Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 25.06.2024
Share:

By Village Missionary Movement

Tuesday, 25-Jun-2024

ಧೈನಂದಿನ ಧ್ಯಾನ(Kannada) – 25.06.2024

 

ದೇವರ ಮಾರ್ಗ ಆಶ್ಚರ್ಯವಾದದ್ದು 

 

"…ದೇವರು ತನ್ನನ್ನು ಪ್ರೀತಿಸುವವರಿಗಾಗಿ ಸಿದ್ಧಮಾಡಿರುವಂಥದೆಲ್ಲವನ್ನು ಕಣ್ಣು ಕಾಣಲಿಲ್ಲ, ಕಿವಿ ಕೇಳಲಿಲ್ಲ,…" - 1 ಕೊರಿಂಥ. 2:9

  

ಅನೇಕ ಭಕ್ತರು ತಮ್ಮ ಜೀವನದ ಕಷ್ಟದ ಸಮಯದಲ್ಲಿ ಕರ್ತನು ಕೈಬಿಟ್ಟರೋ? ಎಂದು ಕೂಗುತ್ತಾರೆ. ಯೇಸು ಸಹ ನಮ್ಮಂತೆ ಶಾರೀರಿಕವಾಗಿದ್ದು ಪಾಡುಪಟ್ಟು ಶಿಲುಬೆಯಲ್ಲಿ ಸಾಯುವ ಸಂದರ್ಭದಲ್ಲಿ "ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟಿದ್ದೀ?" ಎಂದು ಹೇಳಿದರು. ಅಪೊಸ್ತಲನಾದ ಪೌಲನು, "ಈ ಬಲಹೀನತೆಯು ನನ್ನಿಂದ ದೂರವಾಗಲು ಸಾಧ್ಯವಾದರೆ, ಅದು ನನ್ನಿಂದ ದೂರವಾಗಲಿ" ಎಂದರು. ಅದಕ್ಕೆ ಯೇಸು "ನನ್ನ ಕೃಪೆಯೇ ನಿನಗೆ ಸಾಕು" ಎಂದರು. ನಾವು ಸಹ ನಮ್ಮ ಶಾರೀರಿಕ ಪಾಡುಗಳು ಮತ್ತು ನಷ್ಟದ ಸಮಯಗಳಲ್ಲಿ ಏಕೆ ಎಂದು ಕೇಳಿ ಅರ್ಥವಾಗದೆ ತವಕಿಸುತ್ತಿದ್ದೇವೆ. ಇದನ್ನೇ ಅನೇಕ ವಿಶ್ವಾಸಿಗಳ ಜೀವನದಲ್ಲೂ ನೋಡುತ್ತಿದ್ದೇವೆ. ಆದರೆ ಕರ್ತನು ನಮ್ಮಲ್ಲಿ ಪ್ರತಿಯೊಬ್ಬರಿಗೂ ಪ್ರತ್ಯೇಕವಾದ ಮಾರ್ಗವನ್ನು ಸಿದ್ಧಮಾಡಿಕೊಟ್ಟು ಮುನ್ನಡೆಸುತ್ತಿದ್ದಾರೆ ಎಂಬುದನ್ನು ಹಲವರ ಜೀವನ ಚರಿತ್ರೆಯಲ್ಲಿ ನಾವು ನೋಡಬಹುದು. 

   

ಯೇಸುವನ್ನು ಸ್ವೀಕರಿಸಿದ ಬ್ರೌನ್ ಎಂಬ ಯೋಧ, ಹಡಗಿನ ಪ್ರಮಾದದಲ್ಲಿ ಸಿಲುಕಿ, ಮುರಿದ ಮರದ ದಿಮ್ಮಿಗಳ ಮೂಲಕ ಈಜಿ ದ್ವೀಪಕ್ಕೆ ಹೋಗಿ ಸೇರಿದರು. ಆ ನಿರ್ಜನ ದ್ವೀಪದಲ್ಲಿ, ಹಣ್ಣುಗಳನ್ನು, ಸಿಕ್ಕವುಗಳನ್ನು ಬೇಟೆಯಾಡಿ ತಿಂದು ಬದುಕುತ್ತಿದ್ದರು. ಸಿಕ್ಕ ಸಾಮಾಗ್ರಿಗಳಿಂದ ಒಂದು ಗುಡಿಸಲು ಕಟ್ಟಿಕೊಂಡು ಸಾಯುವವರೆಗೂ ಇದೇ ತನ್ನ ಜೀವನ ಎಂದುಕೊಂಡು ಬದುಕುತ್ತಿದ್ದರು. ಏಕೆಂದರೆ ಆ ಪ್ರದೇಶದಲ್ಲಿ ಬಹುಕಾಲ ಒಂದೇ ಒಂದು ದೋಣಿಯಾಗಲಿ, ಹಡಗಾಗಲಿ ಕಾಣಲಿಲ್ಲ. ಒಂದು ದಿನ ಅವರು ಬೇಟೆಯಾಡುತ್ತಿದ್ದಾಗ ಅವರು ಹಾಕಿಕೊಂಡಿದ್ದ ಗುಡಾರಕ್ಕೆ ಬೆಂಕಿ ಹತ್ತಿಕೊಂಡಿತು. ಅವರು ತುಂಬಾ ದಣಿದು ತನ್ನ ಜೀವನವನ್ನೇ ಕೊನೆಗೊಳಿಸಲು ನಿರ್ಧರಿಸಿದಾಗ, ಒಂದು ಹಡಗು ಕಣ್ಮುಂದೆ ಬರುತ್ತಿತ್ತು. ಹಡಗು ತನ್ನ ಕಡೆಗೆ ಬರುತ್ತಿದೆ ಎಂದು ತಿಳಿದು ಸಂತೋಷವಾಯಿತು. ಆ ಹಡಗಿನಲ್ಲಿ ಹತ್ತಿದರು. ಆ ನಾವಿಕ ಹೊಗೆಯನ್ನು ನೋಡಿ ನಾವು ಬಂದೆವು ಎಂದು ಹೇಳಿದರು. ದೇವರೇ ಇದನ್ನು ಮಾಡಿದರೆಂದು ತಿಳಿದ ಬ್ರೌನ್ ದೇವರಿಗೆ ಮಹಿಮೆಯನ್ನು ಸಲ್ಲಿಸಿದರು.

 

ಇಂದು ನಾವು ಈ ಹಾದಿಯಲ್ಲಿ ಏಕೆ ಹೋಗುತ್ತಿದ್ದೇವೆ ಎಂದು ಆಶ್ಚರ್ಯಪಡುವ ಪ್ರತಿಯೊಬ್ಬರಿಗೂ, ದೇವರು ಅದ್ಭುತವಾದ ಮಾರ್ಗವನ್ನು ಸಿದ್ಧಮಾಡಿ ಇಟ್ಟಿದ್ದಾರೆ. ನಾವು ಎಲ್ಲದಕ್ಕೂ ದೇವರನ್ನು ಸ್ತುತಿಸುವಾಗ, ಖಂಡಿತವಾಗಿಯೂ ದೇವರು ನಮಗೆ ಒಳ್ಳೆಯದನ್ನು ನೀಡುತ್ತಾರೆ. ಕರ್ತನಿಗೇ ಮಹಿಮೆಯುಂಟಾಗಲಿ!

- Mrs. ಫಾತಿಮಾ ಸೆಲ್ವರಾಜ್

 

ಪ್ರಾರ್ಥನಾ ಅಂಶ:

ಹಸ್ತಪ್ರತಿ ಸೇವೆಗಳ ಮೂಲಕ ಹಸ್ತಪ್ರತಿಯನ್ನು ಸ್ವೀಕರಿಸಿದ ಪ್ರತಿಯೊಬ್ಬರ ರಕ್ಷಣೆಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking perabet casibom holiganbet galabet casibom perabet perabet giriş padişahbet padişahbet giriş grandpashabet kalitebet kalitebet giris betsmove betsmove giris gonebet gonebet giris betnano betnano giriş jojobet jojobet casinomilyon jojobet palacebet sonbahis tambet grandpashabet betgit mercurecasino matbet