Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 09.07.2024
Share:

By Village Missionary Movement

Tuesday, 09-Jul-2024

ಧೈನಂದಿನ ಧ್ಯಾನ(Kannada) – 09.07.2024

 

ನಂಬಿಕೆಯಿಂದ ತಪ್ಪಿಸಲ್ಪಟ್ಟರು

 

"ಬೆಂಕಿಯ ಬಲವನ್ನು ಆರಿಸಿದರು; ಕತ್ತಿಯ ಬಾಯಿಗೆ ತಪ್ಪಿಸಿಕೊಂಡರು." - ಇಬ್ರಿಯ 11:34

 

ಸಭೆಯಲ್ಲಿರುವ ಸತ್ಯವೇದಕ್ಕೆ ವಿರುದ್ಧವಾಗಿರುವ ವಿಷಯಗಳನ್ನು ಎತ್ತಿ ತೋರಿಸಿದ್ದಕ್ಕಾಗಿ ಮಾರ್ಟಿನ್ ಲೂಥರ್ ಅವರನ್ನು ಎಲ್ಲಾ ಚರ್ಚ್ ಜವಾಬ್ದಾರಿಗಳಿಂದ ಬಹಿಷ್ಕರಿಸಲಾಯಿತು. ಅವರ ವಿರುದ್ಧ ಇನ್ನೂ ಅನೇಕ ಆರೋಪಗಳನ್ನು ಹೊರಿಸಲಾಯಿತು. ಮಾರ್ಟಿನ್ ಲೂಥರ್ ಒಂದು ದಿನ ಕಾಡಿನಲ್ಲಿದ್ದಾಗ ಐದು ಯೋಧರು ಅವರನ್ನು ಕಂಡುಹಿಡಿದುಬಿಟ್ಟರು. ನಂಬಿಕೆಯ ವೀರನಾಗಿದ್ದ ಲೂಥರ್ ಸೈನಿಕರಿಗೆ ಹೆದರಲಿಲ್ಲ. ಕ್ರಿಸ್ತನಲ್ಲಿ ನಂಬಿಕೆಯುಳ್ಳವರಾಗಿ, ಪ್ರಾರ್ಥಿಸಿ ಧೈರ್ಯದಿಂದ ಸೈನಿಕರೊಂದಿಗೆ ಮಾತನಾಡಲು ಪ್ರಾರಂಭಿಸಿದರು. ಅವರೂ ಕೂಡ ತಮ್ಮ ಕೆಲಸ ಮರೆತು ಕಾಲ ಕಳೆದು ಹೋಗುವುದನ್ನು ತಿಳಿಯದೆ ಬಹಳ ಹೊತ್ತು ಮಾತನಾಡುತ್ತಾ ತಮ್ಮ ಆತ್ಮಗಳಲ್ಲಿ ಉಲ್ಲಾಸದಿಂದ ಮರಳಿದರು. ಆ ದಿನ ಲೂಥರ್ ಕಾಪಾಡಲ್ಪಟ್ಟರು. ಅವರು ತನ್ನ ಜೀವನದಲ್ಲಿ ಅನೇಕ ಬಾರಿ ಬದುಕುಳಿಯಲು ಕಾರಣವೆಂದರೆ "ನಂಬಿಕೆಯಿಂದಲೇ ನೀತಿವಂತನು ಬದುಕುತ್ತಾನೆ" ಎಂಬ ಗುರಾಣಿಯಿಂದ!

 

ರಾಜನನ್ನು ಹೊರತುಪಡಿಸಿ ಬೇರೆ ದೇವರನ್ನು ಆರಾಧಿಸಬಾರದು ಎಂದು ಪತ್ರದಲ್ಲಿ ಬರೆದು ರಾಜನಿಂದ ಮುದ್ರೆ ಹಾಕಲ್ಪಟ್ಟಿರುವುದನ್ನು ತಿಳಿದಿದ್ದರೂ ದಾನಿಯೇಲನು‌ ನಂಬಿಕೆಯಿಂದ ಮೂರು ಬಾರಿಯೂ ಮೊದಲು ಮಾಡುತ್ತಿದ್ದಂತೆಯೇ ಪ್ರಾರ್ಥಿಸಿದರು. ಸಿಂಹದ ಗುಹೆಯಲ್ಲಿ ಹಾಕಲ್ಪಟ್ಟಾಗಲೂ ಪ್ರಾರ್ಥಿಸಿದರು. ಆದುದರಿಂದ ದಾನಿಯೇಲನ ದೇವರೇ ಜೀವಂತ ದೇವರೆಂದು ಆ ದೇಶದ ಜನರು ತಿಳಿದುಕೊಂಡರು. ಅಂತೆಯೇ, ಶದ್ರಕ್, ಮೇಷಕ್ ಮತ್ತು ಅಬೇದ್ನೆಗೊ ಚಿನ್ನದ ಪ್ರತಿಮೆಯನ್ನು ಆರಾಧಿಸಲಿಲ್ಲ. ಅವರು ದೇವರಲ್ಲಿ ಸ್ಥಿರರಾಗಿದ್ದರು. ಬೆಂಕಿಯ ತೀವ್ರತೆಯು ಏಳು ಪಟ್ಟು ಹೆಚ್ಚಿಸಲ್ಪಟ್ಟರೂ ಅದರಿಂದ ತಪ್ಪಿಸಲ್ಪಟ್ಟರು. ಎಲ್ಲೆಲ್ಲಾ ನಂಬಿಕೆಯಿಂದ ಜನರು ದೇವರಿಗಾಗಿ ವೈರಾಗ್ಯದಿಂದ ಇದ್ದಾರೋ ಅಲ್ಲೆಲ್ಲಾ ದೇವರು ಅವರನ್ನು ರಕ್ಷಿಸಲು ತನ್ನ ದೂತನನ್ನು ಕಳುಹಿಸಿ ಕಾಪಾಡಿದರು.

 

ಪ್ರಿಯರೇ! ನಮ್ಮ ಜೀವನವೆಂಬ ಹಡಗಿನಲ್ಲಿ ಶೋಧನೆ, ವೇದನೆ, ಇಕಕಟ್ಟಿನ ಸಮಯದಲ್ಲಿ ನಾವು ನಂಬಿಕೆಯ ಲಂಗುರವನ್ನು ಹಾಕಿ, ಅದನ್ನು ನಮ್ಮ ಬಾಯಿಂದ ಅರಿಕೆ ಮಾಡಿ ದೇವರ ಕಡೆಗೆ ನೋಡಿದಾಗ, ಆತನು ನಮ್ಮನ್ನು ಅವುಗಳಿಂದ ಅದ್ಭುತವಾಗಿ, ಅತಿಶಯವಾಗಿ ಕಾಪಾಡುತ್ತಾರೆ. ಅಷ್ಟೇ ಅಲ್ಲ ನಮ್ಮ ಸುತ್ತಲಿರುವವರೂ ಸಹ ನಮ್ಮ ದೇವರ ಶಕ್ತಿಯನ್ನು ಅರಿತುಕೊಳ್ಳುವಂತೆ ಮಾಡುತ್ತಾರೆ. 1 ಯೋಹಾನ 5:4 ರಲ್ಲಿ "ಲೋಕವನ್ನು ಜಯಿಸಿದಂಥದು ನಮ್ಮ ನಂಬಿಕೆಯೇ" ಎಂದು ಓದುತ್ತೇವೆ. ನಂಬಿಕೆಯನ್ನು ಹೆಚ್ಚಿಸಿಕೊಳ್ಳೋಣ. ಲೋಕದಲ್ಲಿ ಬರುವ ತೊಂದರೆ, ಆಪತ್ತು, ಕಷ್ಟ, ಸಂಕಟಗಳಿಂದ ಮುಕ್ತಿ ಪಡೆದು ಶಾಂತಿಯುತ ಜೀವನ ನಡೆಸೋಣ.  

- Mrs. ಜಾಸ್ಮಿನ್ ಪಾಲ್

 

ಪ್ರಾರ್ಥನಾ ಅಂಶ:

ಹಸಿದವರಿಗೆ ಅನ್ನ ನೀಡುವ ಯೋಜನೆಯ ಮೂಲಕ ಪ್ರಯೋಜನ ಪಡೆದವರು ರಕ್ಷಣೆ ಹೊಂದುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş matbet giriş sahabet onwin bets10 bets10 giriş bets10 güncel giriş betcio atlasbet casibom meritking perabet casibom holiganbet galabet casibom padişahbet padişahbet giriş grandpashabet jojobet tambet grandpashabet jojobet nesinecasino betbey cratosroyalbet grandpashabet betpuan cashwin matbet meritking perabet perabet giriş instagram ban service betsilin betsilin giris pashagaming pashagaming giris gorabet gorabet giris kralbet holiganbet grandpashabet grandpashabet giriş https://tr.holiganbet-30temmuz.art/ çarkbet çarkbet giriş