Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 01.07.2024
Share:

By Village Missionary Movement

Monday, 01-Jul-2024

ಧೈನಂದಿನ ಧ್ಯಾನ(Kannada) – 01.07.2024

 

ವರಗಳು

 

"ಇದಲ್ಲದೆ ನಂಬುವವರಿಂದ ಈ ಸೂಚಕಕಾರ್ಯಗಳು ಉಂಟಾಗುವವು; ನನ್ನ ಹೆಸರನ್ನು ಹೇಳಿ ದೆವ್ವಗಳನ್ನು ಬಿಡಿಸುವರು; ಹೊಸಭಾಷೆಗಳಿಂದ ಮಾತಾಡುವರು" - ಮಾರ್ಕನು 16:17

  

ನಾನು ಮೊಟ್ಟ ಮೊದಲು ಸೇವೆಯನ್ನು ಪ್ರಾರಂಭಿಸಿದ ಹೊಸದರಲ್ಲಿ ಒಂದು ಹಳ್ಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ಆ ದಾರಿಯಲ್ಲಿ ವಯಸ್ಸಾದ ಅಜ್ಜಿಯೊಬ್ಬರು ಕುಳಿತು ಧಾನ್ಯಗಳನ್ನು ಸೋಸುತ್ತಿದ್ದಾಗ ಇದ್ದಕ್ಕಿದ್ದಂತೆ ಒದ್ದಾಡಿ ಕೆಳಗೆ ಬಿದ್ದರು. ಅವರೊಳಗಿದ್ದ ಸೈತಾನನು ಕಿರುಚುತ್ತಾ ಓಡಿ ಹೋಯಿತು. ನಾನು ಅವರ ತಲೆಯ ಮೇಲೆ ಕೈಯಿಟ್ಟು ಪ್ರಾರ್ಥಿಸಲೂ ಇಲ್ಲ. ಅದಕ್ಕೂ ಮೊದಲು ಆ ತಾಯಿಯ ಬಗ್ಗೆ ನನಗೆ ಏನೂ ತಿಳಿದಿರಲಿಲ್ಲ. ಆದರೂ ನಾನು ನಡೆಯುವಾಗ ಪವಿತ್ರಾತ್ಮನು ಕ್ರಿಯೆ ಮಾಡಿದರು ಎಂಬುದನ್ನು ಮಾತ್ರ ನನ್ನಿಂದ ಗ್ರಹಿಸಲು ಸಾಧ್ಯವಾಯಿತು.

  

ಸತ್ಯವೇದದಲ್ಲಿ ನಾವು ಆದಿ ಅಪೊಸ್ತಲರ ದಿನಗಳಲ್ಲಿ ಸಂಭವಿಸಿದ ಅದ್ಭುತಗಳು ಮತ್ತು ಅತಿಶಯಗಳ ಬಗ್ಗೆ ಓದುತ್ತೇವೆ. ಅವರ ಕೈಗಳಿಂದ ಜನರಲ್ಲಿ ಅನೇಕ ಸೂಚಕಕಾರ್ಯಗಳೂ ಅದ್ಭುತಗಳೂ ನಡೆದವು. ಮತ್ತು ರೋಗಿಗಳನ್ನು ಹಾಸಿಗೆಗಳ ಮೇಲೆ ಮಂಚಗಳ ಮೇಲೆ ಮಲಗಿಸಿ ಪೇತ್ರನು ನಡೆದು ಹೋಗುವಾಗ ಅವನ ನೆರಳಾದರೂ ಕೆಲವರ ಮೇಲೆ ಬೀಳುವ ಹಾಗೆ ಅವರನ್ನು ಬೀದಿಗೆ ತಂದಿಟ್ಟರು. ಪ್ರತ್ಯಕ್ಷವಾದ ಅದ್ಭುತಗಳು ನಡೆದವು. ವರಗಳು ಪ್ರಕಟವಾದವು.  

  

ಯೇಸುಕ್ರಿಸ್ತನು ಪರಲೋಕಕ್ಕೆ ಏರಿ ಹೋಗುವ ಮುನ್ನ ಹೋಗಿ ಸಕಲ ಜನರನ್ನು ಶಿಷ್ಯರನ್ನಾಗಿ ಮಾಡಿ ಪವಿತ್ರಾತ್ಮದಿಂದ ದೀಕ್ಷಾಸ್ನಾನ ಮಾಡಿಸಿ ಎಂದು ಅಪ್ಪಣೆಕೊಟ್ಟರು. ಆದುದರಿಂದ, ಆತನು ಮಾಡಿದ ಉಪಕಾರವನ್ನು ಸುವಾರ್ತೆಯನ್ನು ಇತರರಿಗೆ ಸಾರುವುದು ನಮ್ಮ ಕರ್ತವ್ಯ. ನಾವು ಆ ಆಜ್ಞೆಯನ್ನು ಪೂರ್ಣ ಹೃದಯದಿಂದ ಮತ್ತು ಆಸೆಯಿಂದ ಮಾಡಿದಾಗ, ಪವಿತ್ರಾತ್ಮನಿಂದ ನಮಗೆ ವರಗಳು ಕೊಡಲ್ಪಡುತ್ತದೆ. ಪೇತ್ರನು ಮಾಡಿದ್ದು ಇದನ್ನೇ. ವಿರೋಧದ ನಡುವೆಯೂ ಧೈರ್ಯದಿಂದ ಎದ್ದು ನಿಂತು ಯೇಸುವನ್ನು ಪ್ರಕಟಿಸಿದಾಗ ವರಗಳು ಕ್ರಿಯೆ ಮಾಡಿದವು. ಆದ್ದರಿಂದ, ಅವರು ಹೋಗುವ ಮಾರ್ಗಗಳಲ್ಲೂ ಕರ್ತನು ಅವರ ಮೂಲಕ ಕಾರ್ಯ ಮಾಡಲು ಪ್ರಾರಂಭಿಸಿದರು.

 

ಪ್ರಿಯರೇ! ನಿಮ್ಮ ಮೂಲಕ ಈ ರೀತಿಯ ಅದ್ಭುತಗಳು ನಡೆಯಬೇಕೆಂದು ನೀವು ಬಯಸುತ್ತೀರಾ? ನೀವು ದೇವರ ಆಜ್ಞೆಯನ್ನು ಪಾಲಿಸುವಾಗ, ಖಂಡಿತವಾಗಿಯೂ ನಿಮ್ಮ ಮುಖಾಂತರ ಪವಿತ್ರಾತ್ಮನು ಮಹತ್ತರವಾದ ಕಾರ್ಯಗಳನ್ನು ನಡೆಸುತ್ತಾರೆ. ಹೇಗೆಂದರೆ ಆತನನ್ನು ನಂಬಿ, ಆ ನಂಬಿಕೆಯನ್ನು ಇತರರಿಗೆ ವರ್ಗಾಯಿಸಿದಾಗ, ವರಗಳು ನಿಮ್ಮ ಮೂಲಕ ಕಾರ್ಯನಿರ್ವಹಿಸುತ್ತವೆ. ಆ ನಂಬಿಕೆಯಿಂದ ನಾನು ಇತರರ ಮೇಲೆ ಕೈ ಹಾಕಿದಾಗ ಕಾಯಿಲೆ ಮಾಯವಾಗುತ್ತದೆ. ಸೈತಾನನು ಓಡುತ್ತಾನೆ. ಆತನು ನನ್ನ ಪ್ರಾರ್ಥನೆಗಳನ್ನು ಕೇಳಿ, ಮಹತ್ಕಾರ್ಯಗಳನ್ನು ಮಾಡುತ್ತಾರೆ. ನೀವು ನಿಜವಾಗಿಯೂ ಆತನನ್ನು ನಂಬಿದರೆ, ಆತನನ್ನು ಇತರರಿಗೆ ಪ್ರಕಟಿಸಿ, ವರಗಳು ನಿಸ್ಸಂದೇಹವಾಗಿ ನಿಮ್ಮೊಳಗಿಂದ ಕಾರ್ಯ ಮಾಡುತ್ತವೆ. ನಿಮ್ಮ ಕೈಗಳಿಂದಲೂ ಇವುಗಳು ನಡೆಯುತ್ತವೆ, ಹೊರಡಿರಿ.

- K. ಡೇವಿಡ್ ಗಣೇಶನ್

 

ಪ್ರಾರ್ಥನಾ ಅಂಶ:

ಈ ತಿಂಗಳು ಪೂರ್ತಿಯಾಗಿ ನಡೆಯುವಂತಹ ಸೇವೆಗಳಲ್ಲಿ ದೇವರ ಹಸ್ತವು ಜೊತೆಯಿದ್ದು ನಡೆಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş matbet giriş sahabet onwin bets10 bets10 giriş bets10 güncel giriş betcio atlasbet casibom meritking perabet casibom holiganbet galabet casibom padişahbet padişahbet giriş grandpashabet jojobet tambet grandpashabet jojobet nesinecasino betbey cratosroyalbet grandpashabet betpuan cashwin matbet meritking perabet perabet giriş instagram ban service betsilin betsilin giris pashagaming pashagaming giris gorabet gorabet giris kralbet holiganbet grandpashabet grandpashabet giriş https://tr.holiganbet-30temmuz.art/