Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 21.06.2024
Share:

By Village Missionary Movement

Friday, 21-Jun-2024

ಧೈನಂದಿನ ಧ್ಯಾನ(Kannada) – 21.06.2024

 

ಸಮರ್ಪಣೆ 

 

"…ನೀನು ಮಾಡಬೇಕಾದದ್ದು ಅಲ್ಲಿ ನಿನಗೆ ತಿಳಿಸಲ್ಪಡುವದು…” - ಅಪೊಸ್ತಲ. 9: 6

  

ನಾನು ಮೂರು ಕಡೆ ಪಶ್ಚಿಮ ಘಟ್ಟಗಳಿಂದ ಸುತ್ತುವರಿದ ಹಳ್ಳಿಯಲ್ಲಿ ವಾಸಿಸುತ್ತಿದ್ದೆ. ಆ ಬೆಟ್ಟದ ತಪ್ಪಲಿನಲ್ಲಿ ಒಂದು ಅಣೆಕಟ್ಟು ಕಟ್ಟಲಾಗಿದೆ. ಭಾರೀ ಮಳೆಯ ಸಂದರ್ಭದಲ್ಲಿ ಅಣೆಕಟ್ಟು ನೀರಿನಿಂದ ತುಂಬಿ ಸಣ್ಣ ಸಮುದ್ರದಂತೆ ಕಾಣುತ್ತದೆ. ಅದು ಹೃದಯಕ್ಕೆ ರಮ್ಯವಾಗಿರುತ್ತದೆ. ಆ ಅಣೆಕಟ್ಟಿಗೆ ಇಷ್ಟೊಂದು ನೀರು ಬರಲು ಕಾರಣ ಒಂದು ಹೊಳೆ. ಇದು ವಿಸ್ತಾರವಾದ ಭೂಮಿಯಲ್ಲಿ ಸಣ್ಣ ಬುಗ್ಗೆಯಾಗಿ ಪ್ರಾರಂಭವಾಗುತ್ತದೆ. ಮಳೆಗಾಲದಲ್ಲಿ ಅನೇಕ ತೊರೆಗಳು ದೀರ್ಘ ಪ್ರಯಾಣದಲ್ಲಿ ಅಣೆಕಟ್ಟನ್ನು ಸೇರುತ್ತವೆ. ಇದರಿಂದಾಗಿ ಅಣೆಕಟ್ಟೆಯಲ್ಲಿ ಹರಿವು ಹೆಚ್ಚುತ್ತದೆ. ಅನೇಕ ಕೃಷಿಯೋಗ್ಯ ಭೂಮಿಗಳು ಬಳಕೆಯಲ್ಲಿವೆ. ಜನರಿಗೂ ಬೇಕಾದಷ್ಟು ನೀರು ಸಿಗುತ್ತದೆ. ಆ ಹೊಳೆಗಳು ಎಲ್ಲೆಲ್ಲೋ ಅನಿಯಮಿತವಾಗಿ ಹರಿದು ಹೋದರೆ ಇಷ್ಟರ ಮಟ್ಟಿಗೆ ಉಪಯೋಗವಾಗಲು ಸಾಧ್ಯವಾ?

 

ಹೊಸ ಒಡಂಬಡಿಕೆಯಲ್ಲಿ ಸೌಲನೆಂಬ ಯುವಕನು ಸಹ ತಪ್ಪು ದಿಕ್ಕಿನಲ್ಲಿ ಪ್ರಯಾಣಿಸಿದನು. ಅವರು ಸಾಂಪ್ರದಾಯಿಕ ಸಿದ್ಧಾಂತಗಳಿಗಾಗಿ ಬಹಳ ಭಕ್ತಿ ವೈರಾಗ್ಯವಾಗಿ ದೇವರ ಸಭೆಯನ್ನು ಹಿಂಸಿಸುತ್ತಾ ಅವ್ಯವಸ್ಥೆಯ ರೀತಿಯಲ್ಲಿ ಬದುಕುತ್ತಿದ್ದರು. ಅವರದು ಯಾರಿಗೂ ಉಪಯೋಗವಿಲ್ಲದ ಜೀವನವಾಗಿತ್ತು. ಆದರೆ ಆಕಾಶದಿಂದ ಬೆಳಕನ್ನು, ಧ್ವನಿಯನ್ನು ಕೇಳಿದಾಗ, "ಕರ್ತನೇ, ನಾನು ಏನು ಮಾಡಬೇಕೆಂದು ಬಯಸುತ್ತೀರಾ?" ಎಂದು ಕೇಳಿ ತನಗಾದ ಒಂದು ಯೋಜನೆ ಅನ್ಯಜನರಿಗೆ ಯೇಸುಕ್ರಿಸ್ತನನ್ನು ಸುವಾರ್ತೆಯಾಗಿ ಸಾರುವುದೇ ಎಂಬುದನ್ನು ತಿಳಿದುಕೊಂಡರು. ಆ ಪರಮ ದರ್ಶನಕ್ಕೆ ತನ್ನನ್ನು ಸಮರ್ಪಿಸಿಕೊಂಡರು. ಆ ಸಣ್ಣ ಸಮರ್ಪಣೆಯು ಪೌಲನು ಯೇಸುವನ್ನು ಅನೇಕ ದೇಶಗಳಿಗೆ ತಿಳಿಸುವಂತೆ ಮಾಡಿತು. ಸತ್ಯವೇದದಲ್ಲಿರುವ ಇಷ್ಟು ಪತ್ರಿಕೆಗಳ ಮೂಲಕ ಈ ಇಂದಿಗೂ ನಮ್ಮೊಂದಿಗೆ ಮಾತನಾಡುತ್ತಿದ್ದಾರೆ ಮತ್ತು ಕ್ರಿಸ್ತನಿಗಾಗಿ ಇಷ್ಟು ಪ್ರಯಾಸಪಡುವಂತೆ ಮಾಡಿತು. ಅನೇಕರಿಗೆ, ಅಷ್ಟೇ ಯಾಕೆ ನಮಗೂ ಉಪಯುಕ್ತವಾದ ಜೀವನವನ್ನು ಜೀವಿಸಿದರು. ಧೈರ್ಯವಾಗಿ ನನ್ನನ್ನು ಹಿಂಬಾಲಿಸಿರಿ ಎಂದು ಹೇಳುವಂತೆ ಬದುಕಿದರು. ಆ ಹರಿವು ಇನ್ನೊಂದು ದಿಕ್ಕಿನಲ್ಲಿ ಹೋದರೆ, ಅದು ನಿಷ್ಪ್ರಯೋಜಕ ಅದರ ಲಾಭವನ್ನು ನಾವು ಅನುಭವಿಸಲು ಸಾಧ್ಯವಿಲ್ಲ. ಸರಿಯಾದ ಮಾರ್ಗಕ್ಕೆ ತಿರುಗಿಸಿಬಿಟ್ಟಾಗ ಅದರ ಸಂಪೂರ್ಣ ಲಾಭವನ್ನು ಪಡೆಯುತ್ತೇವೆ.

 

ಪ್ರಿಯರೇ! ಈ ಭೂಮಿಯಲ್ಲಿ ದೇವರ ಕಾರ್ಯವು ನಮ್ಮಲ್ಲಿ ಪ್ರಕಟವಾಗಲು ನಮ್ಮ ಪಾಲು ಏನು? ಎಂಬುದನ್ನು ಅರಿತುಕೊಳ್ಳಬೇಕು. ಹೀಗೆ ನಾವು ಆತನ ಚಿತ್ತವನ್ನು ಮಾಡಲು ನಮ್ಮನ್ನು ಅರ್ಪಿಸಿಕೊಂಡಾಗ, ದೇವರ ಅನುಗ್ರಹ ಮತ್ತು ಕರುಣೆಯು ಕಾರಂಜಿಯಂತೆ ನಮ್ಮೊಳಗೆ ಹರಿಯುತ್ತದೆ ಮತ್ತು ನಾವು ಆಧ್ಯಾತ್ಮಿಕ ಬಾಯಾರಿಕೆಯಿಂದ ತುಂಬುತ್ತೇವೆ. ಈ ಆತ್ಮದಾಹವೇ ಸೈನ್ಯದ ನಾಯಕನಾದ ಯೇಸುವಿನ ಯುದ್ಧಭೂಮಿಗೆ ಅನೇಕ ಆತ್ಮಗಳನ್ನು ನಮಗೆ ಸಹಾಯ ಮಾಡುತ್ತದೆ.

- A. ಬ್ಯೂಲಾ

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್‌ನಲ್ಲಿ ನಡೆಯುವ ಸ್ವಸ್ಥತೆಯ ಆರಾಧನೆಯಲ್ಲಿ ಅನೇಕರು ಭಾಗವಹಿಸಿ ಪ್ರಯೋಜನ ಪಡೆಯುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al deneme bonusu deneme bonusu veren siteler meritking meritking giriş meritking güncel giriş alobet alobet giriş nakitbahis Betpark milanbahis nakitbahis online casino online casino perabet perabet giriş perabet perabet giriş bahsegel jojobet perabet perabet giriş perabet güncel giriş jojobet jojobet giriş jojobet güncel giriş Holiganbet Holiganbet Giriş Holiganbet Güncel Giriş Superbetin Superbetin Giriş Superbetin Güncel Giriş pashagaming pashagaming giriş pashagaming güncel giriş betcio Betcio Giriş betcio güncel giriş atlasbet atlasbet giriş atlasbet güncel giriş Piabet Piabet Giriş Ngsbahis Ngsbahis Giriş İnterbahis İnterbahis Giriş Klasbahis Klasbahis Giriş Coinbar Coinbar Giriş Limanbet Limanbet Giriş İmajbet İmajbet Giriş Restbet Restbet Giriş Matbet Matbet Giriş Jasminbet Jasminbet Giriş Belugabahis Belugabahis Giriş Online casino nz Best payout online casino nz