Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 05.06.2024
Share:

By Village Missionary Movement

Wednesday, 05-Jun-2024

ಧೈನಂದಿನ ಧ್ಯಾನ(Kannada) – 05.06.2024

 

ಯಶಸ್ಸಿನ ಜೀವನ

 

"…ನಿಂತಿದ್ದೇನೆಂದು ನೆನಸುವವನು ಬೀಳದಂತೆ ಎಚ್ಚರಿಕೆಯಾಗಿರಲಿ" - 1 ಕೊರಿಂಥ 10:12

  

ಮೃಗಾಲಯದಲ್ಲಿ ಸಿಂಹವಿದ್ದ ಬೋನಿಗೆ ಮಗುವೊಂದು ಬಿದ್ದುಬಿಟ್ಟಿತು. ಜನ್ಮ ನೀಡಿದ ತಾಯಿ ತನ್ನ ಮಗುವನ್ನು ಅದರಲ್ಲಿ ಹಾಕುತ್ತಾಳಾ? ಇಲ್ಲ ತಾನೇ? ಏನೆಂದರೆ ಆ ತಾಯಿ ತನ್ನ ಮಗುವನ್ನು ಇಟ್ಟಿದ್ದ ಜಾಗವೇ ಅಪಾಯಕಾರಿಯಾಗಿದ್ದದರಿಂದ ಮಗು ಬಿದ್ದಿತ್ತು!

 

ಪಾಪದ ಅಂಚಿನಲ್ಲಿ ನಿಂತು, ನಾನು ನಿಂತಿದ್ದೇನೆ, ಬೀಳುವುದಿಲ್ಲ ಎಂದು ಹೇಳುವವರ ಸ್ಥಿತಿಯೂ ಹೀಗೆಯೇ ಇರುತ್ತದೆ. ಐಗುಪ್ತದಿಂದ ಹೊರಟ ಇಸ್ರಾಯೇಲ್ಯರು ದೇವರ ಮಾರ್ಗದರ್ಶನವನ್ನು ಕಣ್ಣಾರೆ ಕಂಡು ಅನುಭವಿಸಿದವರು, ದೇವರಿಂದ ದೂರ ಸರಿದು ದಣಿದರು. ಅವರು ದೇವರನ್ನು ಪರೀಕ್ಷಿಸಿ ಗೊಣಗಿದ್ದರಿಂದ ಅವರು ನಾಶವಾದರು. ದೇವರ ಮಾರ್ಗದರ್ಶನ ಪಡೆದವರ ಜೀವನದಲ್ಲಿ ಹೇಗೆ ಕುಸಿತ ಉಂಟಾಯಿತೋ ಹಾಗೆಯೇ ನಮ್ಮ ಜೀವನದಲ್ಲಿಯೂ ಕುಸಿತ ಬರಬಹುದು. ನಾವು ಎಚ್ಚರಿಕೆಯಿಂದ ಬದುಕಬೇಕು.

  

ನಮ್ಮ ಜೀವನದಲ್ಲಿ ಬರುವ ವೇದನೆ ಶೋಧನೆಗಳನ್ನು ಸಹಿಸಿಕೊಳ್ಳುವ ಶಕ್ತಿಯನ್ನೂ, ಪಾಪದ ಶೋಧನೆಗೆ ತಪ್ಪಿಸಿಕೊಳ್ಳುವ ಮಾರ್ಗವನ್ನೂ ನಮಗೆ ನೀಡಲು ದೇವರು ಸಮರ್ಥನಾಗಿದ್ದಾನೆ. ಎಚ್ಚರಿಕೆಯೊಂದಿಗೆ ಬದುಕುವುದೇ ನಮ್ಮ ಜವಾಬ್ದಾರಿ! ಪಾಪದ ಅಂಚಿನಲ್ಲಿ ನಿಂತುಕೊಂಡು ಆಟವಾಡಬಾರದು. ನಮ್ಮ ಸ್ವಂತ ಬುದ್ಧಿವಂತಿಕೆಯಲ್ಲಿ ಒರಗಿ ಅನೇಕ ಸಂದರ್ಭಗಳಲ್ಲಿ ನಮಗೆ ಎಲ್ಲಾ ಗೊತ್ತು ಎಂಬ ಭಂಗಿಯಲ್ಲಿ ಬದುಕುವುದರಿಂದ ಬಿದ್ದುಹೋಗುತ್ತೇವೆ. "ಗರ್ವದಿಂದ ಭಂಗ;

ಉಬ್ಬಿನಿಂದ ದೊಬ್ಬು" (ಜ್ಞಾನೋಕ್ತಿ 16:18)

 

ನಾವು ಎಲ್ಲಿ ನಿಂತಿದ್ದೇವೆ? ಹೆಮ್ಮೆಯಿಂದ ಅಹಂಕಾರದಿಂದ ಬದುಕುತ್ತಿದ್ದೇವೆಯೇ ಎಂದು ಸ್ವಲ್ಪ ನಿಧಾನಿಸಿ ನೋಡೋಣ. ಪಾಪದಲ್ಲಿ ಬಿದ್ದು ಏಳುವುದಕ್ಕಿಂತ ದೇವರ ಶಕ್ತಿಯಿಂದ ಜಾಗರೂಕತೆಯಿಂದ ಬದುಕುವುದು ಯಶಸ್ಸಿನ ಜೀವನಕ್ಕೆ ದಾರಿ ಮಾಡಿಕೊಡುತ್ತದೆಯಲ್ಲವೇ! "ನಿನಗೆ ವಿರೋಧವಾಗಿ ಪಾಪಮಾಡದಂತೆ

ನಿನ್ನ ನುಡಿಗಳನ್ನು ನನ್ನ ಹೃದಯದಲ್ಲಿಟ್ಟುಕೊಂಡಿದ್ದೇನೆ" 

(ಕೀರ್ತನೆ 119:11).

  

ಹೌದು, ಪ್ರಿಯರೇ! ನಾವು ಬಹಳ ಎಚ್ಚರಿಕೆಯಿಂದ ಬದುಕಬೇಕಾದ ಕಾಲಘಟ್ಟದಲ್ಲಿ ಬದುಕುತ್ತಿದ್ದೇವೆ. ಸ್ವಸ್ಥ ಬುದ್ಧಿಯುಳ್ಳವರಾಗಿ, ದೇವರ ವಾಕ್ಯವನ್ನು ಹೃದಯವೆಂಬ ಹಲಗೆಯ ಮೇಲೆ ಬರೆದವರಂತೆ ಎಚ್ಚರಿಕೆಯಿಂದ ಬದುಕಿ ಬಾಡದ ಜೀವ ಕಿರೀಟವನ್ನು ಸ್ವತಂತ್ರಿಸಿಕೊಳ್ಳೋಣ. ಆಮೆನ್.

- Mrs. ಬರ್ಲಿನ್ ಸೆಲ್ಲಾಬಾಯ್

 

ಪ್ರಾರ್ಥನಾ ಅಂಶ: 

ದೆಬೋರಾಳ್ ಪ್ರಾರ್ಥನಾ ಗುಂಪುಗಳ ಮೂಲಕ ಮಾಡುವಂತಹ ಸೇವೆಗಳನ್ನು ದೇವರು ಆಶೀರ್ವದಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet matbet giriş holiganbet holiganbet güncel holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet grandpashabet holiganbet grandpashabet grandpashabet grandpashabet perabet perabet giriş padişahbet padişahbet giriş grandpashabet grandpashabet grandpashabet casinolevant grandpashabet meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş