Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 02.06.2024 (Kids Special)
Share:

By Village Missionary Movement

Sunday, 02-Jun-2024

ಧೈನಂದಿನ ಧ್ಯಾನ(Kannada) – 02.06.2024 (Kids Special)

 

ಹೊಸ ತೀರ್ಮಾನ 

 

"[ಯೆಹೋವನು] – ನಿನ್ನನ್ನು ಉಪದೇಶಿಸಿ ನಡೆಯಬೇಕಾದ ಮಾರ್ಗವನ್ನು ತಿಳಿಸುವೆನು; ನಿನ್ನನ್ನು ಕಟಾಕ್ಷಿಸಿ ಆಲೋಚನೆ ಹೇಳುವೆನು [ಅನ್ನುತ್ತಾನಲ್ಲಾ]" - ಕೀರ್ತನೆ 32:8

 

ಹಲೋ ಪುಟಾಣಿಗಳೇ! Leave ಎಲ್ಲಾ ಮುಗಿದು ಶಾಲೆ ಶುರುವಾಗಿದೆಯಾ? ತುಂಬಾ ಕಷ್ಟವಾಗಿದೆಯಾ? ಅಥವಾ ಜಾಲಿಯಾಗಿದೆಯಾ? ಓಹ್.. ತುಂಬಾ ಜಾಲೀನಾ? Friends ಗಳೊಂದಿಗೆ ಸೇರಿ ಜಾಲಿಯಾಗಿ ಆಟವಾಡಬಹುದು ಮತ್ತು ನಗಬಹುದು ಆದರೆ ಅಧ್ಯಯನದಲ್ಲಿ ಜಾಗರೂಕರಾಗಿರಬೇಕು. Ok ಪುಟಾಣಿಗಳೇ ಕಥೆ ಕೇಳೋಣ್ವಾ? 

 

ಜಿಮ್ ಎಂಬ ಪುಟ್ಟ ತಮ್ಮ ಇದ್ದನು. ಅವನು Sunday school ಗೆ ತಪ್ಪದೇ ಹಾಜರಾಗುವುದರಲ್ಲಿ, ಸತ್ಯವೇದವನ್ನು ಓದುವುದರಲ್ಲಿ ತುಂಬಾ ಸರಿಯಾಗಿ ಇರುತ್ತಿದ್ದ. ಆದರೆ ಅವನಿಗೆ ಒಂದು ಕೆಟ್ಟ ಅಭ್ಯಾಸವಿತ್ತು. ಇಷ್ಟು ಒಳ್ಳೆಯ ಹುಡುಗನ ಹತ್ರಾನಾ? ಎಂದು ಯೋಚಿಸುತ್ತಿದ್ದೀರಾ? ಅವನು ಯಾವಾಗಲೂ ತನ್ನ ಸೆಲ್ ಫೋನ್‌ನಲ್ಲಿ ಫ್ರೀ ಫೈರ್ ಆಟವನ್ನು ಆಡುತ್ತಿದ್ದ. ಇದು ತಾಯಿಗೆ ತುಂಬಾ ದುಃಖವಾಗಿತ್ತು. ಸೆಲ್ ಫೋನ್‌ನಲ್ಲಿ ಮಾತ್ರ ವಿಧೇಯನಾಗುವುದಿಲ್ಲವಾ? ಅಮ್ಮ ಸಾಕೆಂದು ಹೇಳಿದಾಗಲೆಲ್ಲ ಅಮ್ಮ ಸ್ವಲ್ಪ ಹೊತ್ತು ತಾನೇ ಅಮ್ಮಾ, ಎಂದು ಹೇಳುತ್ತಿದ್ದ ಸಮಯ ಹೋಗುವುದೇ ಗೊತ್ತಿಲ್ಲದೆ ಆಟವಾಡುತ್ತಿದ್ದ.

 

ಏನು ಪುಟಾಣಿಗಳೇ, ಜಿಮ್ ಮಾಡೋದು ತಪ್ಪು ತಾನೇ! ನೀವು ಕೂಡ ಅದೇ ತಪ್ಪನ್ನು ಮಾಡುತ್ತಿದ್ದೀರಾ? ಇಲ್ಲ.. ಇಲ್ಲ.. ಸರಿ, ಬನ್ನಿ ಜಿಮ್‌ಗೆ ಏನಾಯಿತು ಎಂಬ ಕಥೆಯನ್ನು ಕೇಳೋಣ. ಜಿಮ್‌ನ ಸಹೋದರಿ ಜೂಡಿ, "ಅಮ್ಮಾ, ಅಣ್ಣ ಬೈಬಲ್ ತಪ್ಪು ತಪ್ಪಾಗಿ ಓದುತ್ತಾ ಇದ್ದಾನಮ್ಮಾ?" ಎಂದು ಹೇಳಿದ ಕೂಡಲೇ ಏನಾಯ್ತು ಜಿಮ್ ಎಂದು ಅಮ್ಮ ಕೇಳಿದಾಗ ಜಿಮ್ ಹೇಳಿದನು, "ಹೌದು ಅಮ್ಮಾ, ನನಗೆ ಸರಿಯಾಗಿ ಅಕ್ಷರಗಳು ಗೊತ್ತಾಗುತ್ತಿಲ್ಲ" ಎಂದು ಹೇಳಿದಾಗ ಅಮ್ಮ ತುಂಬಾ ಚಿಂತೆಮಾಡಿದರು. ಮರುದಿನ ಹೋಗಿ Eye doctor ಅನ್ನು ನೋಡಿದಾಗ, ಕಣ್ಣಿನಲ್ಲಿ ಸಣ್ಣ ಗಡ್ಡೆ ಇದೆ. ಇದರ ಬಗ್ಗೆ ಚೆನ್ನಾಗಿ ಗಮನಹರಿಸದೆ ಹೋದ್ರೆ ಕ್ಯಾನ್ಸರ್ ಆಗಿ ಹೊರಹೊಮ್ಮುತ್ತದೆ ಎಂದು ವೈದ್ಯರು ಹೇಳಿದರು. ಸೆಲ್ ಫೋನ್ ಅನ್ನು ಹೆಚ್ಚಾಗಿ ನೋಡಬಾರದು. ನಿಮಗೆ ದೃಷ್ಟಿ ಬೇಕಾದರೆ ಟಿವಿ ಮತ್ತು ಸೆಲ್ ಫೋನ್ ಅನ್ನು Avoid ಮಾಡಬೇಕು ಎಂದು ವೈದ್ಯರು ಹೇಳಿದಾಗ, ತಾಯಿ ದುಃಖದ ಮುಖದೊಂದಿಗೆ ಮತ್ತು ಕಳವಳದ ಕಣ್ಣುಗಳಿಂದ ಜಿಮ್‌ನ ಮುಖವನ್ನು ನೋಡಿದರು. ಜಿಮ್ ಮನದಲ್ಲಿ ದೃಢ ನಿರ್ಧಾರ ಮಾಡಿದ. ನಾನು ಇನ್ನು ಮುಂದೆ ಸೆಲ್ ಫೋನ್ ನೋಡುವುದಿಲ್ಲ. Jesus ನೀವು ನನಗೆ ಸಹಾಯ ಮಾಡಿ, please ಎಂಬ ಪ್ರಾರ್ಥನೆಯೊಂದಿಗೆ ತನ್ನನ್ನು ತಾನೇ ಒಪ್ಪಿಸಿಕೊಟ್ಟನು. 

 

ತಮ್ಮ, ತಂಗಿ ಈ ಹೊಸ ಶೈಕ್ಷಣಿಕ ವರ್ಷದಲ್ಲಿ ನೀವೂ ಕೆಲವು ನಿರ್ಣಯಗಳನ್ನು ಮಾಡಿರಬಹುದು. ಅದರಲ್ಲಿ ನೆಲೆಗೊಂಡಿರು. Jesus ನಿನಗೆ ಸಹಾಯ ಮಾಡುತ್ತಾರೆ. ನಿಮ್ಮ ಮನಸ್ಸನ್ನು ಹಾಳು ಮಾಡುವ ಟಿವಿ, ಸೆಲ್ ಫೋನ್ ಮತ್ತು ಕೆಟ್ಟ ಸ್ನೇಹಿತರಿಗೆ ನಿಮ್ಮ ಸಮಯವನ್ನು ನೀಡಬೇಡಿ, ನಿಮ್ಮ ಅಧ್ಯಯನದತ್ತ ಗಮನಹರಿಸಿ. ಹೊಸ ಶೈಕ್ಷಣಿಕ ವರ್ಷವು ನಿಮಗೆ ಆಶೀರ್ವಾದವಾಗಿರುತ್ತದೆ.

- Sis. ಜಯಶೀಲ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al Elexbet matbet giriş matbet instagram unban x unban twitter unban palacebet setrabet