Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 03.05.2024
Share:

By Village Missionary Movement

Friday, 03-May-2024

ಧೈನಂದಿನ ಧ್ಯಾನ(Kannada) – 03.05.2024

 

ವಯಸ್ಸು ಒಂದು ವಿಷಯವಲ್ಲ

 

"…ಚುರುಕುಗೈ ಐಶ್ವರ್ಯ" - ಜ್ಞಾನೋಕ್ತಿ 10:4

 

ವಿದ್ಯಾರ್ಥಿಗಳನ್ನು ಉತ್ಸಾಹಪಡಿಸುವ ಭಾರತದ ಮಹಿಳಾ ಭಾಷಣಕಾರರನ್ನು ಆಸ್ಟ್ರೇಲಿಯಾಕ್ಕೆ ಒಂದು ತಿಂಗಳು ಪೂರ್ತಿಯಾಗಿ ಅನೇಕ ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ಸಾಹಕರವಾದ ಮಾತುಗಳನ್ನು ಮಾತನಾಡಲು ಆಹ್ವಾನಿಸಲಾಗಿತ್ತು. ಆ ದಿನಗಳು ಪೂರ್ತಿಯಾಗಿ ಅನೇಕ ಸ್ಥಳಗಳನ್ನು ಸುತ್ತಿನೋಡಿ ಆನಂದಿಸಬಹುದು ಎಂದು ಅವರು ಭಾವಿಸಿದ್ದರು. ತನಗೆ ಸಹಾಯ ಮಾಡಲು ಮಾರ್ಗದರ್ಶಕರಾಗಿ ಕಳುಹಿಸಿದ ವ್ಯಕ್ತಿಯನ್ನು ನೋಡಿದಾಗ ಬಹಳ ನಿರಾಶೆಯಾಯಿತು. ಏಕೆಂದರೆ ಅದು 82 ವರ್ಷದ ಅಜ್ಜಿ, ಅವರ ಹೆಸರು ಮೆರ್ಲಿನ್. ಇವರು ನನಗೆ ಹೇಗೆ ಸಹಾಯ ಮಾಡುತ್ತಾರೆ ಎಂದು ನಿರಾಶೆಯಿಂದ ಹೊರಟ ಅವರಿಗೆ ಆಶ್ಚರ್ಯ! ಮೆರ್ಲಿನ್ ಅವರ ಚುರುಚುರುಕಾದ ಓಟದಂತಹ ನಡೆ ಮತ್ತು ಎಚ್ಚರಿಕೆಯಿಂದ ಮತ್ತು ಅಗತ್ಯವಿರುವ ವೇಗದಲ್ಲಿ ವಾಹನವನ್ನು ಚಾಲನೆ ಮಾಡುವುದು ತುಂಬಾ ರೋಮಾಂಚನಕಾರಿಯಾಗಿತ್ತು. ದಿನಗಳು ಕಳೆದವು. ಕೆಲವೊಮ್ಮೆ ಸ್ಪೀಕರ್ ತಡ ಮಾಡಿದರೂ ಮಾರ್ಗದರ್ಶಕಿ ಮೆರ್ಲಿನ್ ಅಜ್ಜಿ ಅವರನ್ನು ಚರುಚುರುಕಾಗಿ ಹಲವೆಡೆ ಕರೆದೊಯ್ದರು. ಸಂಜೆ ವೇಳೆಯಲ್ಲಿ ಮಕ್ಕಳ ಹಾಸ್ಟೆಲ್‌ ನಲ್ಲಿ ಲೆಕ್ಕಬರೆಯಲು ಸಹಾಯ ಮಾಡುವುದಾಗಿಯೂ ಮತ್ತು ವೃದ್ಧಾಶ್ರಮಕ್ಕೆ ರೊಟ್ಟಿ ಮಾಡಿಕೊಡುವುದಾಗಿಯೂ ಹೇಳಿದರು. ಒಮ್ಮೆ ಬೊಟಾನಿಕಲ್ ಗಾರ್ಡನ್‌ನಲ್ಲಿರುವ ಕೆಲವು ಸಸ್ಯಗಳನ್ನು ವಿವರಿಸಲು ಕೇಳಿದಾಗ, ಮೆರ್ಲಿನ್ ಗೆ ಹೇಳಲು ಗೊತ್ತಾಗಲಿಲ್ಲ. ಒಂದು ತಿಂಗಳ ನಂತರ ಸ್ಪೀಕರ್ ಭಾರತಕ್ಕೆ ಹಿಂತಿರುಗುವಾಗ, ಮೆರ್ಲಿನ್, ನಿಮ್ಮ ಮುಂದಿನ ಕೆಲಸವೇನು ಎಂಬ ಪ್ರಶ್ನೆಗೆ ಸಸ್ಯಗಳ ಬಗ್ಗೆ ಸಂಜೆ ವೇಳೆಯಲ್ಲಿ ಓದಲು ಸೇರಿಕೊಂಡಿದ್ದೇನೆ. ನೀವು ಕೆಲವು ಸಸ್ಯಗಳ ಬಗ್ಗೆ ಕೇಳಿದಾಗ, ನನಗೆ ಹೇಳಲು ಗೊತ್ತಾಗಲಿಲ್ಲ, ಹಾಗಾಗಿ ಅವುಗಳ ಬಗ್ಗೆ ತಿಳಿದುಕೊಳ್ಳಲು ಹೋಗುತ್ತೇನೆ ಎಂದ ಮೆರ್ಲಿನ್ ಅಜ್ಜಿಯನ್ನು ನೋಡಿ ಮರೆಯಲಾಗದ ಒಂದು ವ್ಯಕ್ತಿಯನ್ನು ಭೇಟಿಯಾದ ಸಂತೋಷದಲ್ಲಿ ಸ್ಪೀಕರ್ ಭಾರತಕ್ಕೆ ಬಂದು ಸೇರಿದರು. 

 

ಇದು ನಮಗೆ ಸವಾಲಿನ ಕೆಲಸ. ಒಂದೆಡೆಯಿಂದ ಇನ್ನೊಂದೆಡೆಗೆ ತೆವಳುವ ಇಂದಿನ ಹದಿಹರೆಯದವರಿಗೆ ಮೆರ್ಲಿನ್ ಅಜ್ಜಿ ತುಂಬಾ ಸವಾಲಿನ ವ್ಯಕ್ತಿ! ಸತ್ಯವೇದದಲ್ಲಿಯೂ ಕಾಲೇಬನು ತನ್ನ ಎಂಬತ್ತೈದನೇ ವಯಸ್ಸಿನಲ್ಲಿ ಬೆಟ್ಟದ ಸೀಮೆಯನ್ನು ಕೊಡು ಎಂದು ಕೇಳಿ ಪಡೆದುಕೊಂಡದ್ದನ್ನು ನೋಡುತ್ತೇವೆ.

 

ಪ್ರೀತಿಯ ಸಹೋದರ ಸಹೋದರಿಯರೇ, ನಿಮ್ಮ ದೇಹವನ್ನು ನೀವು ಹೇಗೆ ಉಪಯೋಗಿಸುತ್ತಿದ್ದೀರಿ ಮತ್ತು ಅಭ್ಯಾಸಪಡಿಸುತ್ತಿದ್ದೀರಿ? ನಮ್ಮ ದೇಹವು ದೇವರು ವಾಸಮಾಡುವ ಆಲಯವಾಗಿದೆ ಮತ್ತು ಅದನ್ನು ಸಕ್ರಿಯವಾಗಿ ಮತ್ತು ಎಚ್ಚರಿಕೆಯಿಂದ ಬಳಸುವುದು ಮುಖ್ಯವಾಗಿದೆ. ಗೋಡೆ ಇದ್ದರೆ ಮಾತ್ರ ಪೇಂಟಿಂಗ್ ಮಾಡಬಹುದು. ನಿಮ್ಮ ಮೂಲಕ ದೇವರು ಮಹಿಮೆ ಹೊಂದಲಿ, ದೇವರ ರಾಜ್ಯಕ್ಕೆ ಪ್ರಯೋಜನಕಾರಿಯಾಗಿ ದೇವರು ನಮ್ಮನ್ನು ಉಪಯೋಗಿಸಲಿ. ಆಮೆನ್.

- L.ಅಲಗರಸಾಮಿ

 

ಪ್ರಾರ್ಥನಾ ಅಂಶ:

ಸೇವೆಗಳನ್ನು ಮಾಡಲು ನಮ್ಮೊಂದಿಗೆ ಸ್ವಯಂಸೇವಕರು ಅನೇಕರು ಜೊತೆಗೂಡಿ ಕಾರ್ಯನಿರ್ವಹಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş matbet giriş sahabet onwin bets10 bets10 giriş bets10 güncel giriş betcio atlasbet casibom meritking perabet casibom holiganbet galabet casibom padişahbet padişahbet giriş grandpashabet jojobet cashwin grandpashabet radissonbet palacebet amgbahis cratosroyalbet grandpashabet betpuan betsalvador matbet meritking perabet perabet giriş instagram ban service betsilin betsilin giris pashagaming pashagaming giris gorabet gorabet giris kralbet holiganbet