Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 17.04.2021
Share:

By Village Missionary Movement

Saturday, 17-Apr-2021

ಧೈನಂದಿನ ಧ್ಯಾನ(Kannada) – 17.04.2021

JUNIOR JESUS

"...ನನ್ನನ್ನು ನಂಬುವವನು ನಾನು ನಡಿಸುವ ಕ್ರಿಯೆಗಳನ್ನು ತಾನೂ ನಡಿಸುವನು; ಮತ್ತು ಅವುಗಳಿಗಿಂತ ಮಹತ್ತಾದ ಕ್ರಿಯೆಗಳನ್ನು ನಡಿಸುವನು." - ಯೋಹಾನ 14:12

ಉತ್ತರಪ್ರದೇಶವನ್ನು ಪೂರ್ವಿಕವಾಗಿ ಹೊಂದಿದ್ದವರು O.P.ಶರ್ಮಾ. ಬಹಳ ಕಠಿಣವಾದ ಶ್ರಮೆಯೊಂದಿಗೆ, ತನ್ನ ಏಳನೇ ವಯಸ್ಸಿನಿಂದಲೇ Magic show ಮಾಡುವುದರಲ್ಲಿ ಗಮನಹರಿಸಿದರು. ಅನೇಕವಾದ ಪಾಡುಪಟ್ಟು Magic show ನಡೆಸುವುದರಲ್ಲಿ ಅನುಭವವುಳ್ಳವರಾದರು. ಇವರ ಮಾಯ ವಿದ್ಯೆಗಳು ಉತ್ತರಭಾರತದಲ್ಲಿ ಬಹಳ ಪ್ರಖ್ಯಾತಿಗೊಂಡಿತು. ಇವರ ಮಗ ಸತ್ಯಪ್ರಕಾಶ್ ಶರ್ಮಾ Mechanical engineer ಓದಿ ಮುಗಿಸಿದ್ದರೂ ತನ್ನ ತಂದೆಯ Magic show ವನ್ನು ಸತತವಾಗಿ ನಡೆಸುತ್ತಿದ್ದಾರೆ. ತಂದೆಯ ಮುಖ ಭಾವನೆ, ಅವರಂತಹ ನಗು, ಕಳೆ ಕಳೆಯಾದ ಮಾತುಗಳು ಮತ್ತು ಹೊಸ ರೀತಿಯ ಕೆಲಸಗಳನ್ನು ನಡೆಸುವುದರೊಂದಿಗೆ ಎಲ್ಲವನ್ನು ಮಾಡುತ್ತಿದ್ದಾರೆ. ಅನೇಕರು ಅವರನ್ನು ಜೂನಿಯರ್ O.P. ಶರ್ಮಾ ಎಂದೇ ಕರೆಯುತ್ತಿದ್ದಾರೆ. ಅಚ್ಚು ಹೊಡೆದ ಹಾಗೆ, O.P. ಶರ್ಮಾರವರ ಹಾಗೆ ಇರುತ್ತಾರೆ.

ತಂದೆಯಾದ ದೇವರು ಯೇಸು ಕ್ರಿಸ್ತನ ಮೂಲಕ ನಮ್ಮನ್ನು ಅವರಿಗೆ ಸ್ವಂತವಾಗಿ ಮಾಡಿಕೊಂಡಿದ್ದಾರೆ. ನಾವು ಯೇಸು ಕ್ರಿಸ್ತನನ್ನು ನಂಬುವುದು ಮಾತ್ರವಲ್ಲ, ಅವರಂತೆ ಮಾರ್ಪಡಬೇಕಾದ ಕಾಲವಿದು. ಯೇಸುಕ್ರಿಸ್ತನು ನರಾವತಾರವನ್ನು ಧರಿಸಿ ನಮಗೆ ರಕ್ಷಣೆಯನ್ನು ದಯಪಾಲಿಸಿದರು. ನಾವು ಅವರನ್ನು ನಂಬುವಾಗ ಅವರು ಮಾಡಿದ ಕಾರ್ಯಗಳನ್ನು ನಾವೂ ಮಾಡಲು ಸಾಧ್ಯ ಎಂಬುದೇ ಸತ್ಯವೇದದ ಬೋಧನೆ. ನಾವು ಅನೇಕ ಆಸೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡಿರಬಹುದು. ಆದರೆ ನಮ್ಮ ತಂದೆಯ ಆಸೆ ಅದಕ್ಕಿಂತ ಪ್ರಾಮುಖ್ಯವಾದದ್ದು, ನಮ್ಮ ಇಷ್ಟವನ್ನು ತಂದೆಗಾಗಿ ಬಿಟ್ಟು ಕೊಡೋಣ. ಆಗ ನಾವು ಯೇಸುವಿನ ಹಾಗೆ  ಕಾರ್ಯಗಳನ್ನು ಮಾಡಲು ಸಾಧ್ಯ. ಆಗ ನಮ್ಮ ಮೂಲಕವಾಗಿ ಅನೇಕರು ಯೇಸುವನ್ನು ತಿಳಿದುಕೊಳ್ಳುತ್ತಾರೆ.

ಇದನ್ನು ಓದುತ್ತಿರುವ ಸ್ನೇಹಿತರೇ! ಇಂದು ನಾವೊಬ್ಬೊಬ್ಬರು ಜೂನಿಯರ್ ಯೇಸುವಾಗಿ ಜೀವಿಸಬೇಕು. ಈ ಲೋಕವು ಮೊದಲು ನಮ್ಮನ್ನೇ ನೋಡುತ್ತದೆ. ನಾವು ಯೇಸುವಿನ ಮಕ್ಕಳಾಗಿ ಜೀವಿಸುವುದರಿಂದ ಲೋಕವು ಯೇಸುವನ್ನು ತಿಳಿದುಕೊಳ್ಳುತ್ತದೆ. ನಾವು ಸುವಾರ್ತೆಯನ್ನು ಸಾರುವುದಕ್ಕಿಂತ ಮೊದಲು ನಮ್ಮ ಜೀವನವು ಸುವಾರ್ತೆಯಾಗಿ ಮಾರ್ಪಡಬೇಕು. ಇದುವೇ ಈ ಲೋಕವನ್ನು ದೇವರ ಕಡೆಗೆ ತಿರುಗಿಸಲು ಸರಿಯಾದ ಮಾರ್ಗವಾಗಿದೆ. ಯೇಸುವಿನಂತೆ ಎಲ್ಲವನ್ನು ಅಂಗೀಕರಿಸಿ, ಅವರ ಮನಸ್ಸು, ಶರೀರ ಅವಶ್ಯಕತೆಗಳನ್ನು ಪೂರೈಸುವವರಾಗಿದ್ದರೆ ನಾವು ಯೇಸುವಿನ "ಜೂನಿಯರ್ ಜೀಸಸ್" ಆಗಿ ಜೀವಿಸಲು ಸಾಧ್ಯ. ಇದುವೇ ನಾವು ಸುವಾರ್ತೆ ಸಾರುವ ವಿಧಾನವಾಗಿದೆ. ಯೇಸುವನ್ನು ಹಿಂಬಾಲಿಸೋಣ! ಜೂನಿಯರ್ ಜೀಸಸ್ ಆಗಿ ಜೀವಿಸೋಣ!
-    T. ಶಂಕರ್ ರಾಜ್

ಪ್ರಾರ್ಥನಾ ಅಂಶ:-
ಮೋಕ್ಷ ಪ್ರಯಾಣ ಮಾಸ ಪತ್ರಿಕೆಯು ಅನೇಕರಿಗೆ ಪ್ರಯೋಜನಕಾರಿಯಾಗಿ ಕಾಣಲ್ಪಡುವಂತೆ; ಇದರ ಮೂಲಕ ಭಕ್ತಿ ಅಭಿವೃದ್ಧಿಯಾಗುವಂತೆಯು ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking perabet casibom holiganbet galabet casibom grandpashabet perabet perabet giriş padişahbet padişahbet giriş grandpashabet kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino matbet