Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 19.06.2024
Share:

By Village Missionary Movement

Wednesday, 19-Jun-2024

ಧೈನಂದಿನ ಧ್ಯಾನ(Kannada) – 19.06.2024

 

ನೋಡುವ ದೇವರು 

 

"ಯೆಹೋವನ ದೃಷ್ಟಿಯು ಎಲ್ಲೆಲ್ಲಿಯೂ ಇರುವದು; ಆತನು ಕೆಟ್ಟವರನ್ನೂ ಒಳ್ಳೆಯವರನ್ನೂ ನೋಡುತ್ತಲೇ ಇರುವನು" - ಜ್ಞಾನೋಕ್ತಿ 15:3

  

ಒಂದು ದಿನ ಒಬ್ಬ ವ್ಯಕ್ತಿ ತೋಟದ ಅಂಚಿನಲ್ಲಿ ಹುಲ್ಲು ಕೊಯ್ಯುತ್ತಿದ್ದನು. ಆಗ ಅವನ ಕಣ್ಣುಗಳು ತೋಟದಲ್ಲಿನ ಟೊಮೆಟೊಗಳನ್ನು ನೋಡಿದವು. ತಕ್ಷಣವೇ ಅವನು ತನ್ನ ಮಗನನ್ನು ಕರೆದು ನಾನು ಹೋಗಿ ಈ ಹಣ್ಣುಗಳಲ್ಲಿ ಕೆಲವನ್ನು ಕಿತ್ತುಕೊಂಡು ಬರುತ್ತೇನೆ. ನೀನು ಯಾರಾದರೂ ಬರುತ್ತಿದ್ದಾರಾ ನೋಡು ಎಂದು ಹೇಳಿದರು. ಆಗ ಆ ಹುಡುಗ ಅಪ್ಪಾ, ಅಪ್ಪಾ ಒಬ್ಬರು ನಿಮ್ಮನ್ನು ನೋಡುತ್ತಲೇ ಇದ್ದಾರೆ ಎಂದನು. ಆಗ ಆ ವ್ಯಕ್ತಿ ನನ್ನನ್ನು ಯಾರು ನೋಡುತ್ತಿದ್ದಾರೆಂದು ಸುತ್ತಮುತ್ತ ನೋಡಿದರು. ಇಲ್ಲಪ್ಪಾ ದೇವರು ನಿಮ್ಮನ್ನು ಮೇಲಿಂದ ನೋಡುತ್ತಿದ್ದಾರೆ ಎಂದು ಹೇಳಿದನು. ಅಂದಿನಿಂದ ಆ ವ್ಯಕ್ತಿ ಕಳ್ಳತನ ಮಾಡುವುದನ್ನು ನಿಲ್ಲಿಸಿಬಿಟ್ಟರು. ಹೌದು, ದೇವರು ಎಲ್ಲೆಡೆ ಇದ್ದಾರೆ. ನಾವು ಗಾಳಿಯನ್ನು ನೋಡುವುದಿಲ್ಲ ಆದರೆ ಅದನ್ನು ಅನುಭವಿಸುತ್ತೇವೆ, ಅದರಂತೆಯೇ ನಾವು ದೇವರನ್ನು ನೋಡಲಾಗುವುದಿಲ್ಲ ಆದರೆ ಅವರು ಯಾವಾಗಲೂ ನಮ್ಮನ್ನು ನೋಡುತ್ತಿರಲು ಸಾಧ್ಯ.

  

ಸತ್ಯವೇದದಲ್ಲಿಯೂ ಅಬ್ರಹಾಮನ ಹೆಂಡತಿಯಾದ ಸಾರಳಿಗೆ ಮಕ್ಕಳಿರಲಿಲ್ಲ. ಸಾರಳು ತನ್ನ ಗುಲಾಮ ಹುಡುಗಿಯಾದ ಹಾಗರಳಿಂದ ಮಗುವನ್ನು ಹೊಂದಲು ಯೋಚಿಸಿದಳು. ಸಾರಳು ಅಬ್ರಹಾಮನಿಗೆ ಹಾಗರಳನ್ನು ಹೆಂಡತಿಯಾಗಿ ಮಾಡಿದಳು. ಹಾಗರಳು ಗರ್ಭಿಣಿಯಾದಳು ಮತ್ತು ಮಗುವಿಗೆ ಜನ್ಮ ನೀಡಿದಳು, ಅದರಿಂದಾಗಿ ಅವಳು ಸಾರಳನ್ನು ತಿರಸ್ಕರಿಸಿದಳು. ಇದನ್ನು ಸಹಿಸಲಾರದ ಸಾರಳು ಅಬ್ರಹಾಮನ ಬಳಿ ಅವಳನ್ನು ಕಳುಹಿಸಿಬಿಡುವಂತೆ ಹೇಳಿದಳು. ಅಬ್ರಹಾಮನು ಕೂಡಲೆ ನಿನಗೆ ಸರಿ ಕಾಣುವ ಹಾಗೆ ಅವಳನ್ನು ನಡೆಸು ಎಂದು ಹೇಳಿಬಿಟ್ಟನು. ಕಿರುಕುಳಕ್ಕೊಳಗಾದ ಹಾಗರಳು ಸಾರಳಿಂದ ಓಡಿಹೋದಳು. ಕರ್ತನ ದೂತನು ಅವಳನ್ನು ಅರಣ್ಯದಲ್ಲಿ ಕಂಡು, ಹಾಗರಳೇ, ಎಲ್ಲಿಂದ ಬಂದೆ? ಎಲ್ಲಿಗೆ ಹೋಗುತ್ತೀಯ ಎಂದು ಕೇಳಿದರು. ಅದಕ್ಕೆ ಅವಳು ನನ್ನ ಯಜಮಾನಿಯಾದ ಸಾರಳನ್ನು ಬಿಟ್ಟು ಓಡಿಹೋಗುತ್ತಿದ್ದೇನೆ ಎಂದಳು. ಆಗ ಕರ್ತನ ದೂತನು ಅವಳಿಗೆ ನೀನು ಹಿಂತಿರುಗಿ ಹೋಗಿ ಸಾರಳ ಕೈಕೆಳಗೆ ನಿನ್ನನ್ನು ತಗ್ಗಿಸಿಕೋ ಎಂದು ಹೇಳಿದರು. ಹಾಗರಳು, "ನೀನು ನನ್ನನ್ನು ನೋಡುವ ದೇವರು" ಎಂದು ಹೆಸರಿಟ್ಟಳು.

 

ಹೌದು, ದೇವರು ನಮ್ಮನ್ನು ನೋಡುವಾತನು. ಆತನು ಉನ್ನತ ಆಕಾಶದಿಂದ ನಮ್ಮನ್ನು ನೋಡುತ್ತಿದ್ದಾರೆ. ನಾವು ಮಾಡುವ ಯಾವುದನ್ನೂ ಆತನಿಂದ ಮರೆಮಾಡಲು ಸಾಧ್ಯವಿಲ್ಲ. ನಮ್ಮ ಜೀವನದಲ್ಲಿ ಎಲ್ಲವನ್ನೂ ಮೇಲ್ವಿಚಾರಣೆ ಮಾಡುವ ಮತ್ತು ಕಾರ್ಯಗತಗೊಳಿಸುವವರು ಅವರೇ! ಅವರು ನಮ್ಮ ಕ್ರಿಯೆಗಳನ್ನು ಮಾತ್ರವಲ್ಲದೆ ನಮ್ಮ ಆಲೋಚನೆಗಳನ್ನೂ ನೋಡುತ್ತಾರೆ. ನಮ್ಮ ಹೃದಯದಲ್ಲಿ ಅಡಗಿರುವುದು ಕೂಡ ಆತನ ಕಣ್ಣಿಗೆ ಮರೆಯಾಗಿಲ್ಲ. ನಾವು ಕುಳಿತುಕೊಳ್ಳುವುದು ಮತ್ತು ಏಳುವುದು ಅವರಿಗೆ ಗೊತ್ತು. ಆದ್ದರಿಂದ ನಮ್ಮ ಎಲ್ಲಾ ಕಾರ್ಯಗಳು ದೇವರಿಗೆ ಇಷ್ಟವಾಗಿರಲಿ. ದೇವರು ನಮ್ಮನ್ನು ಆಶೀರ್ವದಿಸುತ್ತಾರೆ. 

- Sis. ಹೆಪ್ಸಿ

 

ಪ್ರಾರ್ಥನಾ ಅಂಶ:

ಆಗಸ್ಟ್ 15 ರಂದು ನಡೆಯಲಿರುವ ಯೌವನಸ್ಥರ ಉಜ್ಜೀವನ ಕೂಟಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet holiganbet sahabet onwin bets10 bets10 giriş bets10 güncel giriş betcio atlasbet casibom meritking perabet casibom holiganbet galabet casibom padişahbet padişahbet giriş grandpashabet ibizabet tambet grandpashabet jojobet nesinecasino betbey betgit grandpashabet betpuan cashwin matbet meritking perabet perabet giriş instagram ban service betsilin betsilin giris pashagaming pashagaming giris gorabet gorabet giris kralbet holiganbet grandpashabet grandpashabet giriş holiganbet giriş çarkbet çarkbet giriş