Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 10.05.2024
Share:

By Village Missionary Movement

Friday, 10-May-2024

ಧೈನಂದಿನ ಧ್ಯಾನ(Kannada) – 10.05.2024

 

ಮುಪ್ಪಿನಲ್ಲಿಯೂ ಶೋಭಿಸುವರು

 

"…ಮುಪ್ಪಿನಲ್ಲಿಯೂ ಫಲಿಸುವರು; ಪುಷ್ಟಿಯಾಗಿದ್ದು ಶೋಭಿಸುವರು" - ಕೀರ್ತನೆ 92:15

 

ವಯಸ್ಸು 40 ದಾಟಿದ ತಕ್ಷಣ ಸ್ವಲ್ಪ ಬಿಳಿ ಕೂದಲು, ದೇಹದಲ್ಲಿ ಒಂದಿಷ್ಟು ನೋವು, ದೃಷ್ಟಿದೋಷ, ರಕ್ತದೊತ್ತಡ, ಶುಗರ್ ಕಡಿಮೆಯಾದಂತೆ ಕಂಡು ಬಂದರೆ ಅಷ್ಟೇ ನನಗೆ ವಯಸ್ಸಾಗೋಯ್ತು ಎಂಬ ಭಾವನೆ ಮೂಡುತ್ತದೆ. ಸರ್ಕಾರಿ ಕೆಲಸದಲ್ಲಿ ಬಿಡುವು ಕೊಟ್ಟುಬಿಟ್ರು ಅಂದ್ರೆ ಅಷ್ಟೇ ಇನ್ನು ಮನೆಯ ಮೇಲ್ಚಾವಣಿ ನೋಡುತ್ತಾ ಸಮಯ ಕಳೆಯುತ್ತಾ ನನ್ನ ಮರಣದ ದಿನಗಳನ್ನು ಎಣಿಸುತ್ತಿದ್ದೇನೆ ಎಂಬ ಡೈಲಾಗ್ ಮಾತಾಡುತ್ತಾ ಬದುಕುವವರೂ ಇದ್ದಾರೆ. ಆದರೆ ವಯಸ್ಸು, ಬಲಹೀನತೆ ಇವುಗಳನ್ನೆಲ್ಲಾ ದಾಟಿ ದೇವರಿಗಾಗಿ ಕಾರ್ಯ ನಿರ್ವಹಿಸುತ್ತಿರುವವರು ಇನ್ನೂ ಇದ್ದಾರೆ.

 

ಥಾಮಸ್ ಮ್ಯಾಥ್ಯೂ ಸೀನಿಯರ್ ಎಂಬವರು ಒಬ್ಬ ವ್ಯಾಪಾರಿ, ಭೂಮಾಲೀಕ ಮತ್ತು ಎಲಿಜಬೆತ್ ದ್ವೀಪದ ಗವರ್ನರ್. ಅವರ ಮಗ ಥಾಮಸ್ ಸೀನಿಯರ್ ಅಥೆನ್ಸ್ ಜನರಿಗೆ ಸೇವೆ ಸಲ್ಲಿಸಿದರು. ಹಡಗಿನಲ್ಲಿ ಹಣವನ್ನು ಅಧಿಕರಿಸಲು ಇಂಗ್ಲೆಂಡ್ಗೆ ಹೋದ ಮಗ ಹಿಂತಿರುಗಿ ಬರಲೇ ಇಲ್ಲ. ತನ್ನ ಮಗನನ್ನು ಕಳೆದುಕೊಂಡ ದುಃಖದಲ್ಲಿದ್ದರೂ, ತನ್ನ ಮಗ ಬಿಟ್ಟುಹೋದ ಸೇವೆಯನ್ನು ಮುಂದುವರಿಸಲು ಬಯಸಿದ ಥಾಮಸ್ ಮ್ಯಾಥ್ಯೂ, ಅನೇಕರನ್ನು ಸೇವೆಗೆ ಬರುವಂತೆ ಆಹ್ವಾನಿಸಿದರು. ಆ ದ್ವೀಪದವರಿಗೆ ಭಾಷೆ ಗೊತ್ತಿಲ್ಲದ ಕಾರಣ ಯಾರೂ ಮುಂದೆ ಬರಲಿಲ್ಲ. ತನ್ನ ಎಪ್ಪತ್ತನೇ ವಯಸ್ಸಿನಲ್ಲಿ ಆ ದ್ವೀಪದವರ ಭಾಷೆಯನ್ನು ಕಲಿತು ಅಲ್ಲಿ ಸೇವೆ ಮಾಡಲು ತನ್ನನ್ನು ಅರ್ಪಿಸಿಕೊಂಡರು. ಅವರು ಕಾಡಿನಲ್ಲಿ ಇಪ್ಪತ್ತು ಮೈಲುಗಳಷ್ಟು ದೂರ ನಡೆದು ಹೋಗಿ ಸುಮಾರು ಮೂರು ಸಾವಿರ ಆತ್ಮಗಳನ್ನು ರಕ್ಷಣೆಯೊಳಗೆ ನಡೆಸಿದರು.

 

ಅರಣ್ಯದಲ್ಲಿ ತನ್ನ ಮಾವನ ಕುರಿಗಳನ್ನು ಮೇಯಿಸುತ್ತಿದ್ದ ಮೋಶೆಗೆ ಮುಳ್ಳಿನ ಪೊದೆಯ ಮಧ್ಯದಲ್ಲಿ ಕಾಣಿಸಿಕೊಂಡು ಮೋಶೆಯನ್ನು ತನ್ನ ಸೇವೆಯನ್ನು ಮಾಡುವಂತೆ, ಇಸ್ರಾಯೇಲ್ ಜನರನ್ನು ಹಾಲೂ ಜೇನೂ ಹರಿಯುವ ಕಾನಾನ್‌ಗೆ ಕರೆದುಕೊಂಡು ಹೋಗುವಂತೆ ಆರಿಸಿಕೊಂಡರು. ಅನೇಕ ಅದ್ಭುತಗಳನ್ನು ಮತ್ತು ಸೂಚಕಕಾರ್ಯಗಳನ್ನು ಮಾಡಿ ದೇವರು ಮೋಶೆಯನ್ನು ಕರೆದರು. ತಾನು ಮಂದನಾಲಿಗೆಯವನು ಎಂದು ಮೋಶೆ ಕಾರಣಗಳನ್ನು ಹೇಳಲು, "ಆರೋನನು ನಿನಗೆ ಬಾಯಾಗಿರುತ್ತಾನೆ, ನಿನ್ನನ್ನು ಐಗುಪ್ತದ ರಾಜನಾದ ಫರೋಹನಿಗೆ ದೇವರಾಗಿ ಮಾಡಿದ್ದೇನೆ" ಎಂದು ಹೇಳಿದರು. ಮೋಶೆ ಮತ್ತು ಆರೋನರು ಫರೋಹನ ಮುಂದೆ ನಿಂತಾಗ ಮೋಶೆಗೆ ಎಂಭತ್ತು ವರ್ಷ ಮತ್ತು ಆರೋನನಿಗೆ ಎಂಭತ್ತಮೂರು ವರ್ಷವೂ ಆಗಿತ್ತು. (ವಿಮೋಚನಕಾಂಡ 7:7)

 

ಹೌದು, ಪ್ರಿಯರೇ! ನಿಮ್ಮ ಮೂಲಕ ದೇವರು ತನ್ನ ಶಕ್ತಿಯನ್ನು ಸಾಬೀತುಪಡಿಸಲು ನಿಮ್ಮ ವಯಸ್ಸು ಅಡ್ಡಿಯಲ್ಲ. ಅವರು ಮೋಶೆಯ ಮೂಲಕ ಅನೇಕ ಅದ್ಭುತಗಳನ್ನು ಮತ್ತು ಸೂಚಕಕಾರ್ಯಗಳನ್ನು ಮಾಡಿದರು. ಇಸ್ರಾಯೇಲ್ಯರ ದೇವರ ಹೊರತು ಬೇರೆ ದೇವರಿಲ್ಲ ಎಂದು ಭೂಮಿಯ ಎಲ್ಲಾ ಜನಾಂಗಗಳು ಆ ದಿನದಲ್ಲಿ ತಿಳಿದುಕೊಂಡರು. ಯಾವುದೋ ಒಂದು ಕಾರಣ ಹೇಳಿ ನಿಮ್ಮನ್ನು ನೀವೇ ಹಿಡಿದಿಟ್ಟುಕೊಳ್ಳುತ್ತೀದ್ದೀರಾ? ದೇವರಿಗಾಗಿ ಕೆಲಸ ಮಾಡಲು ವಯಸ್ಸು ಅಡ್ಡಿಯಲ್ಲ. ಮನದಲ್ಲಿ ಆಸೆಯಿದ್ದರೆ ಸಾಕು. ದೇವರಿಗಾಗಿ ಯಾವುದಾದರೂ ಒಂದು ಕಾರ್ಯವನ್ನು ಮಾಡುವ ಅವಕಾಶವನ್ನು, ಶಕ್ತಿಯನ್ನು ಮತ್ತು ಕೃಪೆಯನ್ನೂ ಅನುಗ್ರಹಿಸುತ್ತಾರೆ. ಆಮೆನ್.

- Sis. ಮಂಜುಳಾ

 

ಪ್ರಾರ್ಥನಾ ಅಂಶ:

ನಮ್ಮ ಆಮೆನ್ ವಿಲೇಜ್ ಟಿವಿ ಚಾನೆಲ್ ಅನ್ನು ಸ್ಯಾಟಲೈಟ್ ಚಾನೆಲ್ ಆಗಿ ಪರಿವರ್ತಿಸಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet jojobet jojobet esbet sonbahis tambet grandpashabet betgit mercurecasino