Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 29.05.2024
Share:

By Village Missionary Movement

Wednesday, 29-May-2024

ಧೈನಂದಿನ ಧ್ಯಾನ(Kannada) – 29.05.2024

 

ನಾವು ಸುಮ್ಮನಿರುವುದೇಕೆ

 

"…ನಿನ್ನ ಆಜ್ಞೆಗಳನ್ನು ಕಲಿಯುವದಕ್ಕೆ ನನಗೆ ಬುದ್ಧಿಯನ್ನು ಕೊಡು" - ಕೀರ್ತನೆ 119:73

  

ನೀವು ಒಂದು ದೊಡ್ಡ ಮನೆಯ ಮಾಲೀಕ ಅಂದುಕೊಳ್ಳೋಣ. ನಿಮಗೆ ಕೆಳಗೆ ಅನೇಕ ಸೇವಕರು ಇದ್ದಾರೆ ಎಂದು ಭಾವಿಸೋಣ. ನಿರ್ದಿಷ್ಟ ಕಾರಣಕ್ಕಾಗಿ ನೀವು ವಿದೇಶಕ್ಕೆ ಪ್ರಯಾಣಿಸಬೇಕಾಗುತ್ತದೆ. ಆದ್ದರಿಂದ ನೀವು ನಿಮ್ಮ ಸೇವಕರಿಗೆ ಅವರು ಮಾಡಬೇಕಾದ ಕೆಲಸಗಳನ್ನು ಕಟ್ಟುನಿಟ್ಟಾಗಿಯೂ ಮತ್ತು ಆದೇಶದ ಸೂಚನೆಗಳೊಂದಿಗೆ ಹೇಳಿ ಹೊರಟಿದ್ದೀರಿ. ಆದರೆ ನಿಮ್ಮ ಸೇವಕರಲ್ಲಿ ಅನೇಕರು ನೀವು ಹೇಳಿದ ಕೆಲಸವನ್ನು ಮಾಡದೆ ತಮ್ಮ ಇಷ್ಟದಂತೆ ಸುಖಭೋಗವಾಗಿ ಜೀಸಿಸುತ್ತಿದ್ದರು. ಕೆಲವರು ಮಾತ್ರ ತಮಗೆ ವಹಿಸಿದ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿದ್ದರು. ಈ ಎಲ್ಲಾ ಘಟನೆಗಳನ್ನು ಕೇಳಿದ ನಂತರ ನೀವು ಮನೆಗೆ ಹಿಂತಿರುಗಿ ಬಂದು ಬಿಡುತ್ತೀರಿ. ಈಗ ಅವರ ಬಗ್ಗೆ ನಿಮಗೆ ಏನನಿಸುತ್ತದೆ?

  

ಇಂದಿನ ಸತ್ಯವೇದ ಭಾಗದಲ್ಲಿ ಯಜಮಾನನು ತನ್ನ ಸೇವಕರಿಗೆ ಅವರವರ ಸಾಮರ್ಥ್ಯಕ್ಕನುಗುಣವಾಗಿ ಐದು ತಲಾಂತು, ಎರಡು ತಲಾಂತು, ಒಂದು ತಲಾಂತು ಕೊಟ್ಟು ಪ್ರಯಾಣ ಬೆಳೆಸಿದರು. ಒಂದು ತಲಾಂತನ್ನು ತೆಗೆದುಕೊಂಡ ವ್ಯಕ್ತಿ ಅದನ್ನು ಅಗೆದು ನೆಲದಲ್ಲಿ ಹೂತುಹಾಕಿ ಸೋಮಾರಿಯಾಗಿ ಸುಮ್ಮನಾಗಿಬಿಟ್ಟ. ಉಳಿದ ಇನ್ನಿಬ್ಬರು ಅದನ್ನು ಅಧಿಕಗೊಳಿಸಿದರು. ಒಂದು ನಿರ್ದಿಷ್ಟ ಅವಧಿಯ ನಂತರ, ಯಜಮಾನನು ಬಂದು ಕೇಳುವಾಗ ಮೊದಲ ಇಬ್ಬರನ್ನೂ ಭಲಾ, ನಂಬಿಗಸ್ತನಾದ ಒಳ್ಳೇ ಆಳು ನೀನು ಎಂದರು. ಆದರೆ ಒಂದು ತಲಾಂತನ್ನು ತೆಗೆದುಕೊಂಡು ಅದನ್ನು ಬಚ್ಚಿಟ್ಟು ಸೋಮಾರಿಯಾಗಿ ಸುಮ್ಮನಿದ್ದವನನ್ನು ಗೋಳಾಟವು, ಕಟಕಟನೆ ಹಲ್ಲು ಕಡಿಯೋಣವೂ ಇದ್ದ ಸ್ಥಳದಲ್ಲಿ ಹಾಕಿಬಿಟ್ಟರು. 

 

ಪ್ರೀತಿಯ ದೇವಜನರೇ! ದೇವರು ನಮ್ಮನ್ನು ಸೃಷ್ಟಿಸಿದರ ಉದ್ದೇಶ ನಾವು ಅವರ ಚಿತ್ತವನ್ನು ಮಾಡಿ ಮುಗಿಸುವುದಕ್ಕಾಗಿಯೇ! ದೇವರು ಸೃಷ್ಟಿಸಿದ ಎಲ್ಲಾ ಸೃಷ್ಟಿಗಳು ಆತನ ಚಿತ್ತವನ್ನು ಸರಿಯಾಗಿ ಮಾಡುತ್ತಿವೆ. ಹೆಚ್ಚಿನ ಮಾನವರನ್ನು ಹೊರತುಪಡಿಸಿ. ಆದರೆ ನಾವು ಆತನ ಚಿತ್ತವನ್ನು ತಿಳಿದೂ ಮಾಡದೇ ಸುಮ್ಮನಿದ್ದೇವೆ. ಯೇಸುಕ್ರಿಸ್ತನ ಎರಡನೇ ಬರುವಿಕೆ ಯಾವುದೇ ಸಮಯದಲ್ಲಿ ಬೇಕಾದರೂ ಸಂಭವಿಸಬಹುದು ಎಂಬ ಕಾಲಘಟ್ಟದಲ್ಲಿ ಜೀವಿಸುತ್ತಿದ್ದೇವೆ. ಎಲ್ಲಾ ಗುರುತುಗಳು ಬಹುತೇಕ ಪೂರ್ಣಗೊಂಡಿವೆ. ಬರೋಣ ಮಾತ್ರವೇ ತಡವಾಗುತ್ತಿದೆ. ಏಕೆ ತಡ? ಏಕೆಂದರೆ ಒಬ್ಬರೂ ಕೆಟ್ಟುಹೋಗದೇ ಮಾನಸಾಂತರ ಹೊಂದಬೇಕೆಂದು ಕರ್ತನು ಬಯಸುತ್ತಿರುವುದರಿಂದಲೇ ತಾನೇ. ಹಾಗಾದರೆ ಈ ಎಲ್ಲಾ ವಿಷಯಗಳನ್ನು ತಿಳಿದಿರುವ ಕೈಸ್ತ ಜನರೇ ನಾವು ಗ್ರಹಿಸೋಣ. ಏಕೆಂದರೆ ಯೇಸುಕ್ರಿಸ್ತನ ಮೊದಲ ಬರುವಿಕೆಯನ್ನು ಸಹ ತಿಳಿದಿಲ್ಲದ ಅನೇಕ ಜನರ ನಡುವೆ ನಾವು ವಾಸಿಸುತ್ತಿದ್ದೇವೆ ಎಂಬುದನ್ನು ನಾವು ಮರೆತು ಹೋದೆವಾ? ಯೇಸು ಕ್ರಿಸ್ತನು ನೀಡಿದ ಕೊನೆಯ ಆಜ್ಞೆಯು ನಮ್ಮ ನೆನಪಿಗೆ ಬರುವುದುಂಟಾ? ಯೇಸು ಕ್ರಿಸ್ತನ ಬರೋಣದಲ್ಲಿ ನಾವು ಆತನಿಗೆ ಯಾವ ಉತ್ತರ ನೀಡಲಿದ್ದೇವೆ? ಇನ್ನು ಮುಂದೆಯೂ ನಾವು ಸುಮ್ಮನಿರುವುದೇಕೆ! ಹೊರಡೋಣ. ಎಲ್ಲರಿಗೂ ಸುವಾರ್ತೆಯನ್ನು ಸಾರೋಣ. ಅನೇಕರನ್ನು ಅವರಿಗೆ ಶಿಷ್ಯರನ್ನಾಗಿ ಮಾಡೋಣ. ಆಮೆನ್.

- Bro. ಸಿಮಿಯೋನ್

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್‌ನಲ್ಲಿ ಪ್ರಾರಂಭಿಸಿರುವ ಶಾಂತಿ ನಿಲಯ ಎಂಬ ಸೇವೆಯ ಯೋಜನೆಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al Elexbet instagram unban service tiktok unban instagram unban x unban twitter unban palacebet