ ಯೆಹೂದ್ಯರನ್ನು ಕೊಲ್ಲಲು ರಾಜನ ಬಳಿ ಅಪ್ಪಣೆಯನ್ನೂ ಪಡೆದಿದ್ದನು. ಮೊರ್ದೆಕೈಯನ್ನು ಗಲ್ಲಿಗೇರಿಸಬೇಕೆಂದು ಹೇಳಲು ರಾಜನ ಆಸ್ಥಾನಕ್ಕೆ ಬಂದನು. ಅರಸನು ಹಾಮಾನನನ್ನು ಒಳಗೆ ಕರೆದರು. ಆ ಸಮಯದಲ್ಲಿ ರಾಜನು ಮೊದಲು ಮಾತನಾಡುತ್ತಾರೆ. ಒಬ್ಬ ವ್ಯಕ್ತಿಯನ್ನು ರಾಜನು ಗೌರವಿಸಬೇಕೆಂದು ಬಯಸಿದರೆ ಅವನಿಗೆ ಏನು ಮಾಡಬೇಕು ಎಂದು ರಾಜನು ಕೇಳಿದರು. ಬಹುಶಃ ಹಾಮಾನನು ಮೊದಲು ಮಾತನಾಡಿದ್ದರೆ, ಮೊರ್ದೆಕೈಯನ್ನು ಗಲ್ಲಿಗೇರಿಸಲಾಗುತ್ತಿತ್ತು ಮತ್ತು ಯೆಹೂದ್ಯ ಕುಲವು ನಾಶವಾಗುತ್ತಿತ್ತು. ಕ್ಷಣಮಾತ್ರದಲ್ಲಿ ಕಾರ್ಯಗಳನ್ನು ಬದಲಾಯಿಸುವವರು ನಮ್ಮ ದೇವರಲ್ಲವೇ!

 

ಹೌದು, ನನಗೆ ಪ್ರಿಯವಾದವರೇ, ಇದನ್ನು ಓದುತ್ತಿರುವ ನಿಮ್ಮ ಜೀವನದಲ್ಲಿ ಪರಿಸ್ಥಿತಿಗಳೆಲ್ಲಾ ನಿಮಗೆ ವಿರುದ್ಧವಾಗಿ ಅನಾನುಕೂಲವಾಗಿರಬಹುದು. ನಂಬಿಕೆಗೆ ಸ್ಥಳವಿದೆಯೇ? ಎಂಬ ಪ್ರಶ್ನೆಗಳು ನಿಮ್ಮನ್ನು ಕಾಡಬಹುದು. ಚಿಂತಿಸಬೇಡಿ. ನಮ್ಮ ದೇವರಿಂದ ಒಂದು ಕ್ಷಣದಲ್ಲಿ ನಿಮ್ಮ ಕಾರ್ಯಗಳನ್ನು ಬದಲಾಯಿಸಿ, ಸಂತೋಷದಿಂದಲೂ, ಹರ್ಷಾನಂದದಿಂದಲೂ ನಿಮ್ಮ ತುಟಿಗಳನ್ನು ಗಂಭೀರ ಶಬ್ದದಿಂದಲೂ ತುಂಬಿಸಲು ಸಾಧ್ಯ. ನಿಮ್ಮ ಜೀವನವನ್ನು ಬದಲಾಯಿಸಲು ನಮ್ಮ ದೇವರಿಗೆ ಒಂದು ಸೆಕೆಂಡ್ ಸಾಕು. ಪ್ರಾರ್ಥಿಸಿ ಮತ್ತು ಕಾದಿರಿ ದೇವರು ನಿಮ್ಮ ಜೀವನವನ್ನು ಆಶೀರ್ವಾದಕರವಾಗಿ ಮಾರ್ಪಡಿಸುತ್ತಾರೆ!! ಹಲ್ಲೇಲೂಜಾ!!!

- Sis. ಮಂಜುಳಾ

 

ಪ್ರಾರ್ಥನಾ ಅಂಶ:

ಕಚೇರಿ ಕೆಲಸಗಾರರ ಕುಟುಂಬಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino