By Village Missionary Movement
Saturday, 27-Apr-2024ಧೈನಂದಿನ ಧ್ಯಾನ(Kannada) – 27.04.2024
ಈ ಚಿಂತೆ ಬೇಡ
"ಅಹಂಕಾರಿಗಳೆಲ್ಲಾ ಯೆಹೋವನಿಗೆ ಅಸಹ್ಯ; ಅವರಿಗೆ ದಂಡನೆ ಖಂಡಿತ" - ಜ್ಞಾನೋಕ್ತಿ16:5
ಸುಂದರವಾದ ಗುಲಾಬಿ ತೋಟವಿತ್ತು. ಅದರಲ್ಲಿ ಬಣ್ಣಬಣ್ಣದ ಗುಲಾಬಿಗಳು ಅರಳಿದ್ದವು. ಒಂದೇ ಒಂದು ಗುಲಾಬಿ ತುಂಬಾ ಸುಂದರವಾಗಿತ್ತು ಮತ್ತು ಅದರ ಬಣ್ಣ ನೋಡಲು ವಿಶಿಷ್ಟವಾಗಿತ್ತು. ಇದನ್ನು ಇತರ ಗುಲಾಬಿಗಳಿಂದ ಸ್ವಲ್ಪ ದೂರದಲ್ಲಿ ನೆಡಲಾಗಿತ್ತು. ಅದಕ್ಕಾಗಿಯೇ ಏನೋ ಅದಕ್ಕೆ ತನ್ನ ಬಗ್ಗೆ ತುಂಬಾ ಹೆಮ್ಮೆ! ಇತರ ಗುಲಾಬಿಗಳನ್ನು ಯಾವಾಗಲೂ ಕೀಳಾಗಿಯೇ ನೋಡುತ್ತಿತ್ತು. ಅದರಲ್ಲಿ ಒಂದು ಗುಲಾಬಿ, "ಗೆಳೆಯ, ದೇವರ ಸೃಷ್ಟಿಯಲ್ಲಿ ಎಲ್ಲರೂ ಸಮಾನರು, ನೀನು ನಿನ್ನ ಬಗ್ಗೆ ಏಕೆ ತುಂಬಾ ಉನ್ನತವಾಗಿ ಯೋಚಿಸುತ್ತಿದ್ದೀಯ? ನೀನು ಹೀಗಿದ್ದರೆ ದೇವರು ಅದನ್ನು ಇಷ್ಟಪಡುವುದಿಲ್ಲ." ಒಂದು ದಿನ ಬಲವಾದ ಬಿರುಗಾಳಿ ಬೀಸಲಾರಂಭಿಸಿತು. ಆಗ ಒಂಟಿ ಗುಲಾಬಿ ಹಾಗೇ ಒರಗಿ ಮಲಗಲು ಪ್ರಾರಂಭಿಸಿತು. ಆಗ ಗುಂಪಿನಲ್ಲಿದ್ದ ಗುಲಾಬಿಯೊಂದು ತನ್ನ ಕೈಯನ್ನು ಚಾಚಿ, “ನನ್ನ ಕೈ ಹಿಡಿ” ಎಂದಿತು. ನಾನು ನಿನ್ನ ಕೈ ಹಿಡಿಯಬೇಕಾ? ಎಂದು ಅಹಂಕಾರದಿಂದ ಕೇಳಿತು. ಕೆಲವೇ ಸೆಕೆಂಡುಗಳಲ್ಲಿ ಅದು ಕಿತ್ತುಹೋಗಿ ಇದ್ದು ಸ್ಥಳವೇ ಕಾಣದೆ ಮಾಯವಾಯಿತು.
ಇದನ್ನು ಓದುತ್ತಿರುವ ಪ್ರಿಯರೇ! ಇದೇ ರೀತಿಯಲ್ಲಿ, ಸತ್ಯವೇದದಲ್ಲಿ, ಅರಸನಾದ ಅಹಾಬನು ಯೆಹೂದದ ಅರನಾದ ಯೆಹೋಷಾಫಾಟನೊಂದಿಗೆ ಯುದ್ಧಕ್ಕೆ ಹೋದನು. ಅಹಾಬನು ದೇವರ ವಾಕ್ಯವನ್ನು ನಿರ್ಲಕ್ಷಿಸಿದನು ಮತ್ತು ತನ್ನ ಸ್ವಂತ ಬಲದಲ್ಲಿ ಭರವಸೆಯಿಟ್ಟನು. ಅಹಾಬನು ಅಹಂಕಾರಿಯಾಗಿದ್ದರೂ ದೇವರಿಗೆ ವಿರುದ್ಧವಾಗಿ ಪಾಪಗಳನ್ನು ಮಾಡಿದ್ದರೂ, ಯೆಹೋಷಾಫಾಟನೊಂದಿಗೆ ತನ್ನ ಕೈಜೋಡಿಸಿ ಯುದ್ಧಕ್ಕೆ ಹೋದಾಗ, ತಿಳಿಯದೆ ಒಬ್ಬನು ಬಿಲ್ಲು ಮತ್ತು ಬಾಣದಿಂದ ಹೊಡೆದಾಗ ಸತ್ತುಹೋದನು. ವೇಷ ಬದಲಾಯಿಸಿಕೊಂಡು ಯುದ್ಧಕ್ಕೆ ಹೋಗೋಣ ಅಂದುಕೊಂಡು ಹೋದನು. ಅವನ ಆತುರುವೇ ಅವನನ್ನು ಕೊಲ್ಲುವ ಅಸ್ತ್ರವಾಗಿತ್ತು. ಇದನ್ನು ಇಂದಿನ ಸತ್ಯವೇದ ಭಾಗದಲ್ಲಿ ಓದಬಹುದು. ಗರ್ವಿಷ್ಠನಾದವನು ದೇವರಿಗೆ ಅಸಹ್ಯ, ಕೈಯೊಳಗೆ ಕೈಜೋಡಿಸಿದರೂ ಅವನು ಶಿಕ್ಷೆಗೆ ತಪ್ಪುವುದಿಲ್ಲ ಎಂಬ ಮಾತು ಅಹಾಬನ ಜೀವನದಲ್ಲಿ ನಿಜವಾಯಿತಲ್ಲಾ?
ದೇವರ ಮಗುವೇ, ಹೆಮ್ಮೆಯ ಚಿಂತನೆಯು ದೇವರ ಮುಂದೆ ಅಸಹ್ಯವಾಗಿದೆ. ಹೆಮ್ಮೆಯ ಆಲೋಚನೆ ನಮ್ಮನ್ನು ನೇರವಾಗಿ ವಿನಾಶದತ್ತ ಕೊಂಡೊಯ್ಯುತ್ತದೆ. ಹೌದು, ವಿನಾಶ ಬರುವ ಮೊದಲು ನಾವು ನಮ್ಮ ಮಾರ್ಗಗಳನ್ನು ಸರಿಪಡಿಸಿಕೊಂಡು ಹೆಮ್ಮೆಯ ಮಾತನ್ನು, ನೋಟವನ್ನು ನಡವಳಿಕೆಯನ್ನು ನಮ್ಮಿಂದ ತೊಲಗಿಸೋಣ. ದೇವರ ಕೋಪಾಗ್ನಿಗೆ ತಪ್ಪಿಸಿಕೊಂಡು ಆತನ ಕರುಣೆಯನ್ನು ಪಡೆದುಕೊಳ್ಳೋಣ.
- Mrs. ನಿತ್ಯಾ ನಿತ್ಯಾನಂದ
ಪ್ರಾರ್ಥನಾ ಅಂಶ:
ಸ್ಕೂಲ್ ಮಿಷನ್ ಮೂಲಕ ಸುತ್ತಮುತ್ತಲಿನ ಹಳ್ಳಿಗಳನ್ನು ಕೇಂದ್ರವಾಗಿಟ್ಟುಕೊಂಡು ನಮ್ಮ ಕ್ಯಾಂಪಸ್‌ನಲ್ಲಿ ಹೊಸದಾಗಿ ಕಟ್ಟಲಿರುವ ಶಾಲೆಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482