By Village Missionary Movement
Tuesday, 20-Apr-2021ಧೈನಂದಿನ ಧ್ಯಾನ(Kannada) – 20.04.2021
ನೀನು ಯಾರಿಗಾಗಿ ಜೀವಿಸುತ್ತಿದ್ದೀಯ?
"ನಾವು ಕಾಣುವಂಥದನ್ನು ಲಕ್ಷಿಸದೆ ಕಾಣದಿರುವಂಥದನ್ನು ಲಕ್ಷಿಸುವವರಾಗಿದ್ದೇವೆ. ಕಾಣುವಂಥದು ಸ್ವಲ್ಪಕಾಲ ಮಾತ್ರ ಇರುವದು; ಕಾಣದಿರುವಂಥದು ಸದಾಕಾಲವೂ ಇರುವದು." - 2 ಕೊರಿಂಥ 4:17
ರಕ್ಷಣಾ ಸೇನೆ ಸಭೆಯ ಸ್ಥಾಪಕರು ಸಹೋದರ. ವಿಲಿಯಂ ಬೂತ್ ರವರು ಬರೆದ ಒಂದು ಸಂದೇಶದಲ್ಲಿ ತಾನು ಕಂಡ ಕನಸಿನ ಬಗ್ಗೆ ಬರೆದಿದ್ದಾರೆ. ಆ ಕನಸಿನಲ್ಲಿ ತನ್ನನ್ನು ಒಂದು ಸಾಧಾರಣ ವಿಶ್ವಾಸಿಯಾಗಿಯೇ ಕಂಡರು. ಅಲ್ಲಿ ಪರಲೋಕದಲ್ಲಿ ವಿಲಿಯಂ ಬೂತ್ ಜೀವ ಪುಸ್ತಕವನ್ನು ನೋಡಿದರು. ಆ ಜೀವ ಪುಸ್ತಕದಲ್ಲಿ "ಕ್ಷಮಿಸಲ್ಪಟ್ಟವನು"ಎಂಬ ಮಾತನ್ನು ಮಾತ್ರ ದೊಡ್ಡದಾಗಿ ಬರೆದಿರುವುದನ್ನು ನೋಡಿದರು. ಮೊದಲು ಅವರು ತಾನು ಕ್ಷಮಿಸಲ್ಪಟ್ಟು ಈಗ ಪರಲೋಕದಲ್ಲಿ ಇರುವುದಕ್ಕಾಗಿ ಬಹಳ ಸಂತೋಷಪಟ್ಟರು.
ಆದರೆ ಪರಲೋಕದಲ್ಲಿ ಮತ್ತೊಂದು ವಿಶ್ವಾಸಿಗಳ ಗುಂಪನ್ನು ಕಂಡರು. ಅವರೋ ಹೇಳಲಾಗದ ಮಹಿಮೆ ಹೊಂದಿದವರಾಗಿದ್ದರು. ಯಾರಿವರು? ಈ ಭೂಮಿಯಲ್ಲಿ ತಮ್ಮ ಸ್ವಂತ ಜೀವವನ್ನು ವಿಶೇಷವಾಗಿ ನೆನೆಸದವರು, ಇವರ ಹೇಳಲಾಗದ ಮಹಿಮೆಯನ್ನು ಆಳವಾಗಿ ನೋಡುತ್ತಿದ್ದ ಬೂತ್, ಅವರ ಮೇಲೆ ಹೊಟ್ಟೆಕಿಚ್ಚು ಪಟ್ಟರು. ಯೇಸು ಹತ್ತಿರ ಬಂದು, "ಬೂತ್ ನೀನು ನೋಡುತ್ತಿರುವ ಈ ಹೇಳಲಾಗದ ಮಹಿಮೆಯಲ್ಲಿ ಪ್ರಜ್ವಲಿಸುತ್ತಿರುವ ಜನರೊಂದಿಗೆ ಒಂದಾಗಿ ಸೇರಿಕೊಳ್ಳುವುದಕ್ಕೆ ನಿನ್ನಿಂದ ಎಂದಿಗೂ ಸಾಧ್ಯವಿಲ್ಲ. ಏಕೆ ಗೊತ್ತಾ? ನೀನು ಈ ಮಹಿಮೆಯುಳ್ಳ ಜನರ ಹಾಗೆ ಅಲ್ಲದೆ ಈ ಭೂಮಿಯಲ್ಲಿ ನಿನಗಾಗಿಯೇ ಒಂದು ಜೀವನವನ್ನು ಜೀವಿಸಿದೆ" ಎಂದು ವೇದನೆಯಿಂದ ಹೇಳಿದರು. ವಿಲಿಯಂ ಬೂತ್ ನಿದ್ರೆಯಿಂದ ಎಚ್ಚರವಾದರು. ಆಗ ತಾನು ಇನ್ನೂ ಜೀವಂತವಾಗಿರುವುದನ್ನು, ತಾನು ಕಂಡದ್ದು ಕನಸು ಎಂದು ತಿಳಿದುಕೊಂಡರು. ಅಂದಿನಿಂದ ಉಳಿದ ತನ್ನ ಪೂರ್ತಿ ಜೀವನವನ್ನು ಸ್ವಾರ್ಥವಿಲ್ಲದೆ ತನ್ನ ದೇವರಿಗಾಗಿಯೇ ಜೀವಿಸುವಂತೆ ತೀರ್ಮಾನ ಮಾಡಿಕೊಂಡರು.
ನಮ್ಮಲ್ಲಿ ಅನೇಕರು ಕ್ರಿಸ್ತನನ್ನು ಅಂಗೀಕರಿಸಿದ್ದೇವೆ, ರಕ್ಷಣೆ ಹೊಂದಿದ್ದೇವೆ, ಅಭಿಷೇಕ ಹೊಂದಿದ್ದೇವೆ, ಆಲಯಕ್ಕೆ ಹೋಗುತ್ತಿದ್ದೇವೆ, ಕಾಣಿಕೆಯನ್ನು ಕೊಡುತ್ತಿದ್ದೇವೆ, ಪರಲೋಕಕ್ಕೆ ಹೋಗಿಬಿಡುತ್ತೇವೆ ಎಂಬ ನಂಬಿಕೆಯೂ ಇದೆ. ಅವೆಲ್ಲವನ್ನು ದಾಟಿ ಒಂದು ಉತ್ತಮವಾದ ಕ್ರೈಸ್ತ ಸತ್ಯವೂ ಇದೆ. ಅದು ಏನು? "ಒಬ್ಬನು ನನ್ನ ಹಿಂದೆ ಬರಲು ಬಯಸುವುದಾದರೆ ತನ್ನನ್ನು ತಾನು ನಿರಾಕರಿಸಿ, ನನ್ನ ಶಿಲುಬೆಯನ್ನು ಅನುದಿನವು ಎತ್ತಿಕೊಂಡು, ನನ್ನನ್ನು ಹಿಂಬಾಲಿಸಲಿ." ಎಂಬುದೇ. ಕ್ರಿಸ್ತನು ನನ್ನೊಳಗೆ ಜೀವಿಸುತ್ತಿದ್ದಾರೆ ಎಂದು ಇನ್ನೂ ಸ್ವಾರ್ಥವನ್ನು ಒರಗಿಕೊಂಡವರಾಗಿ ನಮ್ಮನ್ನು ನಿರಾಕರಿಸಿದವರಾಗಿ ಕಾಣುತ್ತಿದ್ದೇವೆ ಎಂಬುದೇ ವಿಷಯ.
ಪ್ರಿಯರೇ! ನಮ್ಮ ಹೃದಯದಲ್ಲಿ ಈಗಿನ ಆಶೀರ್ವಾದಗಳಿಗೂ ಮೀರಿದ ಕ್ರಿಸ್ತನ ಆಲೋಚನೆ ಇದೆಯಾ? ನಮಗಾಗಿಯೇ ನಾವು ಜೀವಿಸಿದ್ದು ಸಾಕು, ಸ್ವಾರ್ಥವಿಲ್ಲದಂತೆ ಕ್ರಿಸ್ತನ ಆಲೋಚನೆಯೊಂದಿಗೆ ಜೀವಿಸೋಣ. ಈ ಹೇಳಲಾಗದ ಮಹಿಮೆಯುಳ್ಳ ಕೂಟದೊಂದಿಗೆ ನಾವು ಕಾಣಲ್ಪಡಲು ಪ್ರಯಾಸ ಪಡೋಣ. ಒಂದೇ ಒಂದು ಜೀವನ ಅದನ್ನು ನಮಗಾಗಿಯೇ ಜೀವಿಸಿ, ನಮ್ಮ ಸಂಪಾದನೆಯನ್ನು ನಾವೇ ಅನುಭವಿಸಿ ಮತ್ತೊಬ್ಬರ ಗೌರವ ಹೊಗಳಿಕೆಯನ್ನು ಹೊಂದಿ ಜೀವಿಸಿದ ಜೀವನವನ್ನು ಬಿಟ್ಟು, ತ್ಯಾಗ ದೊಂದಿಗೆ ಕ್ರಿಸ್ತನ ಆಲೋಚನೆಗಳಿಂದ ತುಂಬಿದ ಜೀವನವನ್ನು ಜೀವಿಸಿ ಮುಗಿಸೋಣ ಆಮೆನ್. ಹಲ್ಲೆಲೂಯ!
- Mrs.ಶಶಿಕಲಾ ಪರಮಶಿವಂ
ಪ್ರಾರ್ಥನಾ ಅಂಶ:-
ತಮಿಳ್, ಇಂಗ್ಲಿಷ್, ಹಿಂದಿ, ತೆಲುಗು, ಕನ್ನಡ, ಮಳೆಯಾಳಂ, ಒಡಿಯ ಈ 7 ಭಾಷೆಗಳಲ್ಲಿ ಹೊರಬರುತ್ತಿರುವ ನಮ್ಮ ದೈನಂದಿನ ಧ್ಯಾನ ಸಂದೇಶದ ಮೂಲಕ ಅನೇಕರು ಪುನರುಜ್ಜೀವನಗೊಳ್ಳಲು ಪ್ರಾರ್ಥಿಸೋಣ.
ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.
ತಮಿಳಿಗಾಗಿ +919444011864
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482